Advertisement
ಪತಿ, ಪತ್ನಿ ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳಿರುವ ಕುಟುಂಬವನ್ನು ಈ ಯೋಜನೆ ಅಡಿಯಲ್ಲಿ ಕುಟುಂಬ ಎಂದು ಪರಿಗಣಿಸಲಾಗುತ್ತದೆ. ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಇರುವವರಿಗೆ ಮಾತ್ರ ಈ ಸೌಲಭ್ಯ ಲಭ್ಯವಿದೆ. ಮೊದಲ ಕಂತು ಮಾರ್ಚ್ 31ರಂದು ಬಿಡುಗಡೆಯಾಗಲಿದ್ದು, ಎರಡನೇ ಕಂತು ಪಡೆಯಲು ಆಧಾರ್ ನೀಡುವುದು ಕಡ್ಡಾಯವಾಗಿರಲಿದೆ. ಫಲಾನುಭವಿಗಳ ಅರ್ಹತೆಯನ್ನು ಅಳೆಯಲು ಸ್ವಯಂ ಘೋಷಣೆಯೇ ಮಾನದಂಡವಾಗಿರಲಿದ್ದು, ಸ್ವಯಂ ಘೋಷಣೆ ತಪ್ಪಾಗಿದ್ದರೆ ನೀಡಲಾದ ಹಣವನ್ನು ವಾಪಸ್ ಪಡೆಯಲಾಗುತ್ತದೆ.
ಈ ನಡುವೆ, ಕಿಸಾನ್ ಸಮ್ಮಾನ್ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನ ಮಾಡಲು ಸಹಕಾರ ನೀಡುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರು ವುದಾಗಿ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ತಿಳಿಸಿದ್ದಾರೆ. ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಜಾರಿ ಮಾಡಬೇಕೆಂದರೆ, ರಾಜ್ಯಮಟ್ಟದ ಆಡಳಿತ ಯಂತ್ರದಿಂದ ಗ್ರಾಮೀಣ ಮಟ್ಟ ದವರೆಗೆ ಎಲ್ಲರ ಒಳಗೊಳ್ಳುವಿಕೆ ಅಗತ್ಯವಾಗಿರುತ್ತದೆ ಎಂದೂ ಹೇಳಿದ್ದಾರೆ.