ನವ ದೆಹಲಿ : ದೇಶದ ಪ್ರಮುಖ ವಾಹನ ಉತ್ಪಾದಕ ಸಂಸ್ಥೆ ಟಾಟಾ ಮೋಟಾರ್ಸ್ ತ್ರೈಮಾಸಿಕ ನಿವ್ವಳ ವರದಿಯನ್ನು ಬಿಡುಗಡೆ ಮಾಡಿದೆ.
ಹೌದು, ಮಾರ್ಚ್ 31ಕ್ಕೆ ಮುಕ್ತಾಯಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ 7,605 ಕೋಟಿಯಷ್ಟು ನಿವ್ವಳ ನಷ್ಟ ಅನುಭವಿಸಿದೆ ಎಂದು ತನ್ನ ತ್ರೈಮಾಸಿಕ ವರದಿ ತಿಳಿಸಿದೆ.
ಇದನ್ನೂ ಓದಿ : ಯೂಟ್ಯೂಬ್ ವಿಡಿಯೋ ವೈರಲ್ ಮಾಡುವುದು ಹೇಗೆ ? ಅತೀ ದೊಡ್ಡ ರಹಸ್ಯ ಭೇದಿಸಿದಾತನ ಕಥೆ
ಟಾಟಾ ಮೋಟಾರ್ಸ್ ನ ಒಟ್ಟು ನಿವ್ವಳ ಲಾಭ 2,774.10 ಕೋಟಿ ರೂ ಆಗಿದೆ. ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಅಂದಾಜು 87, 517.8 ಕೋಟಿಯಷ್ಟು ಲಾಭ ಗಳಿಕೆಯನ್ನು ನಿರೀಕ್ಷಿಸಿತ್ತು ಎಂದು ಬ್ಲೂಮ್ ಬರ್ಗ್ ವರದಿ ಹೇಳಿದೆ.
ಟಾಟಾ ಮೋಟರ್ಸ್ ಕಳೆದ ವರ್ಚದ ನಾಲ್ಕನೇ ತ್ರೈಮಾಸಿಕದಲ್ಲಿ ಸುಮಾರು 9,894.25 ಕೋಟಿ ರೂಪಾಯಿಯಷ್ಟು ಹಾಗೂ 2020 ರ ಮೂರನೇ ತ್ರೈಮಾಸಿಕದಲ್ಲಿ 2,906.45 ಕೋಟಿ ರೂಪಾಯಷ್ಟು ಲಾಭ ಗಳಿಸಿತ್ತು ಸಂಸ್ಥೆಯ ವರದಿ ತಿಳಿಸಿತ್ತು. ಆದರೇ, ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 7,605 ಕೋಟಿಯಷ್ಟು ನಿವ್ವಳ ನಷ್ಟ ಅನುಭವಿಸಿದೆ.
ತ್ರೈಮಾಸಿಕದಲ್ಲಿ 88,109 ಕೋಟಿ ರೂ.ಗಳ ಆದಾಯದ ಮೇಲೆ ಲಾಭವನ್ನು 2,721 ಕೋಟಿ ರೂಪಾಯಿಯಷ್ಟು ಸಿಎನ್‌ಬಿಸಿ-ಟಿವಿ 18 ಸಮೀಕ್ಷೆ ನಡೆಸಿದ ವಿಶ್ಲೇಷಕರ ಅಂದಾಜಿನ ವರದಿ ತಿಳಿಸಿದೆ.
ಇದನ್ನೂ ಓದಿ : ಸರ್ಕಾರದಿಂದ 1,250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೆಜ್ ಘೋಷಣೆ