Advertisement

ಜೆಟ್‌ ಏರ್‌ ವೇಸ್‌ ಖರೀದಿಯಲ್ಲಿ ಟಾಟಾ ಸನ್ಸ್‌ ಎಚ್ಚರಿಕೆಯ ನಡೆ

11:39 AM Nov 13, 2018 | |

ಮುಂಬಯಿ : ತೀವ್ರ ಹಣದ ಕೊರತೆಯನ್ನುಎದುರಿಸುತ್ತಿರುವ ಜೆಟ್‌ ಏರ್‌ ವೇಸ್‌ ಸಂಸ್ಥೆಯನ್ನು ಖರೀದಿಸುವ ಆಸಕ್ತಿ ತೋರಿರುವ ಟಾಟಾ ಸನ್ಸ್‌ ಸಮೂಹವು ಈ ನಿಟ್ಟಿನಲ್ಲಿ ಭಾರೀ ಎಚ್ಚರಿಕೆ ಮತ್ತು ವಿಶ್ಲೇಷಣಾತ್ಮಕ ನಡೆಯನ್ನು ತೋರುತ್ತಿದೆ ಎಂದು ಮಿಂಟ್‌ ನ್ಯೂಸ್‌ಪೇಪರ್‌ ವರದಿ ಮಾಡಿದೆ. 

Advertisement

ಟಾಟಾ ಸನ್ಸ್‌ ಸಮೂಹದ ಮುಖ್ಯ ಹಣಕಾಸು ಅಧಿಕಾರಿ ಸೌರಭ್‌ ಅಗರ್‌ವಾಲ್‌ ಅವರು ಜೆಟ್‌ ಏರ್‌ ವೇಸ್‌ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ಅಧ್ಯಕ್ಷ ನರೇಶ್‌ ಗೋಯಲ್‌ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. 

ವಾಯು ಯಾನ ರಂಗವು ವಾರ್ಷಿಕ ಶೇ.20ರ ಪ್ರಮಾಣದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ವೃದ್ಧಿಯನ್ನು ಕಾಣುತ್ತಿರುವ ಹೊರತಾಗಿಯೂ ಒಂದೇ ಸಮನೆ ಏರುತ್ತಿರುವ ಇಂಧನ ಬೆಲೆ, ಅತ್ಯಧಿಕ ಇಂಧನ ತೆರಿಗೆ, ದುರ್ಬಲ ರೂಪಾಯಿ, ಕಡಿಮೆ ವೆಚ್ಚದ ಪ್ರಯಾಣ ದರಗಳು ಮತ್ತು ವಿಮಾನ ಯಾನ ಸಂಸ್ಥೆಗಳ ನಡುವಿನ ಕತ್ತುಕತ್ತಿನ ಪೈಪೋಟಿಯೇ ಮೊದಲಾದ ಕಾರಣಕ್ಕೆ ವಾಯು ಯಾನ ಉದ್ಯಮ ರಂಗ ಪ್ರತಿಕೂಲಕರ ಪರಿಸ್ಥಿತಿಯನ್ನು ಎದುರಿಸುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next