ಈ ಹಿಂದೆ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಏಕರೂಪದ ಸೇವಾ ಶುಲ್ಕ ಪಡೆಯಲಾಗುತ್ತಿತ್ತು. ಅಲ್ಲದೆ, ಪರವಾನಿಗೆ ಭೂಮಾಪಕರಿಗೆ ಪ್ರತೀ ಅರ್ಜಿಗೆ ಪಾವತಿಸುತ್ತಿದ್ದ ಸೇವಾಶುಲ್ಕವನ್ನು 800 ರೂ.ಗಳಿಂದ 1200 ರೂ.ಗೆ ಮತ್ತು ಬಹುಮಾಲಕತ್ವದ ಪ್ರತಿ ಹೆಚ್ಚುವರಿ ಬ್ಲಾಕ್‌ನ ಸರ್ವೇಗೆ 150 ರೂ.ಗಳಿಂದ 200 ರೂ.ಗೆ ಹೆಚ್ಚಿಸಿ 2022ರ ಜ.10 ರಂದು ರಲ್ಲಿ ಆದೇಶಿಸಲಾಗಿತ್ತು. 2022ರ ಫೆಬ್ರವರಿಯಲ್ಲಿ ಗ್ರಾಮೀಣ ಪ್ರದೇಶದ ಸೇವಾ ಶುಲ್ಕವನ್ನು ತುಸು ಕಡಿಮೆ ಮಾಡಿತ್ತು.
Advertisement
ಪಹಣಿ ಕಾಲಂ-3ರ ವಿಸ್ತೀರ್ಣ ಹೆಚ್ಚಿಗೆ ಇದ್ದು, ಸಾರ್ವಜನಿಕರ ಹಕ್ಕಿನ ವಿಸ್ತೀರ್ಣ ಕಡಿಮೆ ಇದ್ದರೂ ಪೂರ್ಣ ಪ್ರಮಾಣದ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕ ಪಡೆಯಲಾಗುತ್ತಿತ್ತು. ಈ ಬಗ್ಗೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕೆಲವು ಶಾಸಕರು ಪ್ರಸ್ತಾಪಿಸಿದ್ದರಲ್ಲದೆ, ಇದರಿಂದ ಹೆಚ್ಚು ಹೊರೆಯಾಗುತ್ತಿರುವ ಬಗ್ಗೆ ರೈತರೂ ದೂರಿದ್ದರು.
ಪ್ರಸ್ತುತ ಪೋಡಿಮುಕ್ತ ಅಭಿಯಾನ ಯೋಜನೆಯಡಿ ಬಹುಮಾಲಕತ್ವ ಪಹಣಿಯಲ್ಲಿರುವ ಹಕ್ಕುದಾರರಿಗೆ ಶುಲ್ಕರಹಿತವಾಗಿ ಪೋಡಿ ಮಾಡಿಕೊಡುವ ಯೋಜನೆ ಮುಂದುವರಿಯಲಿದೆ. ಅದಲ್ಲದೆ, ಅಲಿನೇಶನ್, ದರಖಾಸ್ತು ಪೋಡಿ ಸಂಬಂಧ ಮಂಜೂರಿ ಸಮಯದಲ್ಲೇ ಪೋಡಿ ಶುಲ್ಕ ಭರಿಸಿಕೊಳ್ಳಲಾಗುತ್ತದೆ. ಉಳಿದಂತೆ 11ಇ, ಅಲಿನೇಶನ್ ಪೂರ್ವ ನಕ್ಷೆ, ತತ್ಕಾಲ್ ಪೋಡಿ, ಹದ್ದುಬಸ್ತು ಪ್ರಕ್ರಿಯೆಗಳ ಸಂಬಂಧಿಸಿದ ಅರ್ಜಿ ಶುಲ್ಕಗಳನ್ನು ಕಡಿಮೆ ಮಾಡಲಾಗಿದೆ. ಜ. 1ರಿಂದ ಸಲ್ಲಿಸುವ ಅರ್ಜಿಗಷ್ಟೇ ಅನ್ವಯ
ರಾಜ್ಯ ಸರಕಾರ ಪರಿಷ್ಕರಣೆ ಮಾಡಿರುವ ಅರ್ಜಿ ಶುಲ್ಕವು ಈಗಾಗಲೇ ಅಳತೆಗಾಗಿ ಸಲಿಸಿರುವ ಅರ್ಜಿಗೆ ಅನ್ವಯ ಆಗುವುದಿಲ್ಲ. ಜ. 1ರ ಅನಂತರ ಸಲ್ಲಿಸುವ ಅರ್ಜಿಗಳಿಗೆ ಭವಿಷ್ಯಾನ್ವಯ ಆಗುವಂತೆ ಆದೇಶಿಸಿದ್ದು, ಸ್ವಇಚ್ಛೆಯಿಂದ ಸ್ಕೆಚ್ ತಯಾರಿಸಲು ಸಲ್ಲಿಸುವ ಪ್ರತೀ ಅರ್ಜಿಗೆ ಹಿಂದಿನಂತೆ 1,000 ರೂ. ದರವೇ ಮುಂದುವರಿಯಲಿದೆ.