Advertisement

ಟಿಸಿ ಸ್ಥಳಾಂತರ ಜಟಾಪಟಿ: ಭಯದಲ್ಲಿ ಸಾರ್ವಜನಿಕರು

01:02 PM May 15, 2019 | Team Udayavani |

ಕುಷ್ಟಗಿ:ತಾಲೂಕಿನ ಗುಮಗೇರಾ ಗ್ರಾಮದ ಹೊರವಲಯದಲ್ಲಿ ನೀರಿನ ತೊಟ್ಟಿ, ವಿದ್ಯುತ ಪರಿವರ್ತಕ (ಟಿಸಿ) ಎರಡು ಅಕ್ಕಪಕ್ಕದಲ್ಲಿದ್ದು ಅಪಾಯಕಾರಿ ಎನ್ನುವುದು ಅರಿವಿದ್ದರೂ ಗ್ರಾಪಂ ಹಾಗೂ ಜೆಸ್ಕಾಂ ಇವೆರಡನ್ನು ಸ್ಥಳಾಂತರಿಸದೇ ನಿರ್ಲಕ್ಷಿಸಿದೆ.

Advertisement

ಕುಷ್ಟಗಿ-ತಾವರಗೇರಾ ರಾಜ್ಯ ಹೆದ್ದಾರಿಯಲ್ಲಿರುವ ನೀರಿನ ತೊಟ್ಟಿ ಹಾಗೂ ಟಿಸಿ ಎರಡು ಅಕ್ಕಪಕ್ಕದಲ್ಲಿವೆ. ಇವುಗಳನ್ನು ಯಾವುದು ಮೊದಲು ಅಳವಡಿಸಿದೆ ಎನ್ನುವುದು ಇಲ್ಲಿ ಇನ್ನೂ ಗೊಂದಲವಿದೆ. ಹೀಗಾಗಿ ಗ್ರಾಪಂ ನೀರಿನ ತೊಟ್ಟಿಯನ್ನು, ಜೆಸ್ಕಾಂ ಟಿಸಿಯನ್ನು ಸ್ಥಳಾಂತರಿಸಲು ಹಿಂದೇಟು ಹಾಕುತ್ತಿದೆ. ಟಿಸಿಯನ್ನು ಸ್ಥಳಾಂತರಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಅರ್ಜಿ ಸಲ್ಲಿಸಿದಲ್ಲಿ ಜೆಸ್ಕಾಂ ಸ್ಥಳಾಂತರ ಖರ್ಚು ವೆಚ್ಚದಲ್ಲಿ ಶೇ. 10ರಷ್ಟು ಪಾವತಿಸಿದಲ್ಲಿ ಕ್ರಮ ಕೈಗೊಳ್ಳಲಿದೆ. ಇಲ್ಲವೇ ತೀರ ಅಪಾಯಕಾರಿಯಾಗಿದ್ದರೆ ಜೆಸ್ಕಾಂ ಸ್ಥಾನಿಕ ಪರಿಸ್ಥಿತಿ ಅವಲೋಕಿಸಿ ಸ್ಥಳಾಂತರಿಸಬೇಕು. ಆದರೆ ಜೆಸ್ಕಾಂ ಹಾಗೂ ಗ್ರಾಪಂ ಯಾವುದೇ ಕ್ರಮ ಕೈಗೊಂಡಿಲ್ಲ.

ನೀರು ಪೂರೈಸಿದ ವೇಳೆ ನೀರು ಭರ್ತಿಯಾಗಿ ಹರಿಯುವ ಸಂದರ್ಭದಲ್ಲಿ ನೀರು ಟಿಸಿಗೆ ಸಿಂಪರಣೆಯಾಗುತ್ತಿದ್ದು, ವಿದ್ಯುತ್‌ ಪ್ರವಹಿಸುವ ಸಾಧ್ಯತೆಗಳಿವೆ.ದುರದೃಷ್ಟವಶಾತ್‌ ಇದುವರೆಗೂ ಯಾವುದೇ ಅಹಿತಕರ ಘಟನೆ ಘಟಿಸಿಲ್ಲ. ಅಪಯಕಾರಿ ಘಟನೆ ಸಂಭವಿಸುವ ಮೊದಲೇ ಗ್ರಾಪಂ ಹಾಗೂ ಜೆಸ್ಕಾಂ ಎಚ್ಚೆತ್ತು ಕೊಳ್ಳಬೇಕಿದೆ. ದಿನವೂ ನೀರಿನ ತೊಟ್ಟಿಗೆ ನೀರು ಪೂರೈಸಿದ ವೇಳೆ ಪಕ್ಕದ ಟಿಸಿ ಬಳಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದ್ದು, ನೀರಿಗಾಗಿ ಮಕ್ಕಳನ್ನು ಕಳಿಸುವುದಕ್ಕೆ ಸ್ಥಳೀಯರು ಹಿಂಜರಿಯುತ್ತಿದ್ದಾರೆ ಎಂದು ಸುಖಮುನಿ ಗಡಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next