Advertisement

ಕಠಿಣ ಪರಿಶ್ರಮದಿಂದ ಮಾತ್ರ ಗುರಿಸಾಧನೆ ಸಾಧ್ಯ; ಅರಿಕೆರೆ ಮಂಜುನಾಥ್‌

06:17 PM May 06, 2022 | Team Udayavani |

ಕೋಲಾರ: ಅವಕಾಶಗಳು ಬಂದಾಗ ಪರಿಸ್ಥಿತಿ ಕಠಿಣವಾಗಿದ್ದರೂ ಮುನ್ನುಗ್ಗಿ ಗುರಿ ಸಾಧಿಸುವ ಛಲ ಇರಬೇಕು ಆಗ ಮಾತ್ರ ಗೆಲುವು ಸಾಧ್ಯವಾಗುತ್ತದೆ, ಆದು ರಾಜಕೀಯ ರಂಗಕ್ಕೂ ಅನ್ವಯಿಸುತ್ತದೆ ಎಂದು ಸಮಾಜ ಸೇವಕ ಅರಿಕೆರೆ ಮಂಜುನಾಥ್‌ ಗೌಡ ಅಭಿಪ್ರಾಯ ಪಟ್ಟರು.

Advertisement

ತಾಲೂಕಿನ ಹೂಹಳ್ಳಿ ಗ್ರಾಮದಲ್ಲಿ ಪಾಂಡು ರಂಗಸ್ವಾಮಿ ಯುವಕರ ಬಳಗದಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಗ್ರಾಮಾಂತರ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದರು. ರಾಜಕೀಯ ಇರಲಿ ಕ್ರೀಡೆ ಇರಲಿ ಉತ್ಸಾಹ, ಕಠಿಣ ಪರಿಶ್ರಮ ಮತ್ತು ಸಮಾಜಿಕ ಬದ್ಧತೆಯಿಂದ ಕೆಲಸ ಮಾಡಬೇಕು ಅಗ ಮಾತ್ರ ಗೆಲುವು ಸುಲಭವಾಗುತ್ತದೆ.

ರಾಜಕೀಯದಲ್ಲಿ ಕೆಲವೊಮ್ಮೆ ಸುಲಭವಾಗಿ ಗೆಲುವು ಸಿಕ್ಕರೂ ಅದು ದೀರ್ಘ‌ವಾಗಿ ಇರುವುದಿಲ್ಲ, ದೀರ್ಘ‌ವಾದ ಗೆಲುವಿಗಾಗಿ ಕ್ಷೇತ್ರದ ಆಧ್ಯಯನ, ಸ್ಥಳೀಯ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಹಾಗೂ ಅವುಗಳನ್ನು ಪರಿಹರಿಸುವ ನಂಬಿಕೆ ಮುಖ್ಯ ಎಂದರು.ಕೋಲಾರ ಕ್ಷೇತ್ರದ ಅಧ್ಯಯನ ಮಾಡುವ ವೇಳೆ ಜನತೆಯ ನಾಡಿಮಿಡಿತ ನನಗೆ ಅರ್ಥವಾಗಿದೆ.

ಅವರಿಗೆ ಕ್ಷೇತ್ರವನ್ನು ರಾಯಭಾರಿಯಂತೆ ನೋಡಿಕೊಳ್ಳುವ ನಾಯಕನ ಅಗತ್ಯ ಇದೆ ಹೊರತು ಕೇವಲ ಸರ್ಕಾರದ ಅನುದಾನಕ್ಕೆ ಮಾತ್ರ ಮೀಸಲಾಗುವ ಜನಪ್ರತಿನಿಧಿ ಅಗತ್ಯವಿಲ್ಲ, ಮೂಲ ಸೌಕರ್ಯಗಳ ಜತೆಜತೆಗೆ ಕ್ಷೇತ್ರಕ್ಕೆ ಹೊಸ ಹೊಸ ಯೋಜನೆಗಳನ್ನು ತರುವ ಸಮರ್ಥ ನಾಯಕತ್ವಕ್ಕೆ ಕ್ಷೇತ್ರದ ಜನತೆ ಎದುರು ನೋಡುತ್ತಿದ್ದಾರೆ.ಕ್ಷೇತ್ರದಲ್ಲಿ ಸದ್ಯಕ್ಕೆ ಪಕ್ಷಕ್ಕಿಂತ ಉತ್ತಮ, ಶುದ್ಧ ಚಾರಿತ್ರೆಯುಳ್ಳ ಅಭ್ಯರ್ಥಿಗೆ ಬೆಂಬಲ ನೀಡುವ ವಿಚಾರಗಳು ನಡೆಯುತ್ತಿವೆ ಎಂದು ಹೇಳಿದರು.

ಇನ್ನೂ ತಾಲೂಕಿನಲ್ಲಿ ಕ್ರೀಡಾ ಟೂರ್ನಮೆಂಟ್‌ ಗಳಿಗೆ ಹಣಕಾಸು ನೆರವು ನೀಡಿ ಕ್ರೀಡೆಗೆ ಪೋತ್ಸಾಹ ನೀಡುತ್ತಿರುವ ಅರಿಕೆರೆ ಮಂಜುನಾಥ್‌ ಗೌಡರನ್ನು ಯುವಕರ ಬಳಗ ಆತ್ಮೀಯವಾಗಿ ಸನ್ಮಾನಿಸಿದರು. ಗ್ರಾಪಂ ಮಾಜಿ ಸದಸ್ಯ ವೆಂಕಟೇಶ್‌, ಸುರೇಶ್‌ ಬಾಬು, ಆನಂದ್‌ ಹಾಗೂ ಗ್ರಾಮಸ್ಥರಿದ್ದರು.

Advertisement

ಕೋಲಾರದಲ್ಲಿ ನಾನು ರಾಜಕೀಯವಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಪುಣ್ಯ. ಎಷ್ಟೇ ಅಡೆತಡೆಗಳು ಬಂದರೂ ಅವುಗಳನ್ನು ಎದುರಿಸುವ ಸ್ಥೈರ್ಯ ದೇವರು ಕೊಟ್ಟಿದ್ದಾನೆ. ಈ ಬಾರಿ ಕ್ಷೇತ್ರದ ಬದಲಾವಣೆಗೆ ನನ್ನ ಜೊತೆ ಯುವಕರು ಸಾಥ್‌ ನೀಡಬೇಕು.
ಅರಿಕೆರೆ ಮಂಜುನಾಥ್‌ ಗೌಡ,
ಸಮಾಜ ಸೇವಕ

Advertisement

Udayavani is now on Telegram. Click here to join our channel and stay updated with the latest news.

Next