ನವ ದೆಹಲಿ : ಬಹುತೇಕ ಎಲ್ಲಾ ಕ್ಷೇತ್ರದ ಉದ್ಯಮಗಳಲ್ಲಿ ತೊಡಗಿಕೊಂಡಿದ್ದ ಟಾಟಾ ಗ್ರೂಪ್ ಆನ್ ಲೈನ್ ದಿನಸಿ ವಸ್ತುಗಳನ್ನು ಪೂರೈಸುತ್ತಿರುವ ಬಿಗ್ ಬಾಸ್ಕೆಟ್ ನಲ್ಲಿ ಸುಮಾರು 9300 ರಿಂದ 9500 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಶೇಕಡಾ 68 ರಷ್ಟು ಪಾಲುದಾರಿಕೆಯನ್ನು ತನ್ನದಾಗಿಸಿಕೊಳ್ಳಲಿದೆ.
ಓದಿ : ಮೀಸಲು ಹೋರಾಟದಲ್ಲಿ ಪಾಲ್ಗೊಳ್ಳುವ ನಾಯಕರಿಗೆ ನಿರ್ಬಂಧವಿಲ್ಲ- ನಳಿನ್ ಕುಮಾರ್ ಕಟೀಲ್
ಹರಿ ಮೆನನ್ ನೇತೃತ್ವದ ಬೆಂಗಳೂರು ಮೂಲದ ಬಿಗ್ ಬಾಸ್ಕೆಟ್ ಕಂಪೆನಿಯು ಯೂನಿಕಾರ್ನ್ ಕ್ಲಬ್ ಗೆ ಸೇರ್ಪಡೆಗೊಂಡ ಸುಮಾರು 20 ತಿಂಗಳ ಬಳಿಕ ಈ ಒಪ್ಪಂದಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.
ಬಿಗ್ ಬಾಸ್ಕೆಟ್ ನೊಂದಿಗಿನ ಟಾಟಾ ಗ್ರೂಪ್ ನ ಒಪ್ಪಂದದ ಕಾರಣದಿಂದಾಗಿ ಅಲಿಬಾಬಾ ಸೇರಿ ಹಲವು ಕಂಪೆನಿಗಳು ತಮ್ಮ ಹೂಡಿಕೆಯನ್ನು ಹಿಂತೆಗೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.
ಓದಿ : ಅಗ್ರಸ್ಥಾನ ಕಾಯ್ದುಕೊಳ್ಳಲು ಸ್ಫೂರ್ತಿ-2 ಕ್ರಿಯಾ ಯೋಜನೆ