Advertisement
ಇಂಗ್ಲಿಷ್ ಭಾಷೆ ಪ್ರತಿಭಾವಂತ ನವ್ಯ ಕವಿ ಟಿ. ಎಸ್ ಎಲಿಯೆಟ್, ಕ್ರಿಕೆಟ್ ಕಲಿ ವೀರೇಂದ್ರ ಸೆಹವಾಗ್ ಬಿಜೆಪಿ ನಾಯಕಿ ಮಾಜಿ ಮಹಾರಾಣಿ ದಿವಂಗತ ಜಯರಾಜೇ ಸಿಂಧ್ಯ, ಆಧ್ಯಾತ್ಮ ಗುರು ಶ್ರೀ ಪಂಡಿತ್ ರವಿಶಂಕರ್, ಮಹಾನ್ ಲೇಖಕ ಹಾಸ್ಯ ಪ್ರಜ್ಞೆಯ ಮಹಾ ಸಾಮ್ರಾಟ ಜಾರ್ಜ್ ಬರ್ನಾಡ್‌ಷಾ ಕ್ರಾಂತಿಕಾರಿ ಲೇಖಕ ಮ್ಯಾಕ್ಸಿಂ ಗಾರ್ಕಿ ಮುಂತಾದವರೆಲ್ಲ ವೃಷಭರಾಶಿಯಲ್ಲಿ ಜನಿಸಿದ ಪ್ರಖ್ಯಾತರಲ್ಲಿ ಕೆಲವರು. ಇವರ ಗುಣ ಮುನ್ನುಗ್ಗುವುದು ಅದಮ್ಯ ಚೇತನ. ಮುನ್ನುಗ್ಗುವ ಕ್ರಿಯೆಯಲ್ಲೂ ವಿವೇಚನೆ ತರ್ಕ ತಾಳ್ಮೆ ಹಾಗೂ ಧೈರ್ಯವನ್ನು ಸಾಕಾರಗೊಳಿಸಿಕೊಂಡೇ ಹೆಜ್ಜೆ ಇಡುವರು. ಬೇರೆಯವರಿಗೆ ಹೋಲಿಸಿದಾಗ ದೇಹದ ಎತ್ತರದಲ್ಲಿ ತುಸು ಗಿಡ್ಡರೇ ಆಗಿರುತ್ತಾರೆ. ಸೂರ್ಯ ಹಾಗೂ ಚಂದ್ರರ ಪ್ರಭೆಯು ಒಟ್ಟಾದ ಗಟ್ಟಿತನ ದೊರೆತಾಗ ಮಾನವತಾವಾದಿಯಾಗಿ ಕೈಗಾರಿಕೆ ಆಟೋಮೊಬೈಲ್ಸ್ ಉದ್ಯಮಿಯಾಗಿ ಹೆಸರು ಮಾಡಿದ ಜಾನ್ ರಾಕ್ ಫೆಲರ್ ರೀತಿಯಲ್ಲಿ ಎತ್ತರದ ಕಟ್ಟುಮಸ್ತಾದ ಆಳಾಗಿಯೂ ಇರುತ್ತಾರೆ.
ಒಟ್ಟಿನಲ್ಲಿ ವೃಷಭ ರಾಶಿಯವರಿಗೆ ಚಂದ್ರನಿಂದ ಅನೇಕ ಸಿದ್ಧಿಗಳು ಒಗ್ಗೂಡಿ ಬರುತ್ತದೆ. ಇದೇ ಚಂದ್ರ ವಿಷಮತೆಯ ಕಗ್ಗಂಟಿನಲ್ಲಿ ಸಿಕ್ಕಿಬಿದ್ದಾಗ ಸುದೈವದ ಬಾಗಿಲು ವೃಷಭರಾಶಿಯವರಿಗೆ ಮುಚ್ಚಲ್ಪಡುತ್ತದೆ. ಶುಕ್ರನ ಅಗಾಧವಾದ ಶಕ್ತಿ, ರವಿ, ಕುಜ, ರಾಹುಗಳ ಪೀಡೆಗಳಿರದ ಶನೈಶ್ಚರನ ದಿವ್ಯಶಕ್ತಿ ಕೂಡಿಬಂದಲ್ಲಿ ವೃಷಭರಾಶಿಯ ಜನ ಬಹು ದೊಡ್ಡ ಎತ್ತರವನ್ನು ಏರಬಲ್ಲರು. ವೃಷಭರಾಶಿಯ ಜನ ಸಾಹಿತ್ಯ, ಕವನ, ವಿಮರ್ಶೆಗಳಲ್ಲಿ ಬಹಳ ಕುಶಲಿಗಳಾಗಬಲ್ಲರು. ಟಿ.ಎಸ್. ಎಲಿಯೆಟ್ ಇಂಗ್ಲೀಷ್ ಸಾಹಿತ್ಯದ ನವ್ಯದ ಕಾಲಕ್ಕೆ ಬಹುದೊಡ್ಡ ಹೆಸರು ಸಂಪಾದಿಸಿದ ಈ ಕವಿ ಬರೆದ ವೇಸ್ಟ್ ಲ್ಯಾಂಡ್ ಎಂಬ ಕಥಾ ಸಂಕಲನ ನಮ್ಮವರಾದ ಡಾ. ಗೋಪಾಲ ಕೃಷ್ಣ ಅಡಿಗರಂಥ ನವ್ಯದ ಆಧಾರ ಸ್ತಂಭಗಳಿಗೆ ಹೊಸ ಸ್ಫೂರ್ತಿಯನ್ನೇ ಒದಗಿಸಿತು. ಬರ್ನಾಡ್ ಷಾ ದೊಡ್ಡ ನಾಟಕಕಾರನಾದ. ತಮಾಷೆಯ ಮಾತು ಮತ್ತು ಭಾಷಣಗಳಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಸಾಮಾಜಿಕ ಜಗತ್ತು ಎಂದೂ ಮರೆಯಲಾರದ ಅನಘÂì ಆಸ್ತಿಯಾದ. ಎಲಿಯಟ್ ಮತ್ತು ಷಾ ಇಬ್ಬರೂ ನೊಬೆಲ್ ಪುಸ್ಕಾರವನ್ನು ಸಾಹಿತ್ಯಕ್ಕಾಗಿ ಸಂಪಾದಿಸಿದರೆಂಬುದು ಗಮನಾರ್ಹ. ಎಲಿಯಟ್‌ನ ಜಾತಕದ ಚಂದ್ರನ ದಿವ್ಯ ಸಂಪನ್ನತೆ ಗುರು ಹಾಗೂ ಕುಜರ ಪಾಲಿಗೆ ವೃಷಭರಾಶಿಯ ಫಲವಾಗಿ ಒದಗಿ ಅಪರೂಪದ ಸಂಪನ್ನ ಸಾಹಿತ್ಯ ಒದಗಿಬಂತು. ಜಾರ್ಜ್ ಬರ್ನಾಡ್‌ಷಾಗೆ ಚಂದ್ರ ಬಹು ದೊಡ್ಡ ಚೈತನ್ಯವನ್ನು ಬರಹಗಾರನಾಗಿ ರೂಪುಗೊಳ್ಳುವಲ್ಲಿ ಶನೈಶ್ಚರ ಯೋಗಕಾರಕ ಹಾಗೂ ಶುಭಕಾರಕ ಬುಧಗ್ರಹಗಳಿಂದ ಧಾರೆ ಎರೆಸಿದ. ಇದೇ ಚಂದ್ರನೇ ರಾಹು ಹಾಗೂ ಗುರು ಗ್ರಹಗಳ ಮೂಲಕ ಪ್ರೇಮಚಂದ್ರ ಮುನ್ಷಿ ಅವರನ್ನು ದೊಡ್ಡ ಕಾದಂಬರಿಕಾರರನ್ನಾಗಿಸಿ ಹೆಸರು ತಂದ. ಮ್ಯಾಕ್ಸಿಂಗಾರ್ಕಿ ಬಗೆಗೂ ಇದನ್ನೇ ಹೇಳಬಹುದು. ಆದರೆ ಗಾರ್ಕಿ ವಿಷಯದಲ್ಲಿ ಶನೈಶ್ಚರನ ಕ್ರೂರ ದೃಷ್ಟಿ ಚಂದ್ರನ ಮೇಲೆ ಬಿದ್ದು ಗಾರ್ಕಿಗೆ ಸೆರೆಮನೆ ವಾಸ ಕೂಡಾ ಒದಗಿಬಂದದ್ದು ಒಂದು ಪರ್ಯಾಸ. ಇವರ ಜಾತಕದಲ್ಲಿ ಸೆರೆಮನೆಗೆ ತಳ್ಳಲ್ಪಡುವ ಪಾಶಯೋಗ ಇದ್ದದ್ದೂ ಒಂದು ವಿಪರ್ಯಾಸವೇ ಸರಿ. ಝಾರ್ ದೊರೆಯ ವಿರುದ್ಧ ಸಿಡಿದೆದ್ದು ಗಾರ್ಕಿ ಕ್ರಾಂತಿಯ ಕಹಳೆಯನ್ನು ರಷ್ಯಾದಲ್ಲಿ ಊದಿದ್ದರು. ಇದೊಂದು ಅಚ್ಚರಿಯೇ.
Related Articles
Advertisement
ನೆನಪಿನ ಶಕ್ತಿಗೆ ತೀವ್ರವಾದ ಹರಿತತ್ವ ಇವರ ದೊಡ್ಡ ಆಸ್ತಿ. ಭಾರತದ ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಇದಕ್ಕೆ ದೊಡ್ಡ ಉದಾಹರಣೆ. ಇದಕ್ಕೆ ದೊಡ್ಡ ಉದಾಹರಣೆ. ಬಲಾಡ್ಯವಾದ ವೃಷಭ ರಾಶಿಯ ಚಂದ್ರನಿಂದ ಇಂಥದೊಂದು ಸಿದ್ಧಿ ದೊರಕಿತ್ತು. ಪ್ರಧಾನಿ ನೆಹರು ಅವರನ್ನು ಕೂಡಾ ರಾಜೇಂದ್ರಪ್ರಸಾದ ನಿಯಂತ್ರಿಸುವ ಬಲ ಪಡೆದಿದ್ದರು. ದೈವನಿಷ್ಠೆ ಅಪಾರವಾಗಿತ್ತು. ಪೂರ್ವ ಪುಣ್ಯ ಸ್ಥಾನಾಧಿಪತಿ ಗುರು ಭಾಗ್ಯದಲ್ಲಿದ್ದು ಚಂದ್ರ ಬೃಹಸ್ಪತಿ ಕೇಂದ್ರ ಯೋಗ ಪಡೆದದ್ದು ಇದಕ್ಕೆ ಕಾರಣ.
ಮಾಜಿ ಮಹಾರಾಣಿ ವಿಜಯರಾಜೇ ಸಿಂಧ್ಯಾ ಕುಶಾಗ್ರಮತಿ, ಧೈರ್ಯ, ಜನಪ್ರಿಯತೆ ಎಲ್ಲ ಪಡೆದಿದ್ದರೂ ವೃಷಭ ರಾಶಿಯ ಚಂದ್ರ ಕೇತುಗ್ರಸ್ತನಾಗಿ ನಷ್ಟಕ್ಕೆ ಕಾರಣನಾಗುವ ದೌರ್ಬಲ್ಯ ಪಡೆದಿದ್ದ. ಕುಟುಂಬ ಸ್ಥಾನಾಧಿಪತಿ ಚಂದ್ರ ದುಸ್ಥಾನ ಸ್ಥಿತನಾದದ್ದು ಮಗ ಮಾಧವರಾವ್ ಸಿಂಧ್ಯಾ ಜೊತೆ ತೀವ್ರತರವಾದ ಭಿನ್ನಾಭಿಪ್ರಾಯಗಳು, ಶ್ರೀಮತಿ ವಿಜಯರಾಜೇ ಸಿಂಧ್ಯಾ ಅವರಿಗಿದ್ದವು. ಮಾಧವರಾವ್ ಸಿಂಧ್ಯಾ ಅವರ ಜಾತಕದಲ್ಲೀ ಮಾತೃಸ್ಥಾನಧಿಪತಿ ಶನಿಗೆ ದೋಷಗಳಿದ್ದವು. ಕುಟುಂಬ ಸ್ಥಾನದ ಚಂದ್ರನೂ ಕೇತುಗ್ರಹದ ಪೀಡೆಯಲ್ಲಿ ಶನಿದೃಷ್ಟಿಯೊಂದಿಗೆ ಭಾದಿತನಾಗಿದ್ದ.
ವೀರೇಂದ್ರ ಸೆಹವಾಗ್ ಎಲ್ಲಾ ಕ್ರಿಕೆಟರಿಗೂ ಅತ್ಯಾಕರ್ಷಕ ಹೆಸರು. ಪ್ರಪಂಚದ ಯಾವುದೇ ಬೌಲರ್ ಮನೋಸ್ಥೈರ್ಯವನ್ನು ಕುಟ್ಟಿ ಪುಡಿ ಮಾಡಬಲ್ಲ ಅಸಾಧ್ಯ ಚೈತನ್ಯ ಸೆಹವಾಗ್ ಜೀವಸೆಲೆಯಲ್ಲಿ ನಿರಂತರವಾಗಿ ಅಡಕವಾಗಿತ್ತು. ಚಂದ್ರ ಆತ್ಮಸ್ಥೈರ್ಯ ಹಾಗೂ ನೀಚಭಂಗ ರಾಜಯೋಗವನ್ನು ಸೂರ್ಯನಿಂದ ಸಂಪಾದಿಸಿಕೊಂಡು ಚಿಮ್ಮುತ್ತಿದ್ದ ಧೈರ್ಯ ಸೆಹವಾಗ್ ಬಲಾಡ್ಯತೆಗೆ ತಳಹದಿಯಾಗಿದ್ದವು. ಆದರೂ ಸೆಹವಾಗ್ ಕ್ರೀಡಾ ಜೀವನದ ಏರಿಳಿತಗಳು ದುಷ್ಟ ಶನೈಶ್ಚರನಿಂದ ಒದಗುವಂತಾಗಿ ನೆಲಕಚ್ಚಿ ಇನ್ನಿಂಗ್ಸ್ ಬೆಳೆಸುವ ವರ್ಚಸ್ಸು ಸಿದ್ಧಿಸಲಿಲ್ಲ.ಒಟ್ಟಿನಲ್ಲಿ ಕಾಂತೀಯ ಚಂದ್ರ ವೃಷಭ ರಾಶಿಯವರಿಗೆ ಸಿದ್ಧಿ ನೀಡಬಲ್ಲ. ಕ್ಷೀಣಚಂದ್ರನಾದಾಗ ಅನೇಕ ಅಡೆತಡೆಗಳು ನಿಶ್ಚಿತ. ಶುಕ್ರನ, ಶನೈಶ್ಚರನ ಹಾಗೂ ಬುಧರ ಸಿದ್ಧಿ ದೊರಕಿದಲ್ಲಿ ವೃಷಭರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ. ಸಾಹಿತ್ಯ, ಲಲಿತ ಕಲೆಗಳ ಸಿದ್ಧಿ ಇವರಿಗೆ ಬಹುಸುಲಭ. ಚಿಕ್ಕ ವಯಸ್ಸಿಗೇ ದೃಷ್ಟಿ ಕಳೆದುಕೊಂಡರೂ ಕಾವ್ಯ ಲೋಕದ ಧೀಮಂತ ಜಾನ್ ಮಿಲ್ಟನ್. ಆತ್ಮ ಹಾಗೂ ಪರಮಾತ್ಮ ಸಿದ್ಧಿಗಳಿಗೆ ಮುಮ್ಮುಖರಾಗುವ ವೃಷಭರಾಶಿಯ ಧೀಮಂತರು ಪಂಡಿತ್ ರವಿಶಂಕರ ಗುರೂಜಿಯವರಂತೆ ಲೋಕವಂದ್ಯರಾಗಬಲ್ಲರು. ಕ್ಷೀಣ ಚಂದ್ರನಾದರೂ ಆತ್ಮಕಾರಕ ರುಂದ ಧ್ಯಾನ ಸಿದ್ಧಿಗೆ ಕಾರಣನಾದ. ಅಧ್ಯಾತ್ಮದ ಯೋಚನಾ ಲಹರಿಗೆ ರಾಹು ಶನಿಗಳು ಧೃತಿ ಹಾಗೂ ಶೃತಿ ನೀಡಿದವು. ಉತ್ತಮ ಸಂವಾದಿ ಹಾಗೂ ಕುಜ, ಗುರು, ಚಂದ್ರ, ಸೂರ್ಯರ ಉತ್ಛ ಸ್ಥಿತಿ ಹಾಗೂ ಕೇಂದ್ರ ಯೋಗಗಳಿಂದಾಗಿ ಬಹುಎತ್ತರದ ಸಿದ್ಧಿ ಗುರು ಹಾಗೂ ಚೈತನ್ಯದ ಶೀಖರವಾಗಿದ್ದಾರೆ. ಅನಂತಶಾಸ್ತ್ರಿ