Advertisement

ಬಿಸಿಸಿಐಗೆ ಚಾಂಪಿಯನ್ಸ್‌ ಟ್ರೋಫಿ ಆತಿಥ್ಯ ಕೈತಪ್ಪುವ ಭೀತಿ

06:55 AM Feb 11, 2018 | Team Udayavani |

ನವದೆಹಲಿ: ಪ್ರತಿಷ್ಠಿತ ಕ್ರಿಕೆಟ್‌ ಟೂರ್ನಿಗಳಲ್ಲಿ ಒಂದಾದ 2021ರ ಚಾಂಪಿಯನ್‌ ಟ್ರೋಫಿ ಕ್ರಿಕೆಟ್‌ ಭಾರತ ಆತಿಥ್ಯ ವಹಿಸುವುದೆಂದು ನಿರ್ಧಾರವಾಗಿತ್ತು. ಆದರೆ ಭಾರತದಲ್ಲಿ ತೆರಿಗೆ ವಿನಾಯಿತಿ ಇಲ್ಲದಿರುವ ಕಾರಣ ಕೂಟಕ್ಕೆ ಪರ್ಯಾಯ ಜಾಗಗಳನ್ನು ಐಸಿಸಿ ಹುಡುಕುತ್ತಿದೆ. ನಿಗದಿತ ಸಮಯದಲ್ಲಿ ಕೇಂದ್ರ ಸರ್ಕಾರ ಮತ್ತು ಐಸಿಸಿ ನಡುವೆ ಒಪ್ಪಂದವಾಗದಿದ್ದರೆ ಕೂಟ ಬೇರೆಡೆಗೆ ಸ್ಥಳಾಂತವಾಗುವುದು ಖಚಿತವಾಗಿದೆ. 2016ರಲ್ಲಿ ಭಾರತ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ತೆರಿಗೆ ವಿನಾಯಿತಿ ಇಲ್ಲದ ಕಾರಣ ಐಸಿಸಿ ಆದಾಯದಲ್ಲಿ ಕುಸಿತ ಅನುಭವಿಸಿತ್ತು. ಹೀಗಾಗಿ ಚಾಂಪಿಯನ್ಸ್‌ ಟ್ರೋಫಿಗೆ ತೆರಿಗೆ ವಿನಾಯಿತಿಯ ಬೇಡಿಕೆಯನ್ನು ಮುಂದಿಟ್ಟಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next