Advertisement

ತರುಣ್ ತೇಜ್‍ಪಾಲ್ ವಿರುದ್ಧ ಅತ್ಯಾಚಾರ ಪ್ರಕರಣ : ಗೋವಾ ಸರ್ಕಾರ ಹೈಕೋರ್ಟ್ ನಲ್ಲಿ ಮೇಲ್ಮನವಿ

04:28 PM May 27, 2021 | Team Udayavani |

ಪಣಜಿ: ತೆಹೆಲ್ಕಾದ ಮಾಜಿ ಸಂಪಾದಕ ತರುಣ್ ತೇಜ್‍ಪಾಲ್ ವಿರುದ್ಧ ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಗೊಳಿಸಿರುವ ಗೋವಾ ಸೆಷನ್ಸ ಕೋರ್ ತೀರ್ಪನ್ನು ಪ್ರಶ್ನಿಸಿ ಗೋವಾ ಸರ್ಕಾರ ಹೈಕೋರ್ಟನಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ಮೇಲ್ಮನವಿಯ ಪ್ರಾಥಮಿಕ ವಿಚಾರಣೆ ಗುರುವಾರ ನಡೆದಿದೆ.

Advertisement

ತೀರ್ಪಿನಲ್ಲಿ ಪೀಡಿತ ಯುವತಿ ಗುರುತು ಹಿಡಿಯುವ ಹಲವು ಮಾಹಿತಿಯಿದ್ದು ಅದನ್ನು ತೆಗೆದುಹಾಕುವಂತೆ ನ್ಯಾಯಾಲಯವು ಸೂಚನೆ ನೀಡಿದ್ದು, ಈ ಪ್ರಕರಣದ ವಿಚಾರಣೆಯನ್ನು ಜೂನ್ 2 ಕ್ಕೆ ಮುಂದೂಡಲಾಗಿದೆ.

ಮೇ 21 ರಂದು ಮಾಪ್ಸಾ ಸೇಷನ್ ಕೋರ್ಟನ ನ್ಯಾಯಮೂರ್ತಿ ಕ್ಷಮಾ ಜೋಶಿ ರವರು ತೇಜ್‍ಪಾಲ್ ಪ್ರಕರಣದ ತೀರ್ಪು ನೀಡಿದ್ದರು. ಈ ತೀರ್ಪಿಗೆ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಪತ್ರಿಕಾಗೋಷ್ಠಿ ನಡೆಸಿ- ತೇಜ್‍ಪಾಲ್ ಪ್ರಕರಣದಲ್ಲಿ ಎಲ್ಲ ಸಾಕ್ಷಿಗಳಿರುವಾಗ ಒಬ್ಬ ಮಹಿಳೆಗೆ ಅನ್ಯಾಯವಾಗುವುದನ್ನು ಗೋವಾ ಸರ್ಕಾರ ಸಹಿಸಿಕೊಳ್ಳುವುದಿಲ್ಲ.

ಇದರಿಂದಾಗಿ ಗೋವಾ ಸರ್ಕಾರವೇ ಈ ಪ್ರಕರಣದಲ್ಲಿ ಉಚ್ಛ ನ್ಯಾಯಾಲಯದ ಮೆಟ್ಟಿಲೇರಲಿದೆ ಎಂದು ಹೇಳಿದ್ದರು. ಅಂತೆಯೇ ಗೋವಾ ಸೆಷನ್ಸ ಕೋರ್ಟ ತೀರ್ಪನ್ನು ಪ್ರಶ್ನಿಸಿ ಗೋವಾ ಸರ್ಕಾರ ಬುಧವಾರ ಹೈಕೋರ್ಟನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ ಜೂನ್ 2 ಕ್ಕೆ ಮುಂದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next