Advertisement
ಅಲ್ಲಿ ನಮ್ಮ ವಿವೇಕ ಜಾಗೃತಗೊಂಡು, ನಮ್ಮ ತಂಡ ಒಂದು ಯೋಜನೆಯ ಬೆನ್ನುಹತ್ತಿತ್ತು. ಅದೇ “ತರ್ಲೆ ಕ್ಲಾಸ್ ಅವಾರ್ಡ್ಸ್!’
Related Articles
Advertisement
ನಮ್ಮದೇ ತಂಡ“ತಂಡ’ ಅನ್ನೋದಕ್ಕಿಂತ ಪ್ರಶಸ್ತಿ ಮಾನದಂಡದ ಸಮಿತಿ ಎನ್ನಬಹುದು. ನಮ್ಮಲ್ಲೇ ಸಮಾನಮನಸ್ಕ ವಿದ್ಯಾರ್ಥಿ ಬಳಗ ಒಟ್ಟುಗೂಡಿ, ಅವಾರ್ಡ್ ಶೋನ ರೂಪುರೇಷೆ ಸಿದ್ಧಪಡಿಸಿದೆವು. ಅದಕ್ಕಾಗಿ ಸಣ್ಣ ಮಟ್ಟಿನ “ಸ್ಪೈ ಟೀಮ…’ ಸಿದ್ಧಪಡಿಸಿ, ಪ್ರಶಸ್ತಿಗೆ ಬೇಕಾದ ನಾಮಿನೇಶನ್ ಸ್ಪಾನ್ಸರ್ಸ್ ಪಟ್ಟಿಯನ್ನ ಕೂಲಂಕಷವಾಗಿ ಪರಿಶೀಲನೆ ನಡೆಸಲಾಯಿತು. ಭಿನ್ನರಾಗ, ಜಡೆಜಗಳಕ್ಕೆ ಆಹ್ವಾನ ಸಿಗಬಾರದೆಂಬ ಕಾರಣಕ್ಕೆ ಇಂತಹ ಪರಾಮರ್ಶೆ ಅತ್ಯಗತ್ಯ ಎನಿಸಿತ್ತು. ನಮ್ಮ ಬೆಂಚ್‌ಗೆ ಪ್ರಾಧಾನ್ಯ ಸಿಕ್ಕಿಲ್ಲ ಎಂಬ ಪ್ರಾದೇಶಿಕ ಅಸಮಾನತೆಯಂತಹ ಕೂಗನ್ನು ಮೆಟ್ಟಿ ನಿಲ್ಲುವ ಮಾನಸಿಕ ತಾಕತ್ತು ನಮ್ಮ ತಂಡ ಪಡಕೊಂಡು, ಸಮಾರಂಭದ ಏರ್ಪಾಟು ಮಾಡಿದೆವು. ತರ್ಲೆ ಅವಾರ್ಡುಗಳು
ಭಾರಿ ಮೌಲ್ಯವುಳ್ಳ , ತೂಕಭರಿತ ಅವಾರ್ಡುಗಳು ಇರಬಹುದು ಅಂದುಕೊಂಡರೆ ಅದು ತಪ್ಪು ಕಲ್ಪನೆ. ನಮ್ಮ ಯಾದಿಯಲ್ಲಿ ಇದ್ದಿದ್ದು ಇವೇ; ಕೃಷ್ಣ ಆಫ್ ಕ್ಲಾಸ್, ರಾಧಾ ಆಫ್ ಕ್ಲಾಸ್, ಉದ್ದದ ಜಡೆ, ಮ್ಯಾಚೋ ಮ್ಯಾನ್ ಆಫ್ ಕ್ಲಾಸ್, ಬಿದಿರ್ ಕಡ್ಡಿ ಅವಾರ್ಡ್, ಬೆಸ್ಟ್ ಝುಮುಕಿ, ಬಿಲ್ಡ್‌ಅಪ್ ಬಸ್ಯಾ, ಬೆಸ್ಟ್ ಪುಂಡಿ ಅವಾರ್ಡ್, ಉತ್ತಮ ಬೆಕ್ಕಿನ ನಡಿಗೆ… ಹೀಗೆ ಈ ತಮಾಷೆಯ ಅವಾರ್ಡ್‌ಗಳ ಪಟ್ಟಿ ಬೆಳೆದಿತ್ತು. ಅದರ ಜತೆಗೆ ಸ್ವಲ್ಪ ಸಭ್ಯ, ಗಂಭೀರ ಎಂದೆನಿಸಬಲ್ಲ ಕೆಲವು ಅವಾರ್ಡುಗಳನ್ನು ಸೇರಿಸಿದ್ದೆವು. ಉತ್ತಮ ನಗೆಗಾರ, ಜಾಣರ ಜಾಣ (ಮಲ್ಲ ಮಂಡೆ), ಉತ್ತಮ ನಾಯಕ ಇತ್ಯಾದಿ. ನಿರೂಪಣೆ ಹಾಗೂ ಪ್ರಾಯೋಜಕರು ತರಗತಿಯಲ್ಲಿ ಸದಾ ನಮ್ಮನ್ನ ನಗಿಸುತ್ತಿದ್ದ , ಬಾಲಿಶ ವರ್ತನೆಯ ಆ ಗೆಳತಿ ನಿರೂಪಣೆಗೆ ಸೂಕ್ತ ಎಂದೆನಿಸಿ ಆಕೆಗೆ ಭರಪೂರ ಭಾರ ಪೇರಿಸಿದೆವು. ಕಾರ್ಯಕ್ರಮ ಶುರುವಾಗುತ್ತಲೆ ನಾನು ಸೀದಾ ತೆರಳಿ ನಿರೂಪಕಿಯ ಕೈಗೆ ಮೈಕಿತ್ತೆ? ಅಂದ ಹಾಗೆ ಆ ಹುಡುಗಾಟಿಕೆಯ ಮೈಕ್ ಯಾವುದು ಗೊತ್ತೆ? ನನ್ನ ಮನೆಯಲ್ಲಿ ಅದಾಗಲೇ ಕಾಯಿಗಟ್ಟಿದ್ದ ಎಳೆ ಹಲಸು. (ತುಳುವಿನ ಕಳ್ಳಿಗೆ) ಕೆಲವು ಮೈಕ್‌ಗಳು ಎಳೆ ಹಲಸನ್ನೇ ನೆನಪಿಸುವ ಕಾರಣ ಅದನ್ನೇ ಕೊಂಚ ವಿಭಿನ್ನವಾಗಿಸಿದ್ದೆ. (ಎಕ್ಸೆಂಟ್ರಿಕ್ ಅಂದುಕೊಂಡರೂ ಪರವಾಗಿಲ್ಲ ಎಂಬಂತೆ) ಅದಲ್ಲದೆ ತರಗತಿಯೊಳಗೆ ನಡೆಯುತ್ತಿದ್ದ ಶೋ ಆದ ಕಾರಣ ಅಬ್ಬರಕ್ಕೂ ಆಸ್ಪದವಿರಲಿಲ್ಲ. ನಾವೇ ಜಾಹೀರಾತುದಾರರಾಗಿದ್ದರಿಂದ ನಮ್ಮ ಹೆಸರು ಹೇಳುವುದು ನಿಕ್ಕಿ ಆಗಿತ್ತು. ನಿರೂಪಕಿಯ ಜೊತೆ ನಾವು ಸ್ಪಾನ್ಪರ್ಸ್ ಹೆಸರುಗಳನ್ನ ಬಿಡಿಬಿಡಿಯಾಗಿ ಬಡಾಯಿಸುವ ಒಡಂಬಡಿಕೆ ಮಾಡಿಕೊಂಡಿದ್ದೆವು! ಮನೋರಂಜನೆಯ ಖನಿ ತಮಾಷೆ, ನಗು ಎಲ್ಲವೂ ಮನೋರಂಜನೆಯ ದೃಷ್ಟಿಯಿಂದಷ್ಟೇ ನಮ್ಮೊಂದಿಗೆ ಸಹಪಾಠಿಗಳಾಗಿ ಬಹುಸಮಯದಿಂದ ಇದ್ದರೂ ತಮಗರಿವಿಲ್ಲದೆ ಅವರ ಅಪೂರ್ವ ನೈಜ ಮೇಧಾಶಕ್ತಿ ಇಲ್ಲಿ ಬೆಳಕಿಗೆ ಬಂದುಬಿಟ್ಟಿರುತ್ತದೆ. “ಹೌದಾ! ನಾ ಹಿಂಗೂ ಇದ್ನಾ ?’ ಅನ್ನೋ ಉದ್ಗಾರ ಪ್ರಶಸ್ತಿ ವಿಜೇತ ಸಹೃದಯರಲ್ಲಿತ್ತು. ಅವರಿಗೇನೆ ಎಷ್ಟೋ ಬಾರಿ ಗ್ರಹಿಕೆಗೆ ನಿಲುಕಿರುವುದಿಲ್ಲ ತಮ್ಮ ಜಡೆಯೇ ಉದ್ದವಾಗಿರೋದು, ತಮ್ಮ ಝುಮಕಿಯೆ ಚನ್ನ ಎಂದೆಲ್ಲಾ! ಆಗಲೇ ಹೇಳಿದಂತೆ ಸಮಿತಿಯು ಇದನ್ನೆಲ್ಲ ನಾಜೂಕಾಗಿ, ಸರಿಯಾದ ಅಳತೆಗೋಲಿಟ್ಟುಕೊಂಡು ಆಯ್ಕೆ ನಡೆಸುವ ಚಾಕಚಕ್ಯತೆ ಹೊಂದಿರಬೇಕಾದದ್ದು ಅತ್ಯಗತ್ಯ. ನಾವೆಷ್ಟೇ ಬೆಣ್ಣೆಯಿಂದ ಕೂದಲು ತೆಗೆದ ಥರಾ ಸಂದರ್ಭ ನಿರ್ವಹಿಸಿದರೂ, ಮೊಸರಿನಲ್ಲೆ ಕಲ್ಲು ಹುಡುಕೋ ಜಾಣರಂತೂ ಇದ್ದರು. ಆದರೂ ಇದೆಲ್ಲ ಚಣಹೊತ್ತಿನ ಖುಷಿ, ಇದರಲ್ಲಿ ಇರೋ ನೆನಪುಗಳ ಸಿಹಿ ಹೂರಣ ಮುಂದೆ ಕಚಗುಳಿ ಇಡುತ್ತಲೇ ಇರುತ್ತವೆ ಎಂಬ ಸಮಾಧಾನ ಇತ್ತಷ್ಟೆ. ಕಾಲೇಜು ದಿನಗಳ ಮಧುರ ಸಾಲಿನಲ್ಲಿ ಇದು ಸೇರಿಕೊಳ್ಳುವುದು ಎಂಬ ಆತ್ಮತೃಪ್ತಿ. ಅದಕ್ಕೆ ಪ್ರಶಸ್ತಿ ವಂಚಿತರೂ ಸಂತೈಸಿಕೊಂಡು ನಮ್ಮ ನಿಲುವಿಗೆ ಜೈ ಎಂದಿದ್ದರು. ಕೊನೆಯದಾಗಿ ಭವಿಷ್ಯದಲ್ಲಿ ಇಂತಹ ಅವಾರ್ಡ್ ಶೋನಲ್ಲಿ ಪಾಲ್ಗೊಳುವ ಭಾಗ್ಯ ಲಭ್ಯವಾಗುವುದೋ ಇಲ್ಲವೋ ಗೊತ್ತಿಲ್ಲ. ಕಾಲೇಜಿನಲ್ಲಾ
ದರೂ ಪ್ರಾತ್ಯಕ್ಷಿಕೆ ನೀಡೋ ಸದಾವಕಾಶ ಸಿಕ್ಕಿತಲ್ಲ ಎಂಬ ಭಾವನೆ ಕೊನೆತನಕ ಹಸುರಾಗಿ ಉಳಿಯುತ್ತದೆ. ಅದನ್ನು ಕೆದಕಿದಾಗ ಮೊಗದಲ್ಲಿ ಸಣ್ಣ ಮುಗುಳ್ನಗೆ ಮೂಡುತ್ತದೆ ನಿರ್ಲಿಪ್ತ ಭಾವದಲ್ಲಿ ! – ಸುಭಾಷ್ ಮಂಚಿ
ನಿಕಟಪೂರ್ವ ವರ್ಷದ ಹಳೆವಿದ್ಯಾರ್ಥಿ,
ವಿ. ವಿ. ಕಾಲೇಜು, ಮಂಗಳೂರು