ಹೊಸದಿಲ್ಲಿ: ಲೋಹಗಳು, ಪ್ಲಾಸ್ಟಿಕ್ ಮತ್ತು ಇತರ ಸಾಮಗ್ರಿಗಳ ಬೆಲೆ ಗಗನಮುಖಿಯಾಗಿಯೇ ಇರುವ ಹಿನ್ನೆಲೆಯಲ್ಲಿ ಮುಂಬರುವ ಜನವರಿಯಲ್ಲಿ ಕಾರು ಉತ್ಪಾದಕ ಕಂಪೆನಿಗಳು ಕಾರುಗಳ ಬೆಲೆ ಹೆಚ್ಚಳ ಮಾಡುವ ಸಾಧ್ಯತೆಗಳಿವೆ.
ಒಂದು ವರ್ಷದಿಂದೀಚೆಗೆ ತೀವ್ರವಾಗಿ ಬಾಧಿಸುತ್ತಿರುವ ಸೆಮಿ ಕಂಡಕ್ಟರ್‌ಕೊರತೆಯೂ ಈ ಬಾರಿಯ ಬೆಲೆ ಪರಿಷ್ಕರಣೆಯನ್ನು ಅನಿವಾರ್ಯವಾಗಿಸಿದೆ ಎಂದು ಕಂಪೆನಿಗಳು ಪ್ರತಿಪಾದಿಸಿವೆ.
ಮಾರುತಿ ಸುಜುಕಿ ಈಗಾಗಲೇ ಬೆಲೆಯೇರಿಕೆಯ ಮುನ್ಸೂಚನೆ ನೀಡಿದೆ. ಮರ್ಸಿಡಿಸ್ ಬೆಂಜ್ ಜ. 1ರಿಂದ ಆಯ್ದ ಮಾಡೆಲ್‌ಗಳ ಕಾರುಗಳ ಬೆಲೆಯಲ್ಲಿ ಶೇ. 2ರಷ್ಟು ಹೆಚ್ಚಳ ಮಾಡುವುದಾಗಿ ಹೇಳಿದ್ದರೆ ಆಡಿ ಇಂಡಿಯಾ ಶೇ. 3 ಏರಿಕೆ ಮಾಡುವುದಾಗಿ ತಿಳಿಸಿದೆ.
ಇದನ್ನೂ ಓದಿ:ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ
ಟಾಟಾ ಮೋಟರ್, ಹುಂಡೈ, ರೆನಾಲ್ಟ್, ಹೊಂಡಾ ಮತ್ತಿತರ ಕಂಪೆನಿಗಳು ಕೂಡ ಇದೇ ಹಾದಿ ಹಿಡಿಯುವ ಸಾಧ್ಯತೆಗಳಿವೆ.