Advertisement
ಕ್ರೀಡಾ ಅಭಿಮಾನಿಗಳ ಹಬ್ಬವೆಂದೇ ಬಿಂಬಿತವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯ ಅಧಿಕೃತ ಟೆಲಿವಿಷನ್ ಪ್ರಸಾರದ ಹಕ್ಕನ್ನು ಜನಪ್ರೀಯ “ಸ್ಟಾರ್ ಸ್ಪೋರ್ಟ್ಸ್’ ವಾಹಿನಿಯು ಪಡೆದಿದಿದೆ. ಇಂಗ್ಲಿಷ್, ಹಿಂದಿ, ಕನ್ನಡ, ತೆಲುಗು, ಮರಾಠಿ, ಮಲಯಾಳಂ ಸೇರಿದಂತೆ ಹಲವಾರು ಪ್ರಾದೇಶಿಕ ಭಾಷೆಗಳಲ್ಲೂ ಐಪಿಎಲ್ 16ನೇ ಆವೃತ್ತಿಯನ್ನು ಸ್ಟಾರ್‌ಸ್ಟೋಟ್ಸ್ ಪ್ರಸ್ತುತಪಡಿಸುತ್ತಿದೆ.
ಬೆಂಗಳೂರಿನಲ್ಲಿ ಟ್ರೋಫಿ ಟೂರ್ ಪ್ರದರ್ಶನ ಆರಂಭಕ್ಕೂ ಮೊದಲು ಬೆಳಗ್ಗೆ ವೀರಭದ್ರನಗರದ ನೈಸ್ ರಸ್ತೆಯ ಟೋಲ್ ಬಳಿ 18ಕೆ ಮ್ಯಾರಥಾನ್‌ಗೆ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಚಾಲನೆ ನೀಡಿದರು.
Related Articles
Advertisement
ವಿರಾಟ್ ಕೊಹ್ಲಿ ಜೊತೆಗೆ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ನಾ ಮುಂದು, ತಾ ಮುಂದು ಎಂಬಂತೆ ಹರಸಾಹಸ ಪಟ್ಟರು. 18, 10 ಮತ್ತು 5 ಕಿ.ಮೀ.ಓಟದ ಮ್ಯಾರಥಾನ್‌ನಲ್ಲಿ ಸಾವಿರಾರು ಮಂದಿ ಭಾಗವಹಿಸಿದರು. ಮ್ಯಾರಥಾನ್‌ಗೆ ಚಾಲನೆ ಕೊಟ್ಟ ಬೆನ್ನಲ್ಲೇ ಕನ್ನಡದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನಮಸ್ಕಾರ, “ಎಂಜಾಯ್ ಮಾಡಿ ಓಡು ಗುರು ಎಂದರು. ಕನ್ನಡಲ್ಲಿ ಕೊಹ್ಲಿ ಮಾತು ಕೇಳಿದ ಕ್ರೀಡಾಸಕ್ತರ ಜೋಶ್‌ನಲ್ಲಿ ಕೂಗಿ ಹಿಗ್ಗಿದರು. ಬಳಿಕ ಅಲ್ಲೇ ಟ್ರೋಫಿ ಪ್ರದರ್ಶನಕ್ಕಿಡಲಾಯಿತು. ನೆರೆದಿದ್ದ ಸಹಸ್ರಾರು ಜನ ಟ್ರೋಫಿಯ ಜೊತೆಗೆ ಸೆಲ್ಫಿ ತೆಗೆದುಕೊಂದು ಖುಷಿಪಟ್ಟರು.
ಜಯನಗರದ 4ನೇ ಬ್ಲಾಕ್‌ನ ಮೈಯಾಸ್ ಹೊಟೇಲ್ ಮುಂಭಾಗದ ರಸ್ತೆಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಹಮ್ಮಿಕೊಂಡಿದ್ದ ಟ್ರೋಫಿಟೂರ್ ಪ್ರದರ್ಶನ ವೀಕ್ಷಿಸಲು ಕಿಕ್ಕಿರಿದ ಪ್ರಮಾಣದಲ್ಲಿ ಅಭಿಮಾನಿಗಳು ಆಗಮಿಸಿ ಸಂಭ್ರಮಿಸಿದರು. ಕ್ರೀಡಾಸಕ್ತರು ಹ್ಯಾಷ್‌ಟ್ಯಾಗ್ “ಐಪಿಎಲ್ ಆನ್ ಸ್ಟಾರ್’ ಬ್ಯಾನರ್‌ನಲ್ಲಿ ಟ್ರೋಫಿ ಜೊತೆಗೆ ತೆಗೆದುಕೊಂಡ ಚಿತ್ರ ಹಂಚಿಕೊಳ್ಳುತ್ತಿದ್ದರು. ಇದಾದ ಬಳಿಕ ಕೋರಮಂಗಲದ ಫೋರಂ ನೆಕ್ಸಸ್ ಮಾಲ್ ಮುಂದೆ ಟ್ರೋಫಿ ಪ್ರದರ್ಶನಕ್ಕಿಡಲಾಯಿತು. ಪ್ರತಿ ಪ್ರದರ್ಶನ ಸ್ಥಳಗಳಲ್ಲೂ ಆರ್‌ಸಿಬಿ, ಈ ಸಲ ಕಪ್ ನಮ್ದೇ ಎಂಬ ಸದ್ದು ಜೋರಾಗಿತ್ತು. ಫೋರಂ ನೆಕ್ಸಸ್ ಮಾಲ್ ಬಳಿ ಸಂಜೆವರೆಗೂ ಪ್ರದರ್ಶನಕ್ಕಿಟ್ಟಿದ್ದ ಟ್ರೂಫಿ ಕಂಡು ಸಾವಿರಾರು ಮಂದಿ ಹರ್ಷಗೊಂಡರು. ರಾತ್ರಿ 9 ರಿಂದ 11 ಗಂಟೆಯವರೆಗೆ ನಗರದ ವಿಶೇಷ ಸ್ಥಳಗಳಲ್ಲಿ ಟ್ರೋಫಿ ಪ್ರದರ್ಶನಕ್ಕೆ ಕಂಡು ಬಂತು.
ಐಪಿಎಲ್ ಟೂರ್ನಿಗೆ ಹೆಚ್ಚು ಉತ್ಸಾಹ ತುಂಬುವ ಉದ್ದೇಶದಿಂದ “ಸ್ಟಾರ್‌ಸ್ಫೋಟ್ಸ್’ ಟಾಟಾ ಐಪಿಎಲ್ ಟ್ರೋಫಿ ಟೂರ್ ಪ್ರದರ್ಶಿಸುವ ಸಾರಥ್ಯ ಕೈಗೊಂಡಿದೆ. ಸ್ಟಾರ್ ಸ್ಪೋರ್ಟ್ಸ್ ನ “ಟ್ರೋಫಿ ಟೂರ್’ಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. “ಸ್ಟಾರ್ ಸ್ಫೋಟ್ಸ್’ನ ಟ್ರೋಫಿ ಟೂರ್ ಕ್ರೀಡಾಭಿಮಾನಿಗಳ ಪಾಲಿಗೆ ಹಬ್ಬವಾಗಿ ಪರಿಣಮಿಸಿದ್ದು, ಹರ್ಷೋದ್ಘಾರ ಮುಗಿಲು ಮುಟ್ಟಿತು.