Advertisement

NDA ತೊರೆವ TDP ನಿರ್ಧಾರ ದುರದೃಷ್ಟಕರ, ಏಕಪಕ್ಷೀಯ: ಅಮಿತ್‌ ಶಾ

11:23 AM Mar 24, 2018 | Team Udayavani |

ಹೈದರಾಬಾದ್‌ : ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ಒತ್ತಾಯಿಸಿ ಎನ್‌ಡಿಎ ಕೂಟದಿಂದ ಟಿಡಿಪಿ ಹೊರಬಿದ್ದಿರುವುದು ದುರದೃಷ್ಟಕರ ಮತ್ತು ಏಕಪಕ್ಷೀಯ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಇಂದು ಶನಿವಾರ ಹೇಳಿದ್ದಾರೆ. 

Advertisement

ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ಬರೆದಿರುವ ಪತ್ರದಲ್ಲಿ ಅಮಿತ್‌ ಶಾ ಅವರು “ಎನ್‌ಡಿಎ ತೊರೆಯುವ ಟಿಡಿಪಿ ನಿರ್ಧಾರವನ್ನು ಸಂಪೂರ್ಣವಾಗಿ ರಾಜಕೀಯ ಉದ್ದೇಶದಿಂದ ಕೈಗೊಳ್ಳಲಾಗಿದೆಯೇ ಹೊರತು ಅಭಿವೃದ್ಧಿ ಕುರಿತ ಕಳಕಳಿಯಿಂದ ಅಲ್ಲ ಎಂದು ನಾನು ಹೇಳಲು ಬಯಸುತ್ತೇನೆ’ ಎಂದು ಹೇಳಿದ್ದಾರೆ. 

ಆಂಧ್ರ ಪ್ರದೇಶ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಅಮಿತ್‌ ಶಾ ಪತ್ರದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next