Advertisement

ಕೇಂದ್ರ ಸಂಪುಟ ತೊರೆದ ವಾರದ ಬಳಿಕ ಟಿಡಿಪಿ ಎನ್‌ಡಿಎಗೆ ಗುಡ್‌ಬೈ

11:37 AM Mar 16, 2018 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಸಂಪುಟವನ್ನು ತೊರೆದ ಒಂದು ವಾರದ ತರುವಾಯ ಇಂದು ಶುಕ್ರವಾರ ಪಕ್ಷದ ಪಾಲಿಟ್‌ಬ್ಯೂರೋದಲ್ಲಿ ಕೈಗೊಳ್ಳಲಾದ ಸರ್ವಾನುಮತದ ನಿರ್ಧಾರದ ಪ್ರಕಾರ ತೆಲುಗು ದೇಶಂ ಪಕ್ಷ (ಟಿಡಿಪಿ) ಎನ್‌ಡಿಎ ಮೈತ್ರಿಕೂಟದಿಂದ ಹೊರ ಬಂದಿದೆ. 

Advertisement

ಆಂಧ್ರ ಪ್ರದೇಶಕ್ಕೆ 12,000 ಕೋಟಿ ರೂ. ನೀಡಿದ ಬಳಿಕದಲ್ಲಿ ಇನ್ನಷು ಹೆಚ್ಚುವರಿ ಮೊತ್ತವನ್ನು ನರೇಂದ್ರ ಮೋದಿ ಸರಕಾರ ನೀಡದಿದ್ದ ಕಾರಣ ಬಿಜೆಪಿ ಮತ್ತು ಟಿಡಿಪಿ ಅತ್ಯಂತ ತೆಳುವಾದ ಗೆರೆಯ ಮೇಲೆ ಹೆಜ್ಜೆ ಹಾಕುತ್ತಿದ್ದವು. 

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯನ್ನು ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರಕಾರ ಕಳೆದ ನಾಲ್ಕು ವರ್ಷಗಳಿಂದ ಆಗ್ರಹಿಸುತ್ತಾ ಬಂದಿತ್ತು. 

“ನಾಲ್ಕು ವರ್ಷಗಳಿಂದಲೂ ನಾವು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸುತ್ತಿದ್ದೆವು. ರಾಜ್ಯ ವಿಭಜನೆಯ ಬಳಿಕ ಆಂಧ್ರದ ಆದಾಯ ಮೂಲಗಳೆಲ್ಲ ಬತ್ತಿ ಹೋಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿತ್ತು. ಪ್ರಧಾನಿ ಮೋದಿ ಅವರು ನಮ್ಮ ಬೇಡಿಕೆಯನ್ನು ಮನ್ನಿಸದೆ ನಮಗೆ ಅನ್ಯಾಯ ಎಸಗಿದ್ದಾರೆ’ ಎಂದು ಚಂದ್ರಬಾಬು ನಾಯ್ಡು ಹೇಳಿದರು. 

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಷಯದಲ್ಲಿ  ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲ್ಪಟ್ಟಲ್ಲಿ ನಾವದನ್ನು ಬೆಂಬಲಿಸುತ್ತೇವೆ ಎಂದು ಟಿಡಿಪಿ ಮುಖ್ಯಸ್ಥ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿರುವ ಚಂದ್ರಬಾಬು ನಾಯ್ಡು ಇಂದು ಗುರುವಾರ ಹೇಳಿದ್ದರು. ಯಾರೇ ಆದರೂ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದಲ್ಲಿ ನಾವು ಅದನ್ನು ಬೆಂಬಲಿಸುತ್ತೇವೆ ಎಂದು ನಾಯ್ಡು ಹೇಳಿದ್ದರು. 

Advertisement

“ಟಿಡಿಪಿ ಎನ್‌ಡಿಎ 1ರ ಭಾಗವಾಗಿತ್ತು. ನಾವು ಅಧಿಕಾರಕ್ಕಾಗಿ ಆಸೆ ಪಟ್ಟಿಲ್ಲ. ವಾಜಪೇಯಿಜೀ ಅವರು ಟಿಡಿಪಿಗೆ ಆರು ಸಚಿವ ಪದವನ್ನು ಕೊಟ್ಟಿದ್ದರು; ಆದರೆ ನಾವದನ್ನು ತೆಗೆದುಕೊಳ್ಳಲಿಲ್ಲ. ವಾಜಪೇಯಿಜೀ ಅವರ ಆಡಳಿತಾವಧಿಯಲ್ಲಿ ಅವರು ನಮ್ಮೊಂದಿಗೆ ಸಮಾಲೋಚಿಸಿ ನಮ್ಮ ಸಲಹೆಗಳನ್ನು ಕೇಳುತ್ತಿದ್ದರು. ಗೋಲ್ಡನ್‌ ಕ್ವಾಡ್ರಿಲ್ಯಾಟರಲ್‌ ಯೋಜನೆಯು ನಮ್ಮೊಂದಿಗಿನ ಚರ್ಚೆಯ ಫ‌ಲಶ್ರುತಿಯಾಗಿತ್ತು ಎಂದು ನಾಯ್ಡು ಅವರು ರಾಜ್ಯ ವಿಧಾನಸಭೆಯಲ್ಲಿ ಹೇಳಿದ್ದರು.

ವೈಎಸ್‌ಆರ್‌ಸಿಪಿ ಲೋಕಸಭೆಯಲ್ಲಿ  ಇದೇ ಶುಕ್ರವಾರ ಮಂಡಿಸಲಿರುವ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ಪಡೆಯುವ ನಿಟ್ಟಿನಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸಂಸದ ವೈ ವಿ ಸುಬ್ಟಾ ರೆಡ್ಡಿ ಅವರು ಇಂದು  ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಸಿಪಿಎಂ ನ ಸೀತಾರಾಮ ಯೆಚೂರಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿಯಾಗಿ ಅವರಿಗೆ, ಅವಿಶ್ವಾಸ ಗೊತ್ತುವಳಿಗೆ ಬೆಂಬಲ ಕೋರುವ ಜಗನ್‌ಮೋಹನ್‌ ರೆಡ್ಡಿ ಅವರ ಪತ್ರವನ್ನು ಕೊಟ್ಟಿದ್ದಾರೆ. 

ಅವಿಶ್ವಾಸ ಗೊತ್ತುವಳಿಯ ಬಳಿಕವೂ ಕೇಂದ್ರ ಸರಕಾರ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದಿದ್ದರೆ ನಮ್ಮ ಪಕ್ಷದ ಎಲ್ಲ ಸಂಸದರು 2018ರ ಎಪ್ರಿಲ್‌ 6ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವರು ಎಂಬುದಾಗಿ ರೆಡ್ಡಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next