Advertisement

ಟಾಟಾ ಸನ್ಸ್‌ಗೆ ಮತ್ತೆ ನಟರಾಜನ್‌ ಚಂದ್ರಶೇಖರನ್‌ ಅಧ್ಯಕ್ಷ

09:29 PM Feb 11, 2022 | Team Udayavani |

ಮುಂಬೈ: ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ನಟರಾಜನ್‌ ಚಂದ್ರಶೇಖರನ್‌ (57) ಅವರನ್ನು ಎರಡನೇ ಬಾರಿಗೆ ಆಯ್ಕೆ ಮಾಡಲಾಗಿದೆ. ಅವರ ಅಧಿಕಾರದ ಅವಧಿ ಐದು ವರ್ಷಗಳಾಗಿವೆ.

Advertisement

ಹಾಲಿ ಅಧಿಕಾರದ ಅವಧಿ ಫೆ.20ಕ್ಕೆ ಮುಕ್ತಾಯವಾಗಲಿತ್ತು. ಮುಂಬೈನಲ್ಲಿ ಶುಕ್ರವಾರ ಸಭೆ ಸೇರಿದ್ದ ಟಾಟಾ ಸನ್ಸ್‌ನ ಆಡಳಿತ ಮಂಡಳಿ, ಚಂದ್ರಶೇಖರನ್‌ ಅವರನ್ನು ಮುಂದಿನ ಐದು ವರ್ಷಗಳ ಕಾಲ ಮುಂದುವರಿಸಲು ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದೆ.

ಸಭೆಗೆ ಆಗಮಿಸಿದ್ದ ವಿಶೇಷ ಆಹ್ವಾನಿತ ಮತ್ತು ಗೌರವಾಧ್ಯಕ್ಷ ರತನ್‌ ಎನ್‌.ಟಾಟಾ ಸಂಸ್ಥೆ ಚಂದ್ರಶೇಖರನ್‌ ಅವಧಿಯಲ್ಲಿ ಸಾಧಿಸಿದ ಅಂಶಗಳಿಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ತಮ್ಮ ಆಯ್ಕೆಯ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದ ಚಂದ್ರಶೇಖರನ್‌ “ಟಾಟಾ ಸನ್ಸ್‌ನ ನೇತೃತ್ವ ವಹಿಸುವ ಅವಕಾಶವನ್ನು ಮುಂದಿನ ಐದು ವರ್ಷಗಳಿಗೆ ವಿಸ್ತರಿಸಿರುವುದು ಸಂತಸ ತಂದಿದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next