Advertisement

ತರೀಕೆರೆಯಲ್ಲೂ ನಿರಾತಂಕವಾಗಿ ನಡೆಯಿತು ಪರೀಕ್ಷೆ

04:15 PM Jun 26, 2020 | Naveen |

ತರೀಕೆರೆ: ಗುರುವಾರ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಾವುದೇ ಆತಂಕವಿಲ್ಲದೆ ನಡೆದವು. ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

Advertisement

ಬೆಳಗ್ಗೆ 7.30ಕ್ಕೆ ಶಾಲೆಯ ಶಿಕ್ಷಕರು, ಆಸ್ಪತ್ರೆಯ ಸಿಬ್ಬಂದಿ ಇನ್ನಿತರರು ಕರ್ತವ್ಯಕ್ಕೆ ಹಾಜರಾಗಿ ವಿದ್ಯಾರ್ಥಿಗಳನ್ನು ನಿರೀಕ್ಷಿಸುತ್ತಿದ್ದ ದೃಶ್ಯ ಕಂಡು ಬಂತು. ಕೇಂದ್ರ ಬಾಗಿಲಿನಲ್ಲಿ 6 ಅಡಿ ಅಂತರದ ಚೌಕವನ್ನು ಹಾಕಲಾಗಿತ್ತು. ವೈದ್ಯಕೀಯ ಸಿಬ್ಬಂದಿ ಇನಾ#ರೆಡ್‌ ಥರ್ಮೋಮೀಟರ್‌, ಸ್ಯಾನಿಟೈಸರ್‌ ಮತ್ತು ಮಾಸ್ಕ್ ಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳನ್ನು ಪರೀಕ್ಷಿಸಲು ಸಿದ್ಧರಾಗಿದ್ದರು. ಮೈದಾನದ ಕಪ್ಪು ಹಲಗೆಯಲ್ಲಿ ವಿದ್ಯಾರ್ಥಿಗಳು ಕೂರುವ ವಿವರಗಳನ್ನು ಹಾಕಲಾಗಿತ್ತು. ಪರೀಕ್ಷೆ 10.30ಕ್ಕೆ ನಡೆಯಬೇಕಾಗಿತ್ತು. ಆದರೆ ಕೆಲವು ವಿದ್ಯಾರ್ಥಿಗಳು 8 ಗಂಟೆಗೆ ಶಾಲೆಯ ಮುಂಭಾಗದಲ್ಲಿ ತಮ್ಮ ಪರೀಕ್ಷಾ ಕೊಠಡಿಯನ್ನು ಹುಡುಕುತ್ತಿದ್ದ ದೃಶ್ಯ ಪಟ್ಟಣದ ಎರಡು ಕೇಂದ್ರಗಳಲ್ಲಿ ಕಂಡು ಬಂತು.

ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನಲ್ಲಿ ಒಟ್ಟು 10 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎರಡು ತಾಲೂಕಿನಿಂದ ಒಟ್ಟು 2022 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಾಗಿದ್ದು, ಇವರಲ್ಲಿ 1022 ವಿದ್ಯಾರ್ಥಿಗಳು ಮತ್ತು 1000 ವಿದ್ಯಾರ್ಥಿನಿಯರಿದ್ದಾರೆ. ಪರೀಕ್ಷೆಗೆ 150 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆಂದು ಬಿಇಒ ಹೊನ್ನೇಶ್‌ಕುಮಾರ್‌ ತಿಳಿಸಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್‌ ವ್ಯವಸ್ಥೆ ಮಾಡಲಾಗಿತ್ತು. ಕೆಲವು ಪೋಷಕರು ಮಕ್ಕಳನ್ನು ಕರೆತಂದು ಬಿಟ್ಟು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪರೀಕ್ಷಾ ಕೇಂದ್ರದ ಬಳಿ ಯಾವುದೇ ವಾಹನ ಸಂಚಾರವಾಗದಂತೆ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸರು ಬಂದೋಬಸ್ತ್ ಮಾಡಿದ್ದರು. ಬಿಇಒ ಹೊನ್ನೇಶ್‌ ಕುಮಾರ್‌ ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next