Advertisement

ಅಮೆರಿಕದ ಪ್ರವಾಸಿಗರೆದುರು ಟ್ಯಾಕ್ಸಿ ಚಾಲಕರ ಜಗಳ : ಕ್ಷಮೆಯಾಚಿಸಿದ ಗೋವಾ ಶಾಸಕ

10:37 PM Dec 16, 2022 | Team Udayavani |

ಪಣಜಿ: ಪ್ರವಾಸಿಗರ ಕ್ರೂಸ್ ಹಡಗು  (ಡಿಸೆಂಬರ್ 15 ರಂದು ) ಮುರಗಾಂವ್ ಬಂದರಿಗೆ ಆಗಮಿಸಿತ್ತು, ಈ ವೇಳೆ ಅಮೆರಿಕದ ಪ್ರವಾಸಿಗರನ್ನು ಬಂದರಿನಿಂದ ನಗರಕ್ಕೆ ಕರೆದೊಯ್ಯಲು ಟ್ಯಾಕ್ಸಿ ಚಾಲಕರ ನಡುವೆ ಜಗಳವಾಗಿದೆ. ವಿವಾದದಲ್ಲಿ ಅಮೆರಿಕದ ಪ್ರವಾಸಿಗರು ಮಾನಸಿಕ ಯಾತನೆ ಅನುಭವಿಸಿದ್ದಾರೆ ಎಂದು ವಿದೇಶಿ ಪ್ರವಾಸಿಗರು ರಾಯಭಾರ ಕಚೇರಿಗೆ ದೂರು ನೀಡಿದ್ದರಿಂದ ಪ್ರಕರಣ ತಿರುವು ಪಡೆದುಕೊಂಡಿದ್ದು, ಈ ಕುರಿತು ವಾಸ್ಕೊ ಮುರಗಾಂವ್ ಶಾಸಕ ಸಂಕಲ್ಪ್ ಅಮೋಣಕರ್ ಪ್ರವಾಸಿಗರ ಬಳಿ ಕ್ಷಮೆಯಾಚಿಸಿದ್ದಾರೆ.

Advertisement

ವಾಸ್ಕೊ ಮುರಗಾಂವ್ ಶಾಸಕ ಸಂಕಲ್ಪ್ ಅಮೋಣಕರ್ ಇಂದು ಸುದ್ದಿಗೋಷ್ಠಿ ನಡೆಸಿದರು.  ಮುಗಾರ್ಂವ್ ಬಂದರು ಪ್ರದೇಶದ ಕ್ರೂಸ್ ಟರ್ಮಿನಲ್‍ನಲ್ಲಿ ಟ್ಯಾಕ್ಸಿ ಚಾಲಕರು  ಮತ್ತು ಪ್ರವಾಸಿಗರ ನಡುವಿನ ದುರದೃಷ್ಟಕರ ಘರ್ಷಣೆಗಾಗಿ ವಿದೇಶಿ ಪ್ರವಾಸಿಗರಲ್ಲಿ ಶಾಸಕ ಅಮೋಣಕರ್ ಕ್ಷಮೆಯಾಚಿಸಿದರು. ಈ ಘಟನೆಯ ಹೊಣೆಯನ್ನು ಶಾಸಕ ಅಮೋಣಕರ್ ವಹಿಸಿಕೊಂಡಿದ್ದು, ಮುಂದೆ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದರು. ಹೀಗಾಗಿ ಈ ವಿವಾದಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.

 ಗೋವಾದಲ್ಲಿ ಇಂತಹ ಗೂಂಡಾಗಿರಿ ಸಹಿಸುವುದಿಲ್ಲ : ಮುಖ್ಯಮಂತ್ರಿ

ಪ್ರವಾಸಿಗರ ಕಡೆಗೆ ಸ್ಥಳೀಯ ಟ್ಯಾಕ್ಸಿ ಚಾಲಕರ ವರ್ತನೆಯು ಅನುಚಿತವಾಗಿದ್ದು, ಇಂತಹ ವರ್ತನೆಯನ್ನು ಸಹಿಸಲಾಗುವುದಿಲ್ಲ. ಈ ಟ್ಯಾಕ್ಸಿ ಚಾಲಕರು ಬಸ್ ಚಾಲಕನನ್ನು ಥಳಿಸಿದರೆ, ಅವರನ್ನು ಬಂಧಿಸಲಾಗುತ್ತದೆ. ಅಲ್ಲದೆ, ಗೋವಾದಲ್ಲಿ ಇಂತಹ ಗೂಂಡಾಗಿರಿಯನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪಣಜಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next