ಕಳೆದ ಎರಡು ತಿಂಗಳಿನಿಂದ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಬಂದ್ ಆಗಿರುವುದರಿಂದ ಇಡೀ ಚಿತ್ರರಂಗವೇ ಸ್ತಬ್ಧವಾಗಿದೆ. ಶೂಟಿಂಗ್, ಪ್ರಮೋಶನ್, ರಿಲೀಸ್ ಎಲ್ಲ ಸ್ಥಗಿತಗೊಂಡಿರುವುದರಿಂದ ಸಿನಿಮಾದ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಎಲ್ಲರೂ ಮನೆಯಲ್ಲೇ ಕೂರುವಂತಾಗಿದೆ. ಇಂಥ ಸಂದರ್ಭದಲ್ಲಿ ನಮ್ಮ ತಾರೆಯರು ಬೇರೆ ಏನು ಮಾಡುತ್ತಿದ್ದಾರೆ. ಅವರ ಚಟುವಟಿಕೆಗಳೇನು? ದಿನಚರಿ ಹೇಗಿದೆ? ಅವರ ಭವಿಷ್ಯದ ಯೋಚನೆಗಳು ಏನಿರಬಹುದು ಎಂಬ ಕುತೂಹಲ ಸಹಜ ವಾಗಿಯೇ ಸಿನಿಪ್ರಿಯರು ಮತ್ತು ಅಭಿಮಾನಿಗಳಲ್ಲಿ ಇರುತ್ತದೆ.
ಇಂಥದ್ದೊಂದು ಕುತೂಹಲವನ್ನು ತಣಿಸುವ ಸಲುವಾಗಿ ಈ ಲಾಕ್ ಡೌನ್ ಸಮಯದಲ್ಲಿ “ಉದಯವಾಣಿ’ ಸಿನಿತಾರೆಯರನ್ನು ಅವರಿರುವ ಜಾಗದಿಂದಲೇ ನೇರವಾಗಿ ಮಾತನಾಡಿಸಿ, ಓದುಗರ ಮುಂದೆ ಅವರ ಅನಿಸಿಕೆ, ಅಭಿಪ್ರಾಯಗಳು ಡಿಜಿಟಲ್ ವೇದಿಕೆಯ ಮೂಲಕ ಹಂಚಿಕೊಳ್ಳುವ ಪುಟ್ಟ ಪ್ರಯತ್ನ ಮಾಡಿದೆ.
“ತಾರೆಗಳ ತೋಟದಲ್ಲಿ…’ ಹೆಸರಿನಲ್ಲಿ “ಉದಯವಾಣಿ’ ನಡೆಸಿದ ವೆಬಿನಾರ್ ಸಂಚಿಕೆಯಲ್ಲಿ ನಟ ಸಂಚಾರಿ ವಿಜಯ್, ಸಂಗೀತ ನಿರ್ದೇಶಕ ಕೆ. ಕಲ್ಯಾಣ್, ನಟಿಯರಾದ ಶ್ವೇತಾ ಶ್ರೀವಾತ್ಸವ್ ಮತ್ತು ರೂಪಿಕಾ ಭಾಗವಹಿಸಿ ಒಂದಷ್ಟು ಮಾತನಾಡಿದ್ದಾರೆ. ಈ ವೀಡಿಯೋವನ್ನು “ಉದಯವಾಣಿ’ಯ ಯೂಟ್ಯೂಬ್ ಚಾನೆಲ್ ಅಥವಾ ಫೇಸ್‌ಬುಕ್ ಪುಟದಲ್ಲಿ ನೋಡಬಹುದು.
ಇವತ್ತು ಎಲ್ಲ ಕಡೆ ನೆಗೆಟಿವ್ ಅನಿಸುವಂಥ ವಾತಾವರಣವಿದೆ. ಇಂಥ ಸಂದರ್ಭದಲ್ಲಿ ನಾವು ಆದಷ್ಟು ಪಾಸಿಟಿವ್ ಆಗಿದ್ದು, ಬೇರೆಯವರೊಂದಿಗೂ ಪಾಸಿಟಿವ್ ಅನಿಸುವಂಥ ವಿಷಯಗಳನ್ನು ಹಂಚಿಕೊಳ್ಳಬೇಕು. “ಉದಯವಾಣಿ’ ಇದಕ್ಕೊಂದು ಒಳ್ಳೆಯ ವೇದಿಗೆ ಕಲ್ಪಿಸಿಕೊಟ್ಟಿದೆ.
Related Articles
– ರೂಪಿಕಾ, ನಟಿ
ನಾವೆಲ್ಲ ಒಟ್ಟಾಗಿ ಕೂತು ಸಿನಿಮಾದ ಬಗ್ಗೆ, ಸಿನಿಮಾ ರಂಗದ ಬಗ್ಗೆ ಮಾತನಾಡಿ ಎಷ್ಟೋ ದಿನಗಳಾಗಿತ್ತು. “ತಾರೆಗಳ ತೋಟದಲ್ಲಿ…’ ಕಾರ್ಯಕ್ರಮ ಕೊರೊನಾ, ಲಾಕ್ ಡೌನ್ ವಿಷಯಗಳ ಹೊರತಾಗಿಯೂ ಒಂದಷ್ಟು ಬೇರೆ ಬೇರೆ ವಿಚಾರಗಳನ್ನು ಚರ್ಚಿಸಲು ಅವಕಾಶ ಮಾಡಿಕೊಟ್ಟಿತು.
-ಸಂಚಾರಿ ವಿಜಯ್, ನಟ
ವಿಡಿಯೋ ನೋಡಿ:Udayavani Exclusive Sandalwood Interview with ShwethaSrivastsva, SanchariVijay, Roopika, K Kalyan
ಇಡೀ ಸಿನಿಮಾರಂಗ ಒಂದು ಕುಟುಂಬವಿದ್ದಂತೆ. ಇಲ್ಲಿ ಇರುವವರೆಲ್ಲೂ ಕುಟುಂಬದ ಸದಸ್ಯರಿದ್ದಂತೆ. ಆದರೆ ಈ ಕೊರೊನಾ ಭಯ, ಲಾಕ್‌ಡೌನ್ ನಿಂದಾಗಿ ಒಬ್ಬರನ್ನೊಬ್ಬರು ಕೂತು ಮುಕ್ತವಾಗಿ ಮಾತನಾಡಲೂ ಸಾಧ್ಯವಾಗಿರಲಿಲ್ಲ. ಇಂಥ ಸಂದರ್ಭದಲ್ಲಿ ಎಲ್ಲರನ್ನೂ ಆನ್ ಲೈನ್ ವೇದಿಕೆಯಲ್ಲಿ ಕೂರಿಸಿ ಒಟ್ಟಾಗಿ ಮಾತನಾಡಿದ ಕೆಲಸ ನಿಜಕ್ಕೂ ಒಳ್ಳೆಯ ಪ್ರಯತ್ನ.
-ಕೆ .ಕಲ್ಯಾಣ್, ಸಂಗೀತ ನಿರ್ದೇಶಕ
ಲಾಕ್‌ಡೌನ್‌ನಿಂದಾಗಿ ಸಿನಿಮಾ ಶೂಟಿಂಗ್, ರಿಲೀಸ್ ಇಲ್ಲದೆ, ಇಲ್ಲಿಯ ಸ್ನೇಹಿತರು, ಹಿತೈಷಿಗಳನ್ನು ನೋಡದೆ ಈ ವಾತಾವರಣವನ್ನು ನಾವೆಲ್ಲ ತುಂಬ ಮಿಸ್ ಮಾಡಿಕೊಂಡಿದ್ದೆವು. “ಉದಯವಾಣಿ’ ಮತ್ತೆ ಅಂಥದ್ದೊಂದು ವಾತಾವರಣವನ್ನು ಕಲ್ಪಿಸಿ ಎಲ್ಲವನ್ನೂ ನೆನೆಯುವಂತೆ ಮಾಡಿತು.
-ಶ್ವೇತಾ ಶ್ರೀವಾತ್ಸವ್, ನಟಿ