ನವದೆಹಲಿ: ದೇಶದ ಹಲವು ಟೆಕ್ ಕಂಪನಿಗಳು ಉದ್ಯೋಗ ಕಡಿತಕ್ಕೆ ಮುಂದಾಗಿರುವ ನಡುವೆಯೇ ಭಾರತದ ಅತಿದೊಡ್ಡ ಐಟಿ ಸೇವಾ ಕಂಪನಿ ಟಾಟಾ ಕನ್ಸೆಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ತನ್ನ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ್ದು,ಬಹುಪಾಲು ಉದ್ಯೋಗಿಗಳಿಗೆ ಶೇ.100 ವೇರಿಯಬಲ್ ವೇತನ ಪಾವತಿಸುವುದಾಗಿ ಘೋಷಿಸಿದೆ.
ಡಿ. 31ಕ್ಕೆ ಕೊನೆಗೊಂಡ 3ನೇ ತ್ತೈಮಾಸಿಕದಲ್ಲಿ ಸಿ2 ಗ್ರೇಡ್ ಹಾಗೂ ಆ ದರ್ಜೆಗೆ ಸಮನಾಗಿರುವ ಎಲ್ಲಾ ಉದ್ಯೋಗಿಗಳಿಗೂ ಶೇ.100 ವೇರಿಯಬಲ್ ವೇತನ ಪಾವತಿಸಲಾಗುವುದು ಎಂದು ಸಂಸ್ಥೆಯ ಎಚ್‌ಆರ್ ವಿಭಾಗದ ಮುಖ್ಯಸ್ಥರಾದ ಮಿಲಿಂದ್ ಲಕ್ಕದ್ ತಿಳಿಸಿದ್ದಾರೆ.
ಸಿ2 ಗ್ರೇಡ್ ಮೀರಿದ ಸಿ3 ದರ್ಜೆಯ ಹಾಗೂ ಅದಕ್ಕೆ ಸಮನಾದ ಉದ್ಯೋಗಿಗಳಿಗೆ ವ್ಯಾಪಾರ ಘಟಕದ ಕಾರ್ಯಕ್ಷಮತೆಯನ್ನು ಆಧರಿಸಿ ಶೇ.100 ಅಥವಾ ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಮಟ್ಟದ ವೇರಿಯೇಬಲ್ ಮೊತ್ತವನ್ನು ಪಾವತಿ ಮಾಡುವುದಾಗಿ ಟಿಸಿಎಸ್ ಹೇಳಿದೆ.