Advertisement

Sandalwood; ಪೋಸ್ಟ್‌ ಪ್ರೊಡಕ್ಷನ್‌ ನಲ್ಲಿ ‘ತಾರಿಣಿ’

03:35 PM Aug 27, 2023 | Team Udayavani |

ಇತ್ತೀಚೆಗೆ ಚಿತ್ರೀಕರಣ ಮುಗಿಸಿರುವ “ತಾರಿಣಿ’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಚಿತ್ರಕ್ಕೆ ಡಾ.ಸುರೇಶ್‌ ಕೋಟ್ಯಾನ್‌ ಚಿತ್ರಾಪುರವರು ಬಂಡವಾಳ ಹೂಡಿದ್ದಾರೆ. ಸಿದ್ದು ಪೂರ್ಣಚಂದ್ರ ರವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Advertisement

ಮಮತಾ ರಾಹುತ್‌ ರವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೊಂದು ಗರ್ಭಿಣಿಯ ಕಥೆಯಾಧಾರಿತ ಚಿತ್ರವಾಗಿದೆ. ನೈಜವಾಗಿ ಸಹಜವಾಗಿ ಎಲ್ಲಾ ಕಲಾವಿದರೂ ಕೂಡ ಅಭಿನಯಿಸಿದ್ದಾರೆ ಎಂಬುದು ತಂಡದ ಮಾತು.

ಉಳಿದಂತೆ ರೋಹಿತ್‌, ಭವಾನಿ ಪ್ರಕಾಶ್‌, ವಿಜಯ ಲಕ್ಷ್ಮೀ, ಡಾ. ಸುರೇಶ್‌ ಕೋಟ್ಯಾನ್‌ ಚಿತ್ರಾಪುರ, ಸುಧಾ ಪ್ರಸನ್ನ, ಪ್ರಮಿಳಾ ಸುಬ್ರಹ್ಮಣ್ಯಂ, ಮಟಿಲ್ಡಾ ಡಿಸೋಜಾ, ದೀಪಿಕಾ ಗೌಡ, ತೇಜಸ್ವಿನಿ, ಶ್ವೇತಾ, ಮಂಜು, ಇನ್ನೂ ಮುಂತಾದ ನುರಿತ ಕಲಾವಿದರು ಅಭಿನಯಿಸಿದ್ದಾರೆ.

ಚಿತ್ರಕ್ಕೆ ಅನಂತ್‌ ಆರ್ಯನ್‌ ಸಂಗೀತ, ದೀಪಕ್‌ ಸಿ ಎಸ್‌ ಸಂಕಲನ, ರಾಜು ಹೆಮ್ಮಿಗೇಪುರ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next