Advertisement
ಸಮಿತಿ ರಚನೆ, ಚಿಂತನ ಶಿಬಿರ ಆಯೋಜನೆಕಾಂಗ್ರೆಸ್ನ ಸವಾಲುಗಳ ಅಧ್ಯಯನಕ್ಕೆ ಹೊಸ ಸಮಿತಿ
ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅಧ್ಯಯನ ನಡೆಸಲು ಹೊಸ ಸಮಿತಿಯೊಂದನ್ನು ರಚಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ನಿರ್ಧರಿಸಿದ್ದಾರೆ.
Related Articles
Advertisement
ಮುಖಂಡರ ಆಕ್ಷೇಪ: ಕಿಶೋರ್ ಕಾಂಗ್ರೆಸ್‌ಗೆ ಸೇರುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರೂ, ಅವರ ಮಾಲೀ ಕತ್ವದ ಐ- ಪ್ಯಾಕ್ ಸಂಸ್ಥೆ 2023ರ ತೆಲಂಗಾಣ ವಿಧಾನ ಸಭೆ ಚುನಾವಣೆ ಗಾಗಿ ತೆಲಂಗಾಣ ರಾಷ್ಟ್ರ ಸಮಿತಿ ಜತೆಗೆ ಒಪ್ಪಂದ ಮಾಡಿಕೊಂಡ ಬಗ್ಗೆಯೂ ಸಭೆ ಯಲ್ಲಿ ಪ್ರಸ್ತಾಪವಾಗಿದೆ. ಈ ವೇಳೆ, ಕಿಶೋರ್ ನಿರ್ಧಾರಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ.
ಖರ್ಗೆಗೆ ಹೊಣೆ: ಮೇ 13-15ರ ವರೆಗೆ ನಡೆ ಯುವ ಚಿಂತನ ಶಿಬಿರದಲ್ಲಿ ರಾಜಕೀಯ ನಿರ್ಣಯ ರಚಿಸುವ ಹೊಣೆಯನ್ನು ರಾಜ್ಯ Ó ಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯ ವರಿಗೆ ನೀಡಲಾಗಿದೆ. ಅವರಿಗೆ ಗುಲಾಂ ನಬಿ ಆಜಾದ್, ಅಶೋಕ್ ಚವಾಣ್, ಎನ್.ಉತ್ತಮ್ ಕುಮಾರ್ ರೆಡ್ಡಿ, ಶಶಿ ತರೂರ್, ಗೌರವ್ ಗೊಗೊಯ್, ಸಪ್ತಗಿರಿ ಶಂಕರ್ ಉಲಾಕಾ, ರಾಗಿಣಿ ನಾಯಕ್ ನೆರವಾಗಲಿದ್ದಾರೆ ಎಂದು ಸುಜೇìವಾಲ ತಿಳಿಸಿದ್ದಾರೆ.
73 ಸಾವಿರ ಬೂತ್‌ಗಳಲ್ಲಿ ಬಲವರ್ಧನೆಗೆ ಕ್ರಮಕಳಪೆ ಸಾಧನೆಗೈದಿರುವ ಕಡೆ ಗಮನ ನೆಟ್ಟ ಬಿಜೆಪಿ
ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ದೇಶಾದ್ಯಂತ ಪಕ್ಷವು ದುರ್ಬಲವಾಗಿರು ವಂಥ 73 ಸಾವಿರ ಬೂತ್‌ಗಳನ್ನು ಗುರುತಿಸಿದ್ದು, ಅಲ್ಲಿ ಪಕ್ಷವನ್ನು ಬಲಪಡಿಸಲೆಂದೇ ವಿಶೇಷ ಸಮಿತಿಯೊಂದನ್ನು ರಚಿಸಿದೆ. ಈ ಬೂತ್‌ಗಳ ಪೈಕಿ ಅತಿ ಹೆಚ್ಚು ಇರುವುದು ದಕ್ಷಿಣ ಮತ್ತು ಪೂರ್ವ ರಾಜ್ಯಗಳಲ್ಲಿ ಎಂದು ಮೂಲಗಳು ತಿಳಿಸಿವೆ. ಇದರ ಜತೆಗೆ, ಕಳೆದ ಲೋಕಸಭೆ ಚುನಾವಣೆಯಲ್ಲಿ 150 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷವು ಕಳಪೆ
ಸಾಧನೆ ಮಾಡಿದ್ದು, ಅಲ್ಲಿಯೂ ಬಿಜೆಪಿ ಪರ ಜನರು ಆಕರ್ಷಿತರಾಗುವಂತೆ ನೀಲನಕ್ಷೆ ರೂಪಿಸಲೂ ಹೈಕಮಾಂಡ್ ಸಜ್ಜಾಗಿದೆ. ಸೋಮವಾರ ಬಿಜೆಪಿ ಉಪಾಧ್ಯಕ್ಷ ಬೈಜಯಂತ್ ಪಾಂಡೆ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ ಮತ್ತು ದಿಲೀಪ್ ಘೋಷ್, ಎಸ್‌ಸಿ ಘಟಕದ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ಮತ್ತಿತರರು ಪಾಲ್ಗೊಂಡಿದ್ದರು. 2014 ಮತ್ತು 2019ರ ಫಲಿತಾಂಶಗಳ ಆಧಾರದಲ್ಲಿ ಈ 73 ಸಾವಿರ ಬೂತ್‌ಗಳನ್ನು ಗುರುತಿಸಲಾಗಿದೆ. 2024ರೊಳಗಾಗಿ ಈ ಬೂತ್‌ಗಳಲ್ಲಿ ನಿಧಾನವಾಗಿ ಬಿಜೆಪಿ ಮತ ಹಂಚಿಕೆಯನ್ನು ಹೆಚ್ಚಳ ಮಾಡುವ ಗುರಿಯನ್ನು ಹಾಕಿಕೊಳ್ಳ ಲಾಗಿದೆ. ಜತೆಗೆ, ಅಲ್ಲಿ ಪಕ್ಷ ವನ್ನು ಬಲಪಡಿಸುವ ಕಾರ್ಯ ತಂತ್ರಗಳನ್ನು ಒಳಗೊಂಡ ವರದಿಯನ್ನೂ ಸಿದ್ಧಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಸರಕಾರದ 3ನೇ ವರ್ಷಾಚರಣೆಗೆ ಸಿದ್ಧತೆ
ಕೇಂದ್ರ ಸಚಿವ ಅನುರಾಗ್ ಠಾಕೂರ್
ಸೇರಿದಂತೆ ಬಿಜೆಪಿಯ ಹಿರಿಯ ನಾಯಕರ ತಂಡವು ಸೋಮವಾರ ಸಭೆ ನಡೆಸಿ, ಮೋದಿ ನೇತೃತ್ವದ ಕೇಂದ್ರ ಸರಕಾರದ(ಎರಡನೇ ಅವಧಿಯ) 3ನೇ ವರ್ಷಾಚರಣೆ ಏರ್ಪಡಿಸುವ ಕುರಿತು ಚರ್ಚೆ ನಡೆಸಿದೆ. ಸರಕಾರದ ಸಾಧನೆಗಳನ್ನು ಬಿಂಬಿಸುವ ಕಾರ್ಯಕ್ರಮಗಳು ಸೇರಿದಂತೆ 3ನೇ ವರ್ಷಾಚರಣೆಗೆ ಯಾವ ಯಾವ ಚಟುವಟಿಕೆಗಳನ್ನು ಆಯೋಜಿಸಬೇಕು ಎಂಬ ಬಗ್ಗೆ ಸದ್ಯದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ.