Advertisement
ಇದಕ್ಕಾಗಿ 6600 ಕೋಟಿ ರೂ. ಒದಗಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
Related Articles
Advertisement
ಶಾಸಕ ರಾಜಕುಮಾರ ಪಾಟೀಲ ಕೋರಿಕೆಯಂತೆ ಪಟ್ಟಣದಲ್ಲಿ ಪುರಸಭೆಯು 25 ಎಕರೆ ಜಮೀನು ನೀಡಿದರೆ ಮತ್ತೆ 2000 ಮನೆ ನಿರ್ಮಿಸಿ ಕೊಡಲಾಗುವುದು ಎಂದು ಸಚಿವ ವಿ.ಸೋಮಣ್ಣ ಅವರು ಭರವಸೆ ನೀಡಿದರು.
ಗ್ರಾಮೀಣ ಭಾಗದಲ್ಲೂ ಮನೆ ನಿರ್ಮಿಸಿ ಬಡವರಿಗೆ ನೀಡಲು ನಿರ್ಧರಿಸಿದ್ದು, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿ ಕಳುಹಿಸಲು ಶೀಘ್ರವೆ ಜಿಲ್ಲಾ ಪಂಚಾಯತ್ ಸಿ.ಇ.ಓಗಳೊಂದಿಗೆ ಸಭೆ ಕರೆದು ಚರ್ಚಿಸುವೆ ಎಂದರು.
ರಾಜಕಾರಣ ಚುನಾವಣೆ ನಡೆಯುವ ಒಂದು ತಿಂಗಳಿಗೆ ಸೀಮಿತವಾಗಿರಬೇಕು. ನಿಂದಕರ ಬಗ್ಗೆ ತಲೆಕೆಡಿಸಿಕೊಳ್ಳದೆ ದೂರದೃಷ್ಠಿ ಚಿಂತನೆಯೊಂದಿಗೆ ಕ್ಷೇತ್ರದ ಜನತೆಗೆ ಜನಪರ ಕಾರ್ಯಕ್ರಮ ನೀಡುವತ್ತ ಗಮನ ಹರಿಸಿ. ಜನರ ಆಶೀರ್ವಾದ ನಿಮ್ಮ ಮೇಲಿರಲಿದೆ ಎಂದು ಶಾಸಕ ರಾಜಕುಮಾರ ಪಾಟೀಲ ಅವರಿಗೆ ಸಲಹೆ ನೀಡಿದರು.
ಇದಕ್ಕೂ ಮುನ್ನ ಶಾಸಕ ಡಾ.ರಾಜಕುಮಾರ ಪಾಟೀಲ ತೇಲ್ಕೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸೇಡಂ ಕ್ಷೇತ್ರಕ್ಕೆ ಈಗಾಗಲೆ 1000 ಮನೆ ಮಂಜೂರು ಮಾಡಿದಕ್ಕಾಗಿ ವಸತಿ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಅವರು ನನ್ನ ಕ್ಷೇತ್ರದಲ್ಲಿ ಸೂರಿಲ್ಲದವರು ಯಾರು ಇರಬಾರದೆಂಬ ಗುರಿ ಹೊಂದಿದ್ದು, ಪುರಸಭೆಯಿಂದ ಇನ್ನೂ 25 ಎಕರೆ ಜಮೀನು ಕೊಡತ್ತೀವಿ, ಇನ್ನೂ 2000 ಮನೆ ನಿರ್ಮಿಸಿಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಸೇಡಂ ಕ್ಷೇತ್ರದಲ್ಲಿ 75 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ 639 ಕೋಟಿ ರೂ. ಮೊತ್ತದ ಕಾಗಿಣಾ ಏತ ನೀರಾವರಿ ಯೋಜನೆಗೆ ಈಗಾಗಲೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂದಿನ ತಿಂಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೇಡಂ ಪಟ್ಟಣಕ್ಕೆ ಬರಲಿದ್ದು, 150 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ಸೇಡಂ ಪಟ್ಟಣದ ಅಭಿವೃದ್ಧಿಗೆ 119.64 ಕೋಟಿ ರೂ. ಖರ್ಚು ಮಾಡಲಾಗಿದೆ. ಕಳೆದ 4 ವರ್ಷದಲ್ಲಿ 500 ಕೋಟಿ ರು. ಅನುದಾನ ಕ್ಷೇತ್ರಕ್ಕೆ ತರಲಾಗಿದೆ. ಕ್ಷೇತ್ರದ 100 ದೇವಸ್ಥಾನಗಳ ಅಭಿವೃದ್ಧಿಗೆ 12 ಕೋಟಿ ರೂ. ವ್ಯಯ ಮಾಡಲಾಗಿದ್ದು, ಮುಂದಿನ ವರ್ಷ ಇನ್ನೂ 6 ಕೋಟಿ ರೂ. ದೇವಸ್ಥಾನಕ್ಕೆ ನೀಡಲಾಗುವುದು. ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿ 120 ಕೋಟಿ ರು. ಖರ್ಚು ಮಾಡಿ 53 ಗ್ರಾಮಗಳಿಗೆ ಕುಡಿಯುವ ನೀರಿನ ನಲ್ಲಿ ಸಂಪರ್ಕ ಒದಗಿಸಲಾಗಿದೆ. 4ನೇ ಹಂತದಲ್ಲಿ ಇನ್ನೂ 100 ಹಳ್ಳಿಗಳಿಗೆ 150 ಕೋಟಿ ರೂ. ಖರ್ಚು ಮಾಡಿ ಮನೆ ಮನೆಗೆ ಕುಡಿಯುವ ನೀರು ಒದಗಿಸಲು ಡಿ.ಪಿ.ಆರ್ ಸಿದ್ಧಪಡಿಸಿದೆ ಎಂದರು.
ಸಂಸದ ಡಾ.ಉಮೇಶ ಜಾಧವ ಅವರು ಮಾತನಾಡಿ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಬಡವರಿಗೆ ಮನೆ ಒದಗಿಸುವ ಮಹತ್ತರ ಕಾರ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡುತ್ತಿದ್ದು, ಇದಕ್ಕಾಗಿ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ. ಹರ್ ಘರ್ ಜಲ್ ಯೋಜನೆಯಡಿ ಗ್ರಾಮೀಣ ಭಾಗದ ಪ್ರತಿ ಮನೆಗೆ ನೀರಿನ ನಲ್ಲಿ ಸಂಪರ್ಕ ಒದಗಿಸಲಾಗುತ್ತಿದೆ ಎಂದರು.
ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸದಸ್ಯ ನಾಗರಾಜ ಎಂ.ಬಿರಾದರ, ಸೇಡಂ ಪುರಸಭೆ ಅಧ್ಯಕ್ಷೆ ಚೆನ್ನಮ್ಮ ಬಿ. ಪಾಟೀಲ, ಉಪಾಧ್ಯಕ್ಷ ಶಿವಾನಂದ ಸ್ವಾಮಿ, ಕೊಳಗೇರಿ ಅಭಿವೃದ್ಧಿ ಮಂಡಳಿಯ
ಆಯುಕ್ತ ಬಿ.ವೆಂಕಟೇಶ, ತಾಂತ್ರಿಕ ನಿರ್ದೇಶಕ ಬಿ.ಎಂ.ಕಪನಿಗೌಡ, ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ, ಮುಖ್ಯಾಧಿಕಾರಿ ಆರ್.ಪ್ರಹ್ಲಾದ್, ಎಇಇ ಮಲ್ಲಿಕಾರ್ಜುನ, ಇಂಜಿನೀಯರ್ ಲಕ್ಷ್ಮೀಕಾಂತ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳಿದ್ದರು.