Advertisement

ಮಳೆ ಪಂದ್ಯದಲ್ಲಿ ಬಾಂಗ್ಲಾಕ್ಕೆ ಟಾರ್ಗೆಟ್‌ ಗೊಂದಲ

10:22 PM Mar 30, 2021 | Team Udayavani |

ನೇಪಿಯರ್‌: ನ್ಯೂಜಿಲ್ಯಾಂಡ್‌ ಎದುರಿನ ದ್ವಿತೀಯ ಟಿ20 ಪಂದ್ಯದಲ್ಲಿ ಡಿಎಲ್‌ಎಸ್‌ ಟಾರ್ಗೆಟ್‌ ಗೊಂದಲಕ್ಕೆ ಸಿಲುಕಿದ ಬಾಂಗ್ಲಾದೇಶ 28 ರನ್ನುಗಳ ಸೋಲಿಗೆ ತುತ್ತಾಗಿ ಸರಣಿ ಕಳೆದುಕೊಂಡಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ 17.5 ಓವರ್‌ಗಳಲ್ಲಿ 5ಕ್ಕೆ 173 ರನ್‌ ಮಾಡಿದ ವೇಳೆ ಮಳೆ ಸುರಿಯಿತು. ಬಳಿಕ ಬಾಂಗ್ಲಾಕ್ಕೆ 16 ಓವರ್‌ಗಳ ಇನ್ನಿಂಗ್ಸ್‌ ನಿಗದಿಗೊಳಿಸಲಾಯಿತು. ಆದರೆ ಟಾರ್ಗೆಟ್‌ ಎಷ್ಟು ಎಂಬುದು ಒಂದೂವರೆ ಓವರ್‌ ಆಗುವ ತನಕವೂ ಬಾಂಗ್ಲಾಕ್ಕೆ ಸ್ಪಷ್ಟವಿರಲಿಲ್ಲ. ಅದು 16 ಓವರ್‌ಗಳಲ್ಲಿ 148 ರನ್‌ ಗುರಿ ಎಂದೇ ಭಾವಿಸಿತ್ತು. ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಮಂಡಳಿ ತನ್ನ ಅಧಿಕೃತ ಟ್ವಿಟರ್‌ನಲ್ಲೂ 148 ರನ್‌ ಟಾರ್ಗೆಟ್‌ ಎಂದೇ ದಾಖಲಿಸಿತ್ತು. ಬಳಿಕ ಗುರಿ 170 ರನ್‌ ಎಂದು ಸರಿಪಡಿಸಲಾಯಿತು.

ಈ ಸಂದರ್ಭದಲ್ಲಿ ಬಾಂಗ್ಲಾದೇಶ ತಂಡದ ಕೋಚ್‌ ರಸೆಲ್‌ ಡೊಮಿಂಗೊ ಮತ್ತು ಮ್ಯಾನೇಜರ್‌ ಶಬ್ಬೀರ್‌ ಖಾನ್‌ ಸೇರಿಕೊಂಡು ಮ್ಯಾಚ್‌ ರೆಫ್ರಿ ಜೆಫ್‌ ಕ್ರೋವ್‌ ಅವರೊಂದಿಗೆ ಚರ್ಚೆ ನಡೆಸಿದರು. 4ನೇ ಅಂಪಾಯರ್‌ ಶಾನ್‌ ಹೇಗ್‌ ಕೂಡ ಜತೆಗೂಡಿ ಟಾರ್ಗೆಟ್‌ ಗೊಂದಲವನ್ನು ಪರಿಹರಿಸಿದರು.

ಇಲ್ಲಿಯೂ ಎಡವಟ್ಟು!
ಆದರೆ ಇಲ್ಲಿಯೂ ಎಡವಟ್ಟಾಗಿತ್ತು. ಲೆಕ್ಕಾಚಾರದಂತೆ ಬಾಂಗ್ಲಾದೇಶದ ಗುರಿ 171 ರನ್‌ ಆಗಬೇಕಿತ್ತು. ಇದನ್ನು ಸರಿಪಡಿಸಿದ್ದು ಬಾಂಗ್ಲಾದ 13ನೇ ಓವರಿನಲ್ಲಿ! ಅಂತಿಮವಾಗಿ ಬಾಂಗ್ಲಾದೇಶ 7 ವಿಕೆಟಿಗೆ 142 ರನ್‌ ಮಾಡಿ ಶರಣಾಯಿತು.

ಸಂಕ್ಷಿಪ್ತ ಸ್ಕೋರ್‌
ನ್ಯೂಜಿಲ್ಯಾಂಡ್‌-17.5 ಓವರ್‌ಗಳಲ್ಲಿ 5 ವಿಕೆಟಿಗೆ 173 (ಫಿಲಿಪ್ಸ್‌ ಔಟಾಗದೆ 58, ಮಿಚೆಲ್‌ ಔಟಾಗದೆ 34, ಗಪ್ಟಿಲ್‌ 21, ಮಹೆದಿ ಹಸನ್‌ 45ಕ್ಕೆ 2). ಬಾಂಗ್ಲಾದೇಶ-16 ಓವರ್‌ಗಳಲ್ಲಿ 7 ವಿಕೆಟಿಗೆ 142 (ಸರ್ಕಾರ್‌ 51, ನೈಮ್‌ 38, ಸೌಥಿ 21ಕ್ಕೆ 2, ಬೆನೆಟ್‌ 31ಕ್ಕೆ 2).

Advertisement

ಪಂದ್ಯಶ್ರೇಷ್ಠ: ಗ್ಲೆನ್‌ ಫಿಲಿಪ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next