ಮುಂಬೈ: ಚೀನಾದ ಮೊಬೈಲ್ ತಯಾರಕ ವಿವೊ ಬದಲಿಗೆ ಟಾಟಾ ಗ್ರೂಪ್ ಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಟೈಟಲ್ ಪ್ರಾಯೋಜಕತ್ವ ಲಭಿಸಿದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಮುಂದಿನ ವರ್ಷ (2023) ದಿಂದ ಟಾಟಾ ಗ್ರೂಪ್ ಐಪಿಎಲ್ ನ ಟೈಟಲ್ ಸ್ಪಾನ್ಸರ್ ಆಗಿರಲಿದೆ ಎಂಧು ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
2022ರ ಐಪಿಎಲ್ ಕೂಟ 10 ತಂಡಗಳ ಕೂಟವಾಗಿರಲಿದೆ. ಆರ್ ಪಿಎಸ್ ಗೋಯೆಂಕಾ ಗುಂಪು ಲಕ್ನೋ ಮೂಲದ ಫ್ರಾಂಚೈಸಿಯನ್ನು 7,090 ಕೋಟಿ ರೂ.ಗೆ ಖರೀದಿ ಮಾಡಿದ್ದರೆ, ಸಿವಿಸಿ ಕ್ಯಾಪಿಟಲ್ 5,625 ಕೋಟಿ ರೂ.ಗೆ ಅಹಮದಾಬಾದ್ ಮೂಲದ ಫ್ರಾಂಚೈಸಿಯನ್ನು ಖರೀದಿಸಿದೆ.
ಇದನ್ನೂ ಓದಿ:ಇಂದಿನಿಂದ ನಿರ್ಣಾಯಕ ಟೆಸ್ಟ್: ಸಿರಾಜ್, ವಿಹಾರಿ ಔಟ್- ವಿರಾಟ್, ಉಮೇಶ್ ಇನ್
2022 ರ ಮೆಗಾ ಹರಾಜು ಬೆಂಗಳೂರಿನಲ್ಲಿ ಫೆಬ್ರವರಿ ಎರಡನೇ ವಾರದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ, ಎಲ್ಲಾ ಅಸ್ತಿತ್ವದಲ್ಲಿರುವ ಐಪಿಎಲ್ ಫ್ರಾಂಚೈಸಿಗಳು ಮುಂಬರುವ ಋತುವಿನ ಮೆಗಾ ಹರಾಜಿನ ಮೊದಲು ತಮ್ಮ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಹಿರಂಗಪಡಿಸಿದ್ದವು.