ಮಂಡ್ಯ: ರಾಜ್ಯ ಸರ್ಕಾರದ ಪೌರಾಡಳಿತ ನಿರ್ದೇಶನಾಲಯ 2021-22ನೇ ಸಾಲಿನಿಂದ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಆಸ್ತಿ ತೆರಿಗೆ ವಿಧಿಸಿ ಜಾರಿಗೊಳಿಸಿದೆ. ಇದು ಮುಂದಿನ ಏಪ್ರಿಲ್‌ತಿಂಗಳಿನಿಂದ ಜಾರಿಗೆ ಬರಲಿದೆ.
ಜಿಎಸ್‌ಡಿಪಿಯ ಶೇ.0.25ರಷ್ಟು ಹೆಚ್ಚುವರಿ ಸಾಲ ಪಡೆಯಲು ಮತ್ತು 15ನೇ ಹಣಕಾಸು ಆಯೋಗದ ಅನುದಾನ ಪಡೆಯುವ ನಿಟ್ಟಿನಲ್ಲಿ ಅರ್ಹರಾಗಲುಮತ್ತು ನಗರ ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕವಾಗಿಸದೃಢಗೊಳಿಸುವ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆಯನ್ನು ಚಾಲ್ತಿ ಸಾಲಿನ ಮಾರುಕಟ್ಟೆ ಮಾರ್ಗಸೂಚಿ ಬೆಲೆಯಆಧಾರದ ಮೇಲೆ ವಿಧಿಸಲು ಸೂಚಿಸಿದೆ.
ಪ್ರಗತಿಗಾಗಿ ತೆರಿಗೆ ದರ ಪರಿಷ್ಕರಣೆ: ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಹಾಗೂ ಅಭಿವೃದ್ಧಿಗೆ ಸಂಪನ್ಮೂಲ ಕ್ರೋಢೀಕರಣ ಮಾಡಲು ತೆರಿಗೆ ದರವನ್ನು ಪರಿಷ್ಕರಿಸಲಾಗಿದೆ. ವಾಸದ ಮತ್ತು ವಾಣಿಜ್ಯೇತರ ಕಟ್ಟಡಗಳಿಗೆ ಸ್ವತ್ತು ತೆರಿಗೆಯನ್ನು ಕಟ್ಟಡದಮೂಲಬೆಲೆಯ ಶೇ.0.2ಕ್ಕಿಂತ ಕಡಿಮೆ ಇಲ್ಲದಂತೆ ಹಾಗೂ ಶೇ.1.5ಕ್ಕಿಂತ ಹೆಚ್ಚಿಗೆ ಇಲ್ಲದಂತೆ ವಿಧಿಸಬೇಕು. ಖಾಲಿ ಭೂಮಿಗೆ ಸಂಬಂಧಪಟ್ಟಂತೆ ತೆರಿಗೆಗೆ ಗುರಿಯಾಗತಕ್ಕ ಭೂಮಿಯ ಮೂಲ ಬೆಲೆಯ ಶೇ.0.2ಕ್ಕಿಂತ ಕಡಿಮೆ ಇಲ್ಲದಂತೆ ಮತ್ತು ಶೇ.0.5ಕ್ಕಿಂತ ಹೆಚ್ಚಿಗೆ ಇಲ್ಲದಂತೆ ವಿಧಿಸುವಂತೆ ನಿರ್ದೇಶನ ನೀಡಿದೆ.
ಆಸ್ತಿ ತೆರಿಗೆ ಹೆಚ್ಚಳಕ್ಕೆ ಸೂಚನೆ: ಸ್ವತ್ತಿನ ಮೂಲ ಮೌಲ್ಯವನ್ನು ಕರ್ನಾಟಕ ಸ್ಟಾಂಪುಗಳ ಅಧಿನಿಯಮ1957ರ ಸೆಕ್ಷನ್ 45ಬಿರಡಿಯಲ್ಲಿ ಪ್ರಕಟಿಸಲಾದ ಚಾಲ್ತಿ ಸಾಲಿನ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿಬೆಲೆಯ ಶೇ.25ರಷ್ಟನ್ನು ಪರಿಗಣಿಸಬೇಕು. ಕಟ್ಟಡಕ್ಕೆ ಹೊಂದಿಕೊಂಡಂತೆ ಇರುವ ಸಾವಿರ ಚದರ ಅಡಿವರೆಗಿನ ಖಾಲಿ ಭೂಮಿಗೆ ವಿನಾಯಿತಿಯನ್ನುನೀಡುವುದು. ಸಾವಿರ ಚದರ ಅಡಿಗಿಂತ ಹೆಚ್ಚಿರುವ ಖಾಲಿ ಭೂಮಿಗೆ ಸ್ವತ್ತು ತೆರಿಗೆಯನ್ನು ಖಾಲಿ ಭೂಮಿಗೆವಿಧಿಸುವ ತೆರಿಗೆ ದರದಲ್ಲಿ ವಿಧಿಸಬೇಕು. ಮಾರುಕಟ್ಟೆಮೌಲ್ಯದ ಮಾರ್ಗಸೂಚಿ ಬೆಲೆಗಳನ್ನು ಪರಿಷ್ಕರಣೆಮಾಡದ ಹಣಕಾಸು ವರ್ಷದಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ಹಾಗೂ ಕಟ್ಟಡಗಳು, ಭೂಮಿಗಳ ವರ್ಗಗಳಿಗೆ ಬೇರೆ ಬೇರೆ ದರಗಳಲ್ಲಿ ಆಸ್ತಿ ತೆರಿಗೆಯನ್ನುಶೇ.3ರಿಂದ ಶೇ.5ರಷ್ಟನ್ನು ಹೆಚ್ಚಳ ಮಾಡುವಂತೆ ಸೂಚಿಸಿದೆ.
ಮಾ.3ರೊಳಗೆ ಕೌನ್ಸಿಲ್ ಸಭೆ ಅನುಮೋದನೆಗೆ ಸೂಚನೆ: ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ವರ್ಗದ ಆಸ್ತಿಗಳಿಗೆ ತೆರಿಗೆ ದರಗಳನ್ನುನಿಗದಿಪಡಿಸುವ ಬಗ್ಗೆ ಸೂಕ್ತ ಮಾಹಿತಿ ಮತ್ತು ದಾಖಲೆಗಳೊಂದಿಗೆ ಮಾ.3ರೊಳಗೆ ಕೌನ್ಸಿಲ್ ಸಭೆಗೆಮಂಡಿಸಿ, ಅನುಮೋದನೆ ಪಡೆಯಬೇಕು.ಆಸ್ತಿ ತೆರಿಗೆ ಲೆಕ್ಕಾಚಾರ ತಂತ್ರಾಂಶದಲ್ಲಿ ಕಾಯ್ದೆಗಳತಿದ್ದುಪಡಿಯಂತೆ ಬದಲಾವಣೆ ಮಾಡಿದ್ದು, ಅದನ್ನು ತಂತ್ರಾಂಶದಲ್ಲಿ ಅಳವಡಿಸಲು ಕ್ರಮ ವಹಿಸಬೇಕಾಗಿದೆ. ನಂತರ ಕೌನ್ಸಿಲ್ ಸಭೆಯ ಠರಾವು ಪ್ರತಿಯನ್ನು ಮಾ.8ರೊಳಗೆ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಸಲ್ಲಿಸಬೇಕು. ಸಾರ್ವಜನಿಕರ ಗಮನಕ್ಕೆ ಬರುವಂತೆ ಪ್ರಕಟಿಸಬೇಕು. ಅದರಂತೆ ಜಿಲ್ಲಾ ನಗರಾಭಿವೃದ್ಧಿಕೋಶಸಂಸ್ಥೆಗಳ ಮಾಹಿತಿ ಕ್ರೋಢೀಕರಿಸಿ ಮಾ.12ರೊಳಗೆಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸುವಂತೆ ತಿಳಿಸಿದೆ.
ತೆರಿಗೆ ಪಾವತಿಗೆ ಶೇ.5ರಷ್ಟು ವಿನಾಯಿತಿಗೆ ಅವಧಿ ವಿಸ್ತರಣೆ :
2020-21ನೇ ಸಾಲಿನ ಆಸ್ತಿ ತೆರಿಗೆಯನ್ನು ಮಾ.18ರೊಳಗೆ ಪಾವತಿ ಮಾಡಿದರೆ ಶೇ.5ರಷ್ಟು ವಿನಾಯಿತಿ ನೀಡಿ ಪೌರಾಡಳಿತ ನಿರ್ದೇಶನಾಲಯ ಅವಧಿ
ವಿಸ್ತರಿಸಿದೆ. ಕೋವಿಡ್ ದಿಂದ ಲಾಕ್‌ಡೌನ್ ಹಿನ್ನೆಲೆ ಯಲ್ಲಿ ಸಾರ್ವಜನಿಕರಿಗೆ ಆರ್ಥಿಕ ತೊಂದರೆಯಾಗಿದ್ದ ಕಾರಣ ಸರ್ಕಾರ 2020-21ನೇ ಸಾಲಿನ ಆಸ್ತಿ ತೆರಿಗೆಯ ಮೇಲೆ ನೀಡಲಾಗುವ ಶೇ.5ರಷ್ಟು ವಿನಾಯಿತಿಯನ್ನು ಕಳೆದ ಏಪ್ರಿಲ್ ಮಾಹೆಯಿಂದ ಜುಲೈ ಮಾಹೆಯವರೆಗೆ ವಿಸ್ತರಿಸಲಾಗಿತ್ತು. ವಿಳಂಬ ಆಸ್ತಿ ತೆರಿಗೆ ಪಾವತಿಗೆ ಜುಲೈ ತಿಂಗಳಿನಿಂದ ವಿ ಧಿಸಲಾಗುತ್ತಿದ್ದ ದಂಡವನ್ನು ಆಕ್ಟೋಬರ್ ತಿಂಗಳವರೆಗೆ ವಿಧಿಸದಿರಲು ಸೂಚಿ ಸಿತ್ತು. ಆದ್ದರಿಂದ 2021ರ ಪ್ರಾರಂಭದ ದಿನಾಂಕ ದಿಂದ ಅಂದರೆ ಫೆ.19ರಿಂದ ಒಂದು ತಿಂಗಳೊಳಗೆ2020-21ನೇ ಸಾಲಿನ ಆಸ್ತಿ ತೆರಿಗೆ ಪಾವತಿ ಮಾಡಿದ್ದಲ್ಲಿತೆರಿಗೆ ಮೇಲೆ ಶೇ.5ರಷ್ಟು ವಿನಾಯಿತಿ ನೀಡಿದೆ.ಈಗಾಗಲೇ ತೆರಿಗೆ ಪಾವತಿಸಿದ್ದಲ್ಲಿ ಶೇ.5ರ ವಿನಾಯಿತಿ ಮೊತ್ತವನ್ನು ಮುಂದಿನ ವರ್ಷಗಳ ತೆರಿಗೆ ಪಾವತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.
ಸರ್ಕಾರ ಮಾ.18ರೊಳಗೆ 2020ನೇ ಸಾಲಿನ ತೆರಿಗೆಯನ್ನು ಪಾವತಿಸಿದರೆ ಶೇ.5ರಷ್ಟು ತೆರಿಗೆ ವಿನಾಯಿತಿ ನೀಡಿದೆ. ಆದ್ದರಿಂದ ಸಾರ್ವಜನಿಕರು ತೆರಿಗೆ ಪಾವತಿಸಿ ವಿನಾಯಿತಿ ಬಳಸಿಕೊಳ್ಳಬಹುದು.ಇಲ್ಲದಿದ್ದರೆ ಮುಂದಿನ ವರ್ಷ ತೆರಿಗೆ ಹೆಚ್ಚಳವೂ ಸೇರಿದಂತೆ 2020ನೇ ಸಾಲಿನವಿಳಂಬ ತೆರಿಗೆಯಿಂದ ಹೊರೆ ಬೀಳಲಿದೆ. ಆದ್ದರಿಂದ ಸಾರ್ವಜನಿಕರು ತೆರಿಗೆ ಪಾವತಿಸುವ ಮೂಲಕ ನಗರಸಭೆಯೊಂದಿಗೆ ಸಹಕರಿಸಬೇಕು.
– ಎಸ್.ಲೋಕೇಶ್, ಪೌರಾಯುಕ್ತ, ನಗರಸಭೆ ಮಂಡ್ಯ