Advertisement

ಟೇಸ್ಟ್‌ ಆಫ್ ಕರಾವಳಿ

08:28 PM Feb 14, 2020 | Lakshmi GovindaRaj |

ಮೀನು ಹೋಟೆಲ್‌ ಅಂದ್ರೆ, ಕ್ಲೀನ್‌ ಇದೆಯಾ ಅಂತ ಜನ ಮೊದಲು ನೋಡುತ್ತಾರೆ. ಕ್ಲೀನ್‌ ಇದ್ದರೂ, ಕರಾವಳಿ ಶೈಲಿಯಲ್ಲಿ ಅಡುಗೆ ತಯಾರಿಸಲು ಬಾಣಸಿಗರು ಪರಿಣತರಾ?- ಅಂತಲೂ ಯೋಚಿಸುತ್ತಾರೆ. ಆ ಯಾವ ಚಿಂತೆಗಳೂ “ಕರಾವಳಿ ಲಂಚ್‌ ಹೋಮ್‌’ನಲ್ಲಿ ಬೇಕಿಲ್ಲ. ಇಲ್ಲಿನದ್ದು ಮನೆಯೂಟದ ಮ್ಯಾಜಿಕ್‌…

Advertisement

ಆಹಾ ಮೀನು! ಸವಿದವನೇ ಬಲ್ಲ ಅದರ ರುಚಿಯಾ… ಸಮುದ್ರತೀರದಿಂದ ದೂರವೇ ಇರುವ ಬೆಂಗಳೂರಿನಲ್ಲಿ ತಾಜಾ ಮೀನುಗಳ ಹೋಟೆಲ್‌ಗ‌ಳು ಸಾಕಷ್ಟಿದ್ದರೂ, “ಇದು ನಮ್ಮನೆ ಊಟ’ ಎಂಬ ಫೀಲ್‌ ಹುಟ್ಟಿಸುವ ಹೋಟೆಲ್‌ಗ‌ಳು ಮಾತ್ರ ಬಲು ಅಪರೂಪ. ಆದರೆ, “ಕರಾವಳಿ ಲಂಚ್‌ ಹೋಮ್‌’, ಈ “ಅಪರೂಪ’ದ ಪಟ್ಟಿಗೆ ಸೇರುವಂಥದ್ದು. ಕಳೆದ 12 ವರ್ಷಗಳಿಂದ, ಗ್ರಾಹಕರಿಗೆ ಮನೆಯೂಟದ ರುಚಿ ನೀಡಿ, ಮತ್ಸಪ್ರಿಯರಿಗೆ ಕಾಡುವ ರುಚಿ ತೋರಿಸಿದ ಹೋಟೆಲ್‌ ಇದು.

ಮಲ್ಲೇಶ್ವರದ 7ನೇ ಕ್ರಾಸ್‌ನಲ್ಲಿ “ಕರಾವಳಿ ಲಂಚ್‌ ಹೋಮ್‌’ ಇದೆ. ಮೀನು ಹೋಟೆಲ್‌ ಅಂದ್ರೆ, ಕ್ಲೀನ್‌ ಇದೆಯಾ ಅಂತ ಜನ ಮೊದಲು ನೋಡುತ್ತಾರೆ. ಕ್ಲೀನ್‌ ಇದ್ದರೂ, ಕರಾವಳಿ ಶೈಲಿಯಲ್ಲಿ ಅಡುಗೆ ತಯಾರಿಸಲು ಬಾಣಸಿ­ಗರು ಪರಿಣತರಾ?- ಅಂತಲೂ ಯೋಚಿ­ಸು­ತ್ತಾರೆ. ಆ ಯಾವ ಚಿಂತೆಗಳೂ ಇಲ್ಲಿ ಬೇಕಿಲ್ಲ.

ಇಲ್ಲಿನ ಫಿಶ್‌ ಕರಿ, ಅಂಜಲ್‌ ಫ್ರೈ, ಪಾಂಫ್ರೆಟ್‌ ಫ್ರೈ, ಸಿಲ್ವರ್‌ ಫಿಶ್‌ ಮತ್ತು ಸೀಗಡಿ ಮೀನಿನ ಸ್ಪೆಷಲ್‌ಗ‌ಳಲ್ಲಿ ಕರಾವಳಿ ರುಚಿಯ ಗಮ್ಮತ್ತಿದೆ. ಕ್ರ್ಯಾಬ್‌ ಸುಕ್ಕಾ, ಕೊಡವಾಯ್‌, ಹೊಳೆಯ ಬೈಗೆ ಫ್ರೈ ರುಚಿಗಳು, ಅಮ್ಮನ ಅಡುಗೆಯನ್ನು ನೆನಪಿಸುತ್ತವೆ. ನೀರುದೋಸೆ, ಮಂಗಳೂರು ಮಲ್ಲಿಗೆ ಇಡ್ಲಿ, ಕೋರಿ ರೊಟ್ಟಿ, ಕುಚ್ಚಲಕ್ಕಿ ಅನ್ನವನ್ನು ಫಿಷ್‌ ಡಿಶ್‌ಗಳ ಜತೆಗೂಡಿಸಿಕೊಂಡರೆ, ಮನೆಯೂಟದ ರುಚಿಗೆ ಇಲ್ಲಿ ಮೋಸವೇ ಇಲ್ಲ.

ಮಾಲೀಕರಿಂದ ಟೇಸ್ಟ್‌ “ಟೆಸ್ಟ್‌’: ಕರಾವಳಿ ಲಂಚ್‌ಹೊಮ್‌ನ ಮಾಲೀಕರಾದ ರವಿ ಶೆಟ್ಟಿ, ಮೂಲತಃ ಕುಂದಾಪುರದವರು. ಈ ಮೊದಲು ಪ್ರಸಿದ್ಧ ಹೋಟೆಲ್‌ ಒಂದರಲ್ಲಿ 5 ವರ್ಷ ಬಾಣಸಿಗರಾಗಿದ್ದರು. ಈಗ ಲಂಚ್‌ ಹೋಮ್‌ನಲ್ಲಿ ತಮ್ಮದೇ “ಕೈಚಳಕ’ ತೋರಿಸುತ್ತಿದ್ದಾರೆ. ನಿತ್ಯವೂ ತಾವೇ ಮುಂದೆ ನಿಂತು ಅಡುಗೆ ತಯಾರಿಯ ಬಗ್ಗೆ ಗಮನ ಹರಿಸುತ್ತಾರೆ. ಯಾವ ಮೀನಿಗೆ, ಎಷ್ಟು ಮಸಾಲೆಯ ಹದ?- ಎನ್ನುವ ಸರಳ ಸೂತ್ರ ಬಲ್ಲವರಾಗಿರುವುದರಿಂದ, ಈ ಹೋಟೆಲ್‌ ತನ್ನದೇ ರುಚಿಯ ಬ್ರ್ಯಾಂಡ್‌ ಅನ್ನು ರೂಪಿಸಲು ಸಾಧ್ಯವಾಗಿದೆ.

Advertisement

ಮಲ್ಪೆ- ಗಂಗೊಳ್ಳಿಯ ಮೀನುಗಳು: ಇಲ್ಲಿ ಅಡುಗೆಗೆ ಬಳಸಲ್ಪಡುವ ಮೀನುಗಳು ತುಂಬಾ ತಾಜಾ. ಮಲ್ಪೆ- ಗಂಗೊಳ್ಳಿಯ ಸಮುದ್ರದ ಮೀನುಗಳನ್ನು ಇಲ್ಲಿ ಅಡುಗೆಗೆ ಬಳಸುತ್ತಾರೆ. ಕರಾವಳಿಯ ಬಾಣಸಿಗರೇ ಅವುಗಳಿಗೆ ಖಾದ್ಯಸ್ಪರ್ಶ ನೀಡುತ್ತಾರೆ.

ನಟರನ್ನು ಸೆಳೆದ ರುಚಿ…: ಈ ಹೋಟೆಲ್‌ ಜನಸಾಮಾನ್ಯರನ್ನು ಹೇಗೆ ಸೆಳೆದಿದೆಯೋ ಹಾಗೆಯೇ, ಚಿತ್ರನಟರಿಗೂ ಇದು ಫೇವರಿಟ್‌. ನಟರಾದ ಪುನೀತ್‌ ರಾಜ್‌ಕುಮಾರ್‌, ಜಗ್ಗೇಶ್‌, ಕೋಮಲ್‌, ಚೇತನ್‌, ಗುರುನಂದನ್‌, ಟೆನ್ನಿಸ್‌ ಕೃಷ್ಣ- ಆಗಾಗ್ಗೆ ಇಲ್ಲಿಗೆ ಭೇಟಿಕೊಡುತ್ತಾರೆ.

ಹೋಟೆಲ್‌ ಎಲ್ಲಿದೆ?: ನಂ.147, 7ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಮಲ್ಲೇಶ್ವರ
ಸಮಯ: ಮ.11.30- 4.30, ರಾ.7- 11 ಗಂಟೆ
ಮೊ.: 9900561139, 9620206943

ಆಯಾ ಋತುವಿನಲ್ಲಿ ಸಿಗುವ ತಾಜಾ ಮೀನುಗಳ ಸ್ಪೆಷಲ್‌ ವೆರೈಟಿಯನ್ನು ಪರಿಚಯಿಸುತ್ತಾ, ಗ್ರಾಹಕರನ್ನು ಸೆಳೆದಿದ್ದೇವೆ. ಮುಂದೆ, ಬಂಗುಡೆ ಮೇಳ, ಅಂಜಲ್‌ ಮೇಳ, ಪ್ರಾನ್ಸ್‌ ಫೆಸ್ಟ್‌ಗಳನ್ನು ಆಯೋಜಿಸುತ್ತೇವೆ.
-ರವಿ ಶೆಟ್ಟಿ, ಮಾಲೀಕ

* ಬಳಕೂರು ವಿ.ಎಸ್‌. ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next