ಬೆಂಗಳೂರು: ಐಪಿಎಲ್ ಹಂಗಾಮ ಜೋರಾಗುತ್ತಿದ್ದಂತೆ, ತಂಡ ಗಳನ್ನು ಉತ್ತೇಜಿಸುವ ಕಾರ್ಯಗಳೂ ಅಭಿಮಾನಿಗಳಿಂದ ಜೋರಾಗಿ ನಡೆ ಯುತ್ತಿದೆ. ಸದ್ಯ ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು ಪ್ರೇರೇಪಿಸುವಂತಹ ಆರ್‌ಸಿಬಿ ಆ್ಯಂಥಮ್’ ಎಂಬ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.
ಬಿಡುಗಡೆಯಾದ ಕೆಲವೇ ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಈ ಗೀತೆಯನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡದ ರ್ಯಾಪರ್ ಗುಬ್ಬಿ ಸಾಹಿತ್ಯ ಬರೆದು ಧ್ವನಿಯಾಗಿರುವ ಈ ಗೀತೆಗೆ ಶ್ರೀರಾಮ್ ಗಂಧರ್ವ ಸಂಗೀತ ಸಂಯೋಜಿಸಿದ್ದಾರೆ.
ಆರ್‌ಸಿಬಿ ತಂಡದ ಅಭಿಮಾನಿಯಾಗಿ ರುವ ಶುಭಾಷಿಸಿ ಶ್ರೀನಿವಾಸ್, ಇಂಥದ್ದೊಂದು ಹಾಡನ್ನು ನಿರ್ಮಿಸಿ ತಮ್ಮ ತಂಡದ ಆಟಗಾರರಿಗೆ ಅರ್ಪಿಸಿದ್ದಾರೆ. ಈ ಐಪಿಎಲ್‌ನಲ್ಲಿ ಆರ್‌ಸಿಬಿ ಆಟಗಾರರನ್ನು ಸಂಗೀತದ ಮೂಲಕ ಉತ್ತೇಜಿಸುವ ಸಲುವಾಗಿ ಈ ಮ್ಯೂಸಿಕ್ ವೀಡಿಯೋ ಸಾಂಗ್ ನಿರ್ಮಿಸಿದ್ದೇವೆ. ಆರ್‌ಸಿಬಿ ಕಟ್ಟಾ ಅಭಿಮಾನಿ ಸುಗುಮಾರ್ ಕೂಡ ಈ ವೀಡಿಯೋ ಸಾಂಗ್‌ನಲ್ಲಿ ಕಾಣಿಸಿ ಕೊಂಡಿದ್ದಾರೆ. ಭಾರತೀಯ ಸಂಸ್ಕೃತಿ ಜೊತೆಗೆ, ಪಾಶ್ಚಿಮಾತ್ಯ ನೃತ್ಯ, ಹಿಪ್‌ಹಾಪ್ ಶೈಲಿಯನ್ನು ಬಳಸಿಕೊಂಡು ಈ ಸಾಂಗ್ ಚಿತ್ರೀಕರಿಸಲಾಗಿದೆ.
ಈಗಾಗಲೇ ಈ ಸಾಂಗ್ ವೈರಲ್ ಆಗುತ್ತಿದ್ದು, ಆರ್‌ಸಿಬಿ ಆಟಗಾರರು ಮತ್ತು ಅಭಿಮಾನಿಗಳು ಹಾಡನ್ನು ಮೆಚ್ಚಿಕೊಳ್ಳುತ್ತಿದ್ದಾರೆ’ ಎಂದು ಆರ್‌ಸಿಬಿ ಆ್ಯಂಥಮ್ ಗೀತೆಗೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಖುಷಿಯನ್ನು ಹಂಚಿಕೊಂಡಿದ್ದಾರೆ.