Advertisement
ಅವರು ಜೂ. 28ರಂದು ಹೆಬ್ರಿ ಸ.ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಕಾರ್ಕಳ ಕ್ಷೇತ್ರ ಶಿಕ್ಷಾಣಾಧಿಕಾರಿ ಶಶಿಧರ್ ಅವರ ನೇತೃತ್ವದಲ್ಲಿ ನಡೆದ ಹೆಬ್ರಿ ಕ್ಷೇತ್ರದ 8 ಪ್ರೌಢಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳ ತಂದೆ-ತಾಯಿ-ಪೋಷಕರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಹೆತ್ತವರು ಪ್ರತಿನಿತ್ಯ ತಮ್ಮ ಮಕ್ಕಳ ದಿನಚರಿ ಗಮನಿಸಬೇಕು. ಶಾಲೆಗೆ ಸೇರಿಸಿದರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಳ್ಳದಿರಿ. ತಮ್ಮ ಮಕ್ಕಳು ಉತ್ತಮ ಫಲಿತಾಂಶ ಪಡೆಯಬೇಕಾದರೆ ದಿನನಿತ್ಯ ಅವರಿಗಾಗಿ ಸ್ವಲ್ಪ ಸಮಯ ಮೀಸಲಿಡಿ. ಶಾಲೆಯಲ್ಲಿ ಕಲಿಸಿದ ಪಾಠದ ಕಡೆ ಗಮನ ನೀಡಿ. ತನ್ನ ಮಗ ಅಥವಾ ಮಗಳು ಉತ್ತಮ ಫಲಿತಾಂಶ ಪಡೆಯ ಬೇಕು ಎಂಬ ಗುರಿ ಪ್ರತಿಯೋರ್ವ ಹೆತ್ತವರಲ್ಲಿ ಇದ್ದಾಗ ಮಾತ್ರ ಮಿಷನ್- 100 ಸಂಕಲ್ಪ ಯಶಸ್ವಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಹೇಳಿದರು. ಧಾರಾವಾಹಿಯಿಂದ ದೂರ ಇರಿ
ಮನೆ, ಮನಸ್ಸು, ಸಮಯ ಕೊಲ್ಲುವಂತಹ ಧಾರಾವಾಹಿಯಿಂದ ದೂರ ಇದ್ದಾಗ ನಾವು ಅಂದು ಕೊಂಡದ್ದನ್ನು ಸಾಧಿಸಲು ಸಾಧ್ಯ. ಹೆತ್ತವರು ಮಕ್ಕಳಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬಿದಾಗ ಪ್ರತಿಯೋರ್ವರ ಮನೆ ಯಿಂದಲೂ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಶಾಲಾಭಿವೃದ್ಧಿ ಸಮಿತಿಯ ಯೋಗೀಶ್ ಭಟ್ ಹೇಳಿದರು.
Related Articles
ಹೆಚ್ಚಿನ ಹೆತ್ತವರು ತಾವು ಕಷ್ಟಪಟ್ಟಿದ್ದೇವೆ, ತಮ್ಮ ಮಕ್ಕಳಿಗೆ ತೊಂದರೆ ಯಾಗಬಾರದು ಎಂಬ ನಿಟ್ಟಿನಲ್ಲಿ ಒಂದಿಷ್ಟು ಆಸ್ತಿ ಮಾಡಲು ಹೋಗುತ್ತಾರೆ. ಇದುವೇ ಅವರಿಗೆ ಮುಳುವಾಗುತ್ತದೆ. ಇದರ ಬದಲು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟು ಅವರನ್ನೇ ಆಸ್ತಿಯಾಗಿ ಮಾಡಿ ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಟಿ.ಜಿ.ಆಚಾರ್ಯ ಹೇಳಿದರು.
Advertisement
ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ರಾವ್, ಕಾರ್ಯದರ್ಶಿ ಶ್ರೀಧರ್ ಆಚಾರ್ಯ , ಚಂದ್ರಶೇಖರ್ ಭಟ್ , ಸ್ನೇಹಲತಾ ಟಿ.ಜಿ., ಶೋಭಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಹೆಬ್ರಿ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ದಿವಾಕರ ಮರಕಾಲ ಸ್ವಾಗತಿಸಿ, ಶಶಿಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ನೋಡೆಲ್ ಅಧಿಕಾರಿ ವೆಂಕಟರಮಣ ಕಲ್ಕೂರ್ ವಂದಿಸಿದರು.
ಮುಖ್ಯಾಂಶಗಳು-ಮಿಷನ್ -100 ಶಿಕ್ಷಣ ಇಲಾಖೆಯ ವಿನೂತನ ಸಂಕಲ್ಪ.
-ಎಸೆಸೆಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲೆ ಕಾರ್ಕಳ ನಂ-.1 ಮಾಡುವ ಗುರಿ.
-ಗ್ರಾಮೀಣ ಪ್ರದೇಶದ ಹೆಬ್ರಿ ಕ್ಷೇತ್ರದ 8 ಪ್ರೌಢಶಾಲಾ ಎಸೆಸೆಲ್ಸಿ ವಿದ್ಯಾರ್ಥಿಗಳ 580 ಪೋಷಕರು ಸಮಾವೇಶದಲ್ಲಿ ಭಾಗಿ .
-ಶಾಸಕರಿಂದ ವಿದ್ಯಾರ್ಥಿ ಪೋಷಕರೊಂದಿಗೆ ಚರ್ಚೆ.
-ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಭಾಗಿ.
-ಉತ್ತಮ ಫಲಿತಾಂಶಕ್ಕೆ ಪೋಷಕರಿಂದ ದೃಢಸಂಕಲ್ಪ.
-ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ.
-ಮೊದಲ ಶಾಲಾ ಕಿರು ಪರೀಕ್ಷೆಯ ಫಲಿತಾಂಶ ಗಮನಿಸಿ ಕಡಿಮೆ ಅಂಕ.ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಗಮನ ಹರಿಸಿ ರಾತ್ರಿ ಪಾಠ.
-ಪ್ರತಿ ಶಾಲೆಯಲ್ಲಿ ವಿದ್ಯಾರ್ಥಿ, ಪೋಷಕರು ಹಾಗೂ ಶಿಕ್ಷಕರ ಸಭೆ.