ನವ ದೆಹಲಿ : ನೀವು ಆದಾಯ ತೆರಿಗೆ ದಾಖಲಿಸುತ್ತಿದ್ದರೆ, ಬರುವ ಜುಲೈ ನಿಂದ ಹೆಚ್ಚು ಟಿಡಿಎಸ್ ಅಥವಾ ಟ್ಯಾಕ್ಸ್ ನನ್ನು ಪಾವತಿಸಬೇಕಾಗಲಿದೆ.
ಫೈನಾನ್ಸ್ ಆಕ್ಟ್ 2021ರ ಪ್ರಕಾರ ಒಂದು ವೇಳೆ ತೆರಿಗೆ ಪಾವತಿದಾರರು ಕಳೆದ ಎರಡು ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ ಪಾವತಿಸಿಲ್ಲ ಎಂದಾದರೆ, ಹೆಚ್ಚು ಟಿಡಿಎಸ್ ಹಾಗೂ ತೆರಿಗೆಯನ್ನು ಪಾವತಿಸಬೇಕು.
ಇದನ್ನೂ ಓದಿ : ರಾಜ್ಯಕ್ಕೆ ತಕ್ಷಣ 50 ಸಾವಿರ ಆಂಪೋಟೆರಿಸಿನ್ ಬಿ ಪೂರೈಸಲು ಈಶ್ವರ ಖಂಡ್ರೆ ಆಗ್ರಹ
ಕಳೆದ ಎರಡು ವರ್ಷಗಳಲ್ಲಿ ಟಿಡಿಎಸ್ ಅಥವಾ ಟಿಸಿಐ ನ ಒಟ್ಟಾರೆಯ ಮೊತ್ತ 50,000 ಅಥವಾ ಅದಕ್ಕಿಂತ ಮಿಕ್ಕಿ ಇದ್ದರೇ, ಆ ಒಟ್ಟು ಮೊತ್ತಕ್ಕೆ ಅನುಗುಣವಾಗಿ ಟಿಡಿಎಸ್ ಪಾವತಿಸಬೇಕಿದೆ.
ಇನ್ನು ಈ ಟಿಡಿಎಸ್ ಹೊಸ ನಿಯಮವು ಬರುವ ಜುಲೈ ನಿಂದ ಜಾರಿಗೆ ಬರಲಿದ್ದು, ಈ ನಿಯಮದ ಅನುಸಾರ, ಆದಾಯ ತೆರಿಕೆ ಕಾಯ್ದೆ 1961 ನ ಸೆಕ್ಷನ್ 206ಎಬಿ ಅಡಿ ಆದಾಯ ತೆರಿಗೆ ಕಾನೂನಿನಲ್ಲಿರುವ ನಿಮಗಳ ಅನುಸಾರ ದುಪ್ಪಟ್ಟು ಅಥವ ಚಾಲ್ತಿಯಲ್ಲಿರುವ ದರಕ್ಕಿಂತ ದುಪ್ಪಟ್ಟು ಅಥವಾ ಶೇ.5 ಕ್ಕಿಂತ ಹೆಚ್ಚಾಗಿರುವ ಲೆಕ್ಕದಲ್ಲಿ ಟಿಡಿಎಸ್ ಬೀಳುವ ಸಾಧ್ಯತೆ ಇದೆ.
ಸೆಕ್ಷನ್ 206 ಎಬಿ ಅಡಿಯಲ್ಲಿ ಅನಿವಾಸಿ ತೆರಿಗೆದಾರರು ಭಾರತದಲ್ಲಿ ಶಾಶ್ವತ ಪ್ರತಿಷ್ಠಾನ ಹೊಂದಿರದವರಿಗೂ ಇದು ಅನ್ವಯಿಸುವುದಿಲ್ಲ.
ಇದನ್ನೂ ಓದಿ : ಅನಧಿಕೃತ ಮೀನಿನ ಗೂಡಂಗಡಿ ತೆರವು ಪ್ರಕರಣ : ದೂರಿಗೆ ಪ್ರತಿ ದೂರು ದಾಖಲು