Advertisement

Sabarimala: ಭಕ್ತರ ಸಂಖ್ಯೆ 15 ಲಕ್ಷದಷ್ಟು ಹೆಚ್ಚಾಗುವ ನಿರೀಕ್ಷೆ

01:34 AM Dec 11, 2024 | Team Udayavani |

ಶಬರಿಮಲೆ: ದಿನದಿಂದ ದಿನಕ್ಕೆ ಇತರ ರಾಜ್ಯಗಳ ಭಕ್ತರ ಒಳಹರಿವಿನಲ್ಲಿ ತೀವ್ರ ಹೆಚ್ಚಳದಿಂದ ಹಿಂದಿನ ತೀರ್ಥಯಾತ್ರೆಗೆ ಹೋಲಿಸಿದರೆ ಕೇರಳದ ಶಬರಿಮಲೆಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಸುಮಾರು 15 ಲಕ್ಷದಷ್ಟು ಹೆಚ್ಚಳವಾಗಲಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಂದಾಜಿಸಿದೆ.

Advertisement

ಹೆಚ್ಚಿನ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲು ನೀಲಕಲ್‌ನಿಂದ ಸನ್ನಿಧಾನದವರೆಗೆ ಹೆಚ್ಚುವರಿ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ.

ದಟ್ಟಣೆಯನ್ನು ಕಡಿಮೆ ಮಾಡಲು ಪಂಪಾ ಮತ್ತು ನೀಲಕಲ್‌ನಲ್ಲಿ ಹೆಚ್ಚುವರಿ ಪಾರ್ಕಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಟ್ರಾವಂಕೂರು ದೇವಸ್ವಂ ಮಂಡಳಿ ಮುಖ್ಯಸ್ಥ ಪಿ.ಎಸ್‌.ಪ್ರಶಾಂತ್‌ ಹೇಳಿದ್ದಾರೆ.

ಕಳೆದ ವರ್ಷ ಎರಡು ತಿಂಗಳ ಅವಧಿಯಲ್ಲಿ 50 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಇದರಿಂದ 357 ಕೋಟಿ ರೂ.ಗಳಷ್ಟು ಆದಾಯ ಬಂದಿತ್ತು. ಹಿರಿಯ ಮಹಿಳೆಯರು ಮತ್ತು ಮಕ್ಕಳಿಗಾಗಿ ಸೌಲಭ್ಯ ಕೇಂದ್ರವನ್ನು ಪಂಪಾದಲ್ಲಿ ತೆರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next