Advertisement
ಮುಖ್ಯವಾಗಿ, ತೆರಿಗೆಯಲ್ಲಿ ಸಿಗುವ ವಿನಾಯಿತಿಗಳು ಯಾವುವು ಅನ್ನೋದನ್ನೇ ಎಷ್ಟೋಜನ ತಿಳಿದುಕೊಂಡಿರುವುದಿಲ್ಲ. ಎಷ್ಟೋ ಸಲ ದಾನ ಮಾಡಿರುತ್ತೇವೆ. ಅದು 80ಜಿ ಅಡಿ ಬಂದಿರುತ್ತದೆ. ಅದಕ್ಕೆ ಪಡೆದ ರಸೀದಿಯನ್ನು ತೆರಿಗೆಯಲ್ಲಿ ತೋರಿಸಿದರೆ ಮಾಫಿ ಆಗುವುದಿಲ್ಲವೆ?
Related Articles
Advertisement
ಸರ್ಕಸ್‌ಬೇಡ: ಒಂದು ಸತ್ಯ ಗೊತ್ತಿರಬೇಕು. ಬ್ಯಾಂಕಲ್ಲಿ ದುಡ್ಡು ಇಟ್ಟೋರಿಗೆಲ್ಲಾ ತೆರಿಗೆ ತಲೆಯ ಮೇಲೆ ಬಂದು ಕೂರುವುದಿಲ್ಲ. ಇದಕ್ಕೂ ವಿನಾಯಿತಿ ಉಂಟು. ಅಂದರೆ, ಯಾರಿಗೆ ವಾರ್ಷಿಕ ವರಮಾನ ಎರಡೂವರೆ ಲಕ್ಷ ಮೀರುವುದಿಲ್ಲವೋ ಅಂಥವರು 15ಜಿ.
ಎಚ್ ಅರ್ಜಿ ಸಲ್ಲಿಸುವ ಮೂಲಕ ತೆರಿಗೆಯಲ್ಲಿ ವಿನಾಯಿತಿ ಕೇಳಬಹುದು. ಆಗ ನಿಮಗೆ ಬರುವ ಬಡ್ಡಿಯಲ್ಲಿ ಟಿಡಿಎಸ್ ಕಟ್ಟಾಗುವುದಿಲ್ಲ. ಬಹುತೇಕರು, ತಂದೆ, ತಾಯಿ, ಹೆಂಡತಿ- ಹೀಗೆ ಯಾರಿಗೆ ತಿಂಗಳ ಆದಾಯ ಇರುವದಿಲ್ಲವೋ ಅಂಥವರ ಹೆಸರಲ್ಲಿ ಹಣ ಇಟ್ಟಿರುತ್ತಾರೆ. ಆದರೆ ತೆರಿಗೆಯ ಭಯದಿಂದ ಅದನ್ನೂ ಮರೆತು ಹೋಗಿರುತ್ತಾರೆ.
ಇನ್ನೂ ಕೆಲವು ಭೂಪರಿದ್ದಾರೆ. ತಮ್ಮಲ್ಲಿರುವ ಹಣವನ್ನು ತೆರಿಗೆಯ ಕಾರಣದಿಂದಾಗಿ ಅದು ಕಡಿಮೆ ಆಗುತ್ತದೆ ಎಂದು ಹಲವಾರು ಬ್ಯಾಂಕ್‌ಗಳಲ್ಲಿ ಎಫ್.ಡಿ. ಮಾಡಿ ಇಟ್ಟಿರುತ್ತಾರೆ. ಉಳಿತಾಯದ ಲೆಕ್ಕದಲ್ಲಿ ದೊಡ್ಡ ಮೊತ್ತ ಕಾಣಬಾರದು ಅಂತ. ಆದರೆ ಪಾನ್ ನಂಬರ್ ಒಂದೇ ಆಗಿರುವುದರಿಂದ ಇಂಥವರು ತೆರಿಗೆ ಬಲೆಗೆ ಬೀಳುತ್ತಾರೆ. ಇಂಥ ಸರ್ಕಸ್ಸು ಏಕೆ ಬೇಕು?
ಉದ್ಯೋಗ ಬದಲಿಸಿದರೆ: ಆರ್ಥಿಕ ವರ್ಷದಲ್ಲಿ ಕೆಲಸ ಬಿಟ್ಟರೆ ಸಮಸ್ಯೆ ಇಲ್ಲ. ಆದರೆ, ನಡುವೆ ಕೆಲಸ ಬಿಟ್ಟು, ಹೊಸ ಕೆಲಸಕ್ಕೆ ಸೇರಿಕೊಂಡರೆ ಹಳೆ ಕೆಲಸದ ಆದಾಯವನ್ನು ಎಷ್ಟೋ ಜನ ತೆರಿಗೆ ವ್ಯಾಪ್ತಿಗೆ ತರುವುದೇ ಇಲ್ಲ. ಇದರಿಂದ, ಏನೋ ದೊಡ್ಡ ತೆರಿಗೆ ಮೊತ್ತ ಉಳಿದು ಬಿಡುತ್ತದೆ ಅಂತೇನಿಲ್ಲ. ಆದರೂ, ಸಂಬಳದಲ್ಲಿ ಆಗಿರುವ ಬದಲಾವಣೆಯನ್ನು ಹೇಳಿಬಿಡುವುದು ಒಳ್ಳೆಯದು.
ಇದೇ ರೀತಿ, ಹೆಂಡತಿ ಅಥವಾ ಮಕ್ಕಳ ಹೆಸರಿನಲ್ಲಿ ಮಾಡಿರುವ ಹೂಡಿಕೆಗಳನ್ನು, ಅವುಗಳಿಂದ ಬರುವ ಬಡ್ಡಿಯನ್ನು, ಯಜಮಾನನ ತೆರಿಗೆ ರಿಟರ್ನ್ನಲ್ಲಿ ತೋರಿಸಬೇಕು ಅನ್ನೋದು ನಿಯಮ. ಎಷ್ಟೋ ಮಂದಿ ಅವಳು ರಿಟರ್ನ್ ಸಲ್ಲಿಸಲು ಬೇಕಾದಷ್ಟು ವರಮಾನ ಹೊಂದಿಲ್ಲ ಅಂತ ಸುಮ್ಮನಾಗಿ ಬಿಡುತ್ತಾರೆ. ಒಂದು ಪಕ್ಷ ಈ ರೀತಿ ತೆರಿಗೆಪಾವತಿಯಲ್ಲಿ ಚ್ಯುತಿ ಮಾಡಿದ್ದು ಇಲಾಖೆಯ ಗಮನಕ್ಕೆ ಬಂದರೆ ಅದಕ್ಕೆ ಮುಂದೆ ದಂಡಪಾವತಿ ಮಾಡಬೇಕಾಗಬಹುದು.
* ನಿರಂಜನ