ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿರುವ ಗಡ್ಡಪ್ಪ ಹಾಗೂ ಸೆಂಚುರಿಗೌಡ ಈಗ ಮತ್ತೂಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರ ಈಗಾಗಲೇ ಸದ್ದಿಲ್ಲದೆಯೇ ಶುರುವಾಗಿದೆ ಕೂಡ. ಅಂದಹಾಗೆ, ಆ ಸಿನಿಮಾಗೆ “ತಾತನ್ ತಿಥಿ ಮೊಮ್ಮಗನ್ ಪ್ರಸ್ಥ’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರಕ್ಕೆ ಕೃಷ್ಣ ಚಂದ್ರು ನಿರ್ದೇಶಕರು. ಮುಸ್ಸಂಜೆ ಮಹೇಶ್ ಸಿನಿಮಾದಲ್ಲಿ ಅವರ ಅಪ್ಪಟ ಶಿಷ್ಯ ಎಂದು ಗುರುತಿಸಿಕೊಂಡಿರುವ ಕಾರಣ, ಈ ಚಿತ್ರಕ್ಕೆ ಮುಸ್ಸಂಜೆ ಮಹೇಶ್ ಕಥೆ ಮತ್ತು ಚಿತ್ರಕಥೆ ಬರೆದು, ಶಿಷ್ಯನ ಸಿನಿಮಾಗೆ ಸಾಥ್ ಕೊಡುತ್ತಿದ್ದಾರೆ. ಈ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಗಡ್ಡಪ್ಪ, ಸೆಂಚುರಿಗೌಡ ಹಾಗೂ ತಮ್ಮಣ್ಣ ಪ್ರಮುಖವಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಶುಭಾ ಪೂಂಜಾ ನಾಯಕಿ. ಅವರಿಗೆ “ಮಂಡ್ಯ ಸ್ಟಾರ್’ ಸಿನಿಮಾದ ಹೀರೋ ಲೋಕಿ ನಾಯಕ. ಉಳಿದಂತೆ ಓಂಪ್ರಕಾಶ್ ರಾವ್ ಚಿತ್ರದಲ್ಲಿ ಇನ್ನೊಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಈ ಚಿತ್ರದ ಟೈಟಲ್ಲೇ ಒಂದು ರೀತಿ ವಿಭಿನ್ನವಾಗಿದೆ. ಆ ಕುರಿತು ವಿವರ ಕೊಡುವ ಮುಸ್ಸಂಜೆ ಮಹೇಶ್, “ಇಷ್ಟು ದಿನ ಈ ಗಡ್ಡಪ್ಪ ಮತ್ತು ಸೆಂಚುರಿ ಗೌಡ ಅವರ ಮುಗ್ಧತೆಯನ್ನು ಬಹಳಷ್ಟು ಜನ ಬೇರೆ ರೀತಿ ಬಳಸಿಕೊಂಡಿದ್ದುಂಟು. ಅವರನ್ನಿಟ್ಟುಕೊಂಡು ಚೀಪ್ ಗಿಮಿಕ್ ಕೂಡ ಮಾಡಲಾಗಿತ್ತು. ಇಲ್ಲಿ ಅವರನ್ನು ಬೇರೆ ರೀತಿಯಾಗಿ ತೋರಿಸಲಾಗುತ್ತಿದೆ. ಇಲ್ಲೂ ಡಬ್ಬಲ್ ಮೀನಿಂಗ್ ಇದೆ. ಆದರೆ, ಆದು ವಲ್ಗರ್ ಎನಿಸುವುದಿಲ್ಲ. ಅಂತಹ ಪೋಲಿ ಮಾತುಗಳಿದ್ದರೂ, ಒಂದೊಳ್ಳೆಯ ಸಂದೇಶ ಈ ಚಿತ್ರದಲ್ಲಿದೆ. ಕಥೆಗೆ ಪೂರಕವಾಗಿಯೇ ಇಲ್ಲಿ ಮಾತುಗಳನ್ನು ಪೋಣಿಸಲಾಗಿದೆ ವಿನಃ, ಬೇಕು ಅಂತಾನೇ ಬೇಡದ್ದನ್ನು ಇಟ್ಟಿಲ್ಲ. ಈಗಾಗಲೇ ಒಂದು ವಾರ ಚಿತ್ರೀಕರಣ ನಡೆಸಲಾಗಿದೆ. ಈ ಕಲಾವಿದರ ವೃತ್ತಿ ಜೀವನದಲ್ಲೇ ಈ ಸಿನಿಮಾ ದೊಡ್ಡ ಕ್ಯಾನ್ವಾಸ್‌ನಲ್ಲಿ ತಯಾರಾಗುತ್ತಿದೆ.
ಮುಗ್ಧ ಕಲಾವಿದರನ್ನು ಇಟ್ಟುಕೊಂಡು ನಾವು ಚೀಪ್ ಗಿಮಿಕ್ ಮಾಡುವುದಿಲ್ಲ. ಒಂದೊಳ್ಳೆಯ ಕಥೆಯೊಂದಿಗೆ ಮನರಂಜನಾತ್ಮಕವಾಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಇನ್ನು, ಶೀರ್ಷಿಕೆ ಬಗ್ಗೆ ಹೇಳವುದಾದರೆ, ಇದನ್ನು “ತಿಥಿ’ಯ ಮಂದುವರೆದ ಭಾಗ ಅಂದುಕೊಳ್ಳಬಹುದು. ತಾತನ ತಿಥಿ ಅದಮೇಲೆ, ಮೊಮ್ಮಗನ ಪ್ರಸ್ಥ ಮಾಡಬೇಕೋ ಬೇಡವೋ ಎಂಬ ಕಾನ್ಸೆಪ್ಟ್ ಇಲ್ಲಿದೆ.
ಸಿನಿಮಾದುದ್ದಕ್ಕೂ ಮನರಂಜನೆ ಇದೆ. ಬೆಂಗಳೂರು ಮತ್ತು ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಫೆಬ್ರವರಿ 21 ಕ್ಕೆ ಚಿತ್ರದ ಟ್ರೇಲರ್ ರಿಲೀಸ್ ಮಾಡುವ ಯೋಚನೆ ಚಿತ್ರತಂಡಕ್ಕಿದೆ’ ಎಂಬುದು ಮುಸ್ಸಂಜೆ ಮಹೇಶ್ ಮಾತು. ಶ್ರೀ ಶ್ರೀನಿವಾಸ ಗ್ರೂಪ್ಸ್‌ನಲ್ಲಿ ಸಿನಿಮಾ ತಯಾರಾಗುತ್ತಿದೆ. ಮಧುಕುಮಾರ್ ಹಾಗೂ ಮಂಜುನಾಥ್ ನಿರ್ಮಾಪಕರು. ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ನಾಗೇಶ್ ಆಚಾರ್ಯ ಕ್ಯಾಮೆರಾ ಹಿಡಿದಿದ್ದಾರೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಶ್ರೀನಿವಾಸಮೂರ್ತಿ, ಪದಾ ¾ವಾಸಂತಿ, ಆಶಾಲತಾ, ಮೈಕೋ ನಾಗರಾಜ್
ಸೇರಿ ಹಲವರು ನಟಿಸಿದ್ದಾರೆ.