Advertisement

ಜಿಎಸ್‌ಟಿಯಿಂದ ತೆರಿಗೆಗಳೆಲ್ಲ ಸರಳಗೊಳ್ಳುತ್ತವೆ: ಡಾ|ಸುಬ್ರಹ್ಮಣ್ಯಂ

05:10 AM Jul 20, 2017 | |

ಸುರತ್ಕಲ್‌: ಮಂಗಳೂರು ರಿಫೈನರಿ ಪೆಟ್ರೋಲಿಯಂ ಲಿಮಿಟೆಡ್‌ ವತಿಯಿಂದ ಸರಕು ಮತ್ತು ಸೇವಾ ತೆರಿಗೆಯ ಕುರಿತು ವಿಚಾರ ಸಂಕಿರಣವು ಬುಧವಾರ ಎಂಆರ್‌ಪಿಎಲ್‌  ಸಭಾಂಗಣದಲ್ಲಿ ಜರಗಿತು.

Advertisement

ಕೇಂದ್ರೀಯ ಅಬಕಾರಿ ಇಲಾಖೆಯ ಆಯುಕ್ತ ಡಾ| ಎಂ. ಸುಬ್ರಹ್ಮಣ್ಯ ಮಾತನಾಡಿ, ಜಿಎಸ್‌ಟಿಗೆ ಸುಮಾರು 17 ವರ್ಷಗಳ ಹಿಂದೆಯೇ ರೂಪುರೇಷೆ ಸಿದ್ಧಪಡಿಸಲಾಗಿದ್ದು,  ಈಗ ಜಾರಿಗೆ ಬಂದಿದೆ. ಇದರಿಂದಾಗಿ ನಮ್ಮ ತೆರಿಗೆಗಳೆಲ್ಲ ಸರಳಗೊಳ್ಳುತ್ತದೆ. ಪರಿಣಾಮ  ವಿದೇಶಿ ಸಂಸ್ಥೆಗಳಿಗೂ ನಮ್ಮ ಜತೆ ವ್ಯಾಪಾರ ಮಾಡಲು ಸುಲಭವಾಗುತ್ತದೆ ಎಂದರು.

ವಾಣಿಜ್ಯ ಇಲಾಖಾ ತೆರಿಗೆ ವಿಭಾಗದ ಜಂಟಿ ಆಯುಕ್ತೆ ಎಚ್‌. ಜಿ. ಪವಿತ್ರಾ ಮಾತನಾಡಿ, ಜಿಎಸ್‌ಟಿಯಿಂದ ಹಳೆ ತೆರಿಗೆಗಳೆಲ್ಲ ರದ್ದಾಗಿ ಕೇವಲ ಒಂದೇ ತೆರಿಗೆ ಉಳಿಯುತ್ತದೆ ಎಂದರು.
 
ಎಂಆರ್‌ಪಿಎಲ್‌ ಆಡಳಿತ ನಿರ್ದೇಶಕ ಎಚ್‌. ಕುಮಾರ್‌ ಮಾತನಾಡಿದರು.ಉಪ ಆಯುಕ್ತ  ಶಂಕರ್‌ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖಾ ಅಧಿ ಕಾರಿಗಳು ಜಿಎಸ್‌ಟಿ ಕುರಿತು ಮಾಹಿತಿ ನೀಡಿದರು.

ಆರ್ಥಿಕತೆಗೆ ಹೆಚ್ಚಿನ ಪ್ರಯೋಜನ
ಜಿಎಸ್‌ಟಿ ಅನುಷ್ಠಾನದಿಂದ ಅಲ್ಲಲ್ಲಿ ಚೆಕ್‌ಪೋಸ್ಟ್‌ ರದ್ದಾಗುತ್ತವೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಕೂಡ ಜಿಎಸ್‌ಟಿ ವ್ಯಾಪ್ತಿಯಲ್ಲಿ ಬರಬೇಕು. ಜಿಎಸ್‌ಟಿಯಿಂದ ಆರ್ಥಿಕತೆಗೆ ಹೆಚ್ಚಿನ ಪ್ರಯೋಜನಕಾರಿಯಾಗಲಿದೆ. ಒಂದೇ ತೆರಿಗೆ ಹಾಗೂ ಸೂಕ್ತ ದಾಖಲೆ ಪತ್ರ ಇರಿಸುವುದರಿಂದ ಅಪಾರ ಪ್ರಮಾಣದ ತೆರಿಗೆ ಸೋರಿಕೆ 
ತಡೆಗಟ್ಟಲು ಸಾಧ್ಯ. 

– ಎಚ್‌. ಕುಮಾರ್‌, 
ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next