Advertisement

ತಾವರಗೇರಾ-ಕುಷ್ಟಗಿ ಬಸ್‌ ಸಂಚಾರ

06:06 PM May 06, 2020 | Suhan S |

ತಾವರಗೇರಾ: ಮೇ 4ರಿಂದ ಜಿಲ್ಲೆಯಲ್ಲಿ ಕೆಲ ಸಡಿಲಿಕೆ ಘೋಷಣೆ ಮಾಡಿದ್ದು, ಅದರಂತೆ ಕೆಲ ಕಡೆ ಬಸ್‌ ಸಂಚಾರ ಆರಂಭವಾಗಿದೆ. ಮಂಗಳವಾರ ಬೆಳಗ್ಗೆ ತಾವರಗೇರಾ ಬಸ್‌ ನಿಲ್ದಾಣದಲ್ಲಿ ಮೊದಲ ಬಸ್‌ ಆಗಮಿಸುತ್ತಿದಂತೆ ಜನರು ಸಂತಸಪಟ್ಟರು. ಕೆಲ ಪ್ರಯಾಣಿಕರು ಬೇರೆ ಊರುಗಳಿಗೆ ಹೊರಡಲು ಕಾಯುತ್ತಿರುವುದು ಕಂಡುಬಂದಿತು.

Advertisement

ಈ ಬಗ್ಗೆ ಸ್ಥಳೀಯ ಬಸ್‌ ನಿಲ್ದಾಣ ನಿಯಂತ್ರಕ ದೊಡ್ಡಪ್ಪ ದಂಡಿನ್‌ ಮಾತನಾಡಿ, ಸ್ಥಳೀಯ ಬಸ್‌ ನಿಲ್ದಾಣದಲ್ಲಿ ಯಾವುದೇ ತಪಾಸಣೆಗೆ ವ್ಯವಸ್ಥೆ ಮಾಡಿಲ್ಲ. ತಾಲೂಕು ಕೇಂದ್ರ ಕುಷ್ಟಗಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡಿ, ನಂತರ ಬಸ್‌ ಒಳಗೆ ಹತ್ತಿಸುವ ಕಾರ್ಯ ನಡೆದಿದೆ. ಆದರೆ ಒಂದು ಬಸ್‌ ಒಳಗೆ 25 ಜನ ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸಾಮಾಜಿಕ ಅಂತರ ಮತ್ತು ಕಡ್ಡಾಯ ಮಾಸ್ಕ್ ಹಾಕುವುದು ನಿಯಮವಾಗಿದೆ. ಆದ್ದರಿಂದ ಪ್ರತಿಯೊಬ್ಬರು ನಿಯಮಾವಳಿ ಪಾಲಿಸಬೇಕಿದೆ ಎಂದರು. ತಾವರಗೇರಾ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಮೊದಲ ಬಸ್‌ ಬಂದಿದ್ದು. ಅದರಲ್ಲಿ 20 ಜನ ಪ್ರಯಾಣಿಕರು ಮಾತ್ರ ಇದ್ದರು. ಪ್ರತಿಯೊಬ್ಬರು ಮಾಸ್ಕ್ ಧರಿಸಿದ್ದರು. ಈ ಬಸ್‌ ತಾವರಗೇರಾದಿಂದ ಕುಷ್ಟಗಿಗೆ ಮಾತ್ರ ಸಂಚರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next