Advertisement
Related Articles
Advertisement
ಭಾರತ್ ಬೈಯೋ ಟೆಕ್ ಸಂಸ್ಥೆಗೆ 1 ಕೋಟಿ ಡೋಸ್‌ಗಳನ್ನು ಪ್ರತಿ ಡೋಸ್‌ಗೆ ರೂ.400ರಂತೆ ಕೋವಾಕ್ಸಿನ್ ಲಸಿಕೆಗೆ ಬೇಡಿಕೆ ಪತ್ರ ಕಳುಹಿಸಲು ಕಾರ್ಯಪಡೆ ಸಮಿತಿ ಸಭೆ ಅನುಮೋದಿಸಿತು. ಲಸಿಕಾ ತಯಾರಕರು ಖಾಸಗಿ ಸಂಸ್ಥೆಗಳಿಗೆ ನಿಗದಿ ಪಡಿಸಲಾದ ದರದ ಜೊತೆಗೆ ಪ್ರತಿ ಲಸಿಕಾ ಡೋಸ್‌ಗೆ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಮಾರ್ಗಸೂಚಿಯಂತೆ ಸೇವಾ ಶುಲ್ಕವಾಗಿ ಪ್ರತಿ ಡೋಸ್‌ಗೆ ರೂ.100/-ರಂತೆ ಮಾತ್ರ ವಿಧಿಸಲು ಕಾರ್ಯಪಡೆ ಸಮಿತಿ ಸಭೆ ಅನುಮೋದಿಸಲಾಯಿತು ಎಂದು ಅವರು ತಿಳಿಸಿದರು.
ಸಭೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಸಮಿತಿ ಸದಸ್ಯರೂ ಹಾಗೂ ಸಚಿವರಾದ ಸಿ.ಸಿ.ಪಾಟೀಲ್ ಹಾಜರಾಗಿದ್ದರು. ಮುಖ್ಯಕಾರ್ಯದರ್ಶಿಗಳಾದ ರವಿಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಾವಿದ್ ಅಕ್ತರ್, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ಅನಿಲ್ ಕುಮಾರ್ ಉಪಸ್ಥಿತರಿದ್ದರು.