Advertisement
ಶಿರಿಯಾರ ಸಮೀಪದ ಬಾರಿಬೈಲು ನಿವಾಸಿ, ಮುಂಬಯಿ ಉದ್ಯಮಿ ಮಹಾಬಲ ದೇವಾಡಿಗ ಹಾಗೂ ಆಶಾ ದೇವಾಡಿಗ ಅವರ ಪುತ್ರಿ ಅಕ್ಷತಾ ದೇವಾಡಿಗ ಈ ಸಾಧನೆ ಮಾಡಿದ ಯುವತಿ.
ಈಕೆ ಬಾಲ್ಯದಿಂದಲೂ ಶಿರಿಯಾರ ಬಾರಿಬೈಲಿನ ತನ್ನ ಅಜ್ಜ ನಾರಾಯಣ ದೇವಾಡಿಗರ ಆಶ್ರಯದಲ್ಲಿ ಬೆಳೆದಿದ್ದಳು. ಸ್ಥಳೀಯ ಸಾೖಬ್ರಕಟ್ಟೆಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಕಲಿಯುತ್ತಿದ್ದಾಗ ಶಿಕ್ಷಣದ ಕುರಿತು ಆಸಕ್ತಿ ಕುಂದಿತ್ತು. ಮನೆಯವರು, ಸ್ನೇಹಿತರು, ಅಕ್ಕಪಕ್ಕ ದವರು ಎಷ್ಟೇ ಆಗ್ರ ಹಿಸಿದರೂ ಮಾತು ಕೇಳದೆ ಶಾಲೆ ತ್ಯಜಿಸಿದಳು. ಅನಂತರ 10 ವರ್ಷ ಮನೆಯಲ್ಲೇ ಇದ್ದಳು. ಏಕಲವ್ಯ ಸಾಧಕಿ
10 ವರ್ಷಗಳ ಅನಂತರ ಈಕೆಗೆ ತನ್ನ ಸ್ನೇಹಿತರು ಉನ್ನತ ಶಿಕ್ಷಣ ಪಡೆದು ಸಾಧನೆಯ ಹಾದಿಯಲ್ಲಿರುವುದನ್ನು ಕಂಡು ನಾನು ಕೂಡ ಓದಿ ಒಳ್ಳೆಯ ಉದ್ಯೋಗ ಪಡೆಯಬೇಕೆನಿಸಿತು. ಹೀಗಾಗಿ ಮನೆಯವರಿಗೆ ತಿಳಿಸಿ ಉಡುಪಿಯ ಖಾಸಗಿ ಟ್ಯುಟೋರಿಯಲ್‌ನಲ್ಲಿ ನೇರವಾಗಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿ ಕೊಂಡಳು. ಅಲ್ಲಿ ನಿತ್ಯದ ತರಗತಿಗೆ ಹಾಜರಾಗಲು ಅವಕಾಶವಿದ್ದರೂ ವಯಸ್ಸಿನ ಕಾರಣಕ್ಕೆ ಮುಜುಗರವಾಗುತ್ತದೆ ಮತ್ತು ಅಕ್ಕ-ಪಕ್ಕದವರು ಗೇಲಿ ಮಾಡುತ್ತಾರೆ ಎನ್ನುವ ನಾಚಿಕೆಯಿಂದ ಮನೆಯಲ್ಲೇ ಕುಳಿತು ಅಭ್ಯಾಸ ಆರಂಭಿಸಿದಳು. ಗುರುಗಳ ಸಹಾಯವಿಲ್ಲದೆ ಕೇವಲ ಗೈಡ್ ಮುಂತಾದವುಗಳನ್ನು ಬಳಸಿ ಅಭ್ಯಾಸ ಮಾಡಿದಳು. ಹೀಗೆ ಕಠಿನ ಪರಿಶ್ರಮಪಟ್ಟು ಎಸೆಸೆಲ್ಸಿಯಲ್ಲಿ ಕಳೆದ ವರ್ಷ ಶೇ. 84 ಅಂಕದೊಂದಿಗೆ ಉತ್ತೀರ್ಣಳಾದ ಈಕೆ ಈ ಬಾರಿ ಅದೇ ರೀತಿ ಪಿಯುಸಿ ಕಲಾವಿಭಾಗದ ಪರೀಕ್ಷೆೆ ಬರೆದು ಶೇ. 85 ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಾಳೆ.
Related Articles
– ಅಕ್ಷತಾ, ಸಾಧಕ ವಿದ್ಯಾರ್ಥಿನಿ
Advertisement
-ರಾಜೇಶ್ ಗಾಣಿಗ ಅಚ್ಲಾಡಿ