Advertisement

‘ಶರಣ್‌-ಬೋಪಣ್ಣ ಜೋಡಿಗೆ ಅಗ್ರ ಶ್ರೇಯಾಂಕ

06:55 AM Dec 20, 2018 | |

ಪುಣೆ: ಏಶ್ಯನ್‌ ಗೇಮ್ಸ್‌ ಚಿನ್ನದ ಪದಕ ಗೆದ್ದ ಭಾರತದ ಟೆನಿಸ್‌ ಜೋಡಿಯಾದ ದಿವಿಜ್‌ ಶರಣ್‌-ರೋಹನ್‌ ಬೋಪಣ್ಣ ಅವರಿಗೆ “ಟಾಟಾ ಓಪನ್‌’ ಕೂಟದ ಪುರುಷರ ಡಬಲ್ಸ್‌ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಲಭಿಸಿದೆ.

Advertisement

2020ರ ಟೋಕಿಯೊ ಒಲಿಂಪಿಕ್ಸ್‌ ಕೂಟವನ್ನು ಗಮನದಲ್ಲಿರಿಸಿಕೊಂಡು ರೋಹನ್‌ ಬೋಪಣ್ಣ, ಭಾರತದ ನಂಬರ್‌ ವನ್‌ ಆಟಗಾರನಾಗಿರುವ ಶರಣ್‌ಗೆ ಜತೆಯಾಗಿದ್ದಾರೆ. ಟಾಟಾ ಓಪನ್‌ ಕೂಟದಲ್ಲಿ ಇವರಿಬ್ಬರು ಮೊದಲ ಸಲ ಜತೆಯಾಗಿ ಆಡಲಿದ್ದಾರೆ.

ರಾಡು ಅಲ್ಬೊಟ್‌-ಮಲೆಕ್‌ ಜೆಝಿರಿ ಜೋಡಿ 2ನೇ, ಫಿಲಿಪ್‌ ಓಸ್ವಾಲ್ಡ್‌-ಟಿಮ್‌ ಪ್ಯೂಜ್‌ 3ನೇ, ಮಾರ್ಸೆಲೊ ಅರೆವಲೊ-ಜಾಮಿ ಸೆರಾಟನಿ ಜೋಡಿ 4ನೇ ಶ್ರೇಯಾಂಕ ಸಂಪಾದಿಸಿದೆ. ಭಾರತದ ಮತ್ತೋರ್ವ ಸ್ಟಾರ್‌ ಟೆನಿಸಿಗ ಲಿಯಾಂಡರ್‌ ಪೇಸ್‌ ಮೆಕ್ಸಿಕೋದ ಮಿಗ್ಯುಯೆಲ್‌ ಏಂಜೆಲ್‌ ರಿಯೆಸ್‌ ವರೆಲ ಅವರೊಂದಿಗೆ ಸ್ವರ್ಧಿಸಲಿದ್ದಾರೆ.

“ಏಶ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬೋಪಣ್ಣ ಹಾಗೂ ಶರಣ್‌ ಈ ಕೂಟದಲ್ಲಿ ಭಾಗವಹಿಸುತ್ತಿರುವುದನ್ನು ಅಧಿಕೃತವಾಗಿ ತಿಳಿಸಿರುವುದು ಹಾಗೂ ಅಗ್ರ ಶ್ರೇಯಾಂಕದಲ್ಲಿ ಆಡುತ್ತಿರುವುದು ನಮಗೆ ಹೆಮ್ಮೆಯ ವಿಚಾರ’ ಎಂದು ಕೂಟದ ನಿರ್ದೇಶಕ ಪ್ರಶಾಂತ್‌ ಸುತಾರ್‌ ಹೇಳಿದ್ದಾರೆ.

ಸಿಂಗಲ್ಸ್‌ ಸ್ಪರ್ಧಿಗಳು
ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ವಿಶ್ವದ 6ನೇ ಶ್ರೇಯಾಂಕಿತ ಕೆವಿನ್‌ ಆ್ಯಂಡರ್ಸನ್‌, ಮಾಜಿ ಯುಎಸ್‌ ಓಪನ್‌ ಚಾಂಪಿಯನ್‌ ಮರಿನ್‌ ಸಿಲಿಕ್‌, ಹಾಲಿ ಚಾಂಪಿಯನ್‌ ಗಿಲೆಸ್‌ ಸಿಮೋನ್‌ ಸ್ವರ್ಧಿಸಲಿದ್ದಾರೆ.

Advertisement

ಇದು ಟಾಟಾ ಓಪನ್‌ ಟೂರ್ನಿಯ ಈ 2ನೇ ಆವೃತ್ತಿಯಾಗಿದ್ದು, ಡಿಸೆಂಬರ್‌ 31ರಿಂದ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next