Advertisement

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

06:28 PM Sep 03, 2020 | Hari Prasad |

ಯಾವುದೇ ಮುಖದ ರುದ್ರಾಕ್ಷಿಗಳನ್ನು ಎಲ್ಲಾ ಮತದವರು ಹೆಂಗಸರು, ಗಂಡಸರು, ಮಕ್ಕಳು, ಹಿರಿಯರು ಹೀಗೆ ಯಾರು ಬೇಕಾದರೂ ಧರಿಸಬಹುದು.

Advertisement

ಇದಕ್ಕೆ ವಿಶೇಷವಾದ ಮಂತ್ರೋಪದೇಶಗಳು ಕೂಡ ಅಗತ್ಯವಿಲ್ಲ ಆದರೆ ಧಾರಕನು, ಶಾರೀರಿಕ, ಮಾನಸಿಕ ಮತ್ತು ವಾಕ್‌ ಶುದ್ಧತೆಯನ್ನು ಅನುಸರಿಸಿದರೆ ಮಾತ್ರ ಫ‌ಲಪ್ರಾಪ್ತಿಯಾಗುವುದಷ್ಟೇ.

1. ರುದ್ರಾಕ್ಷಿಯನ್ನು ಪವಿತ್ರವಾದ ಪೂಜಾ ಸ್ಥಳದಲ್ಲಿರಿಸಿ ಪೂಜಿಸಬೇಕು. ಇದರಿಂದ ಮನೆಯಲ್ಲಿ ಚೈತನ್ಯ ಶಕ್ತಿಯುಂಟಾಗುವುದು.

2. ಐದು – ಆರು ತಿಂಗಳಿಗೊಮ್ಮೆಯಾದರೂ, ಒಂದರಿಂದ ಎರಡು ದಿವಸಗಳವರೆಗೆ ಗಂಧದೆಣ್ಣೆ ಯಾ ಎಳ್ಳೆಣ್ಣೆಯಲ್ಲಿರಿಸಬೇಕು.

3. ರುದ್ರಾಕ್ಷಿಗಳನ್ನು ಚಿನ್ನ ಅಥವಾ ಬೆಳ್ಳಿಯನ್ನು ಕಟ್ಟಿಸಿ ಧರಿಸಬೇಕು.

Advertisement

4. ರುದ್ರಾಕ್ಷಿಯನ್ನು ದೇವಸ್ಥಾನ, ಮನೆ, ಪೂಜಾಗೃಹ ಅಥವಾ ಕೆಲಸ ಮಾಡುವ ಸ್ಥಳ ಬಾಗಿಲಿನ ಮೇಲ್ಭಾಗದಲ್ಲಿ ಇರಿಸಬಹುದು.

5. ರುದ್ರಾಕ್ಷಿ ಧಾರಣೆಯಿಂದ ಸಾಮಾನ್ಯವಾಗಿ ಇತರರ ಮೇಲೆ ಪ್ರೀತಿ, ಅನುಕಂಪ, ನಂಬಿಕೆ, ಸ್ನೇಹಪರತೆ ಉಂಟಾಗಿ ದೈವಭಕ್ತಿ ವೃದ್ಧಿಸುವುದು.

ಇದನ್ನೂ ಓದಿ: ರುದ್ರಾಕ್ಷಿ ಶಾರೀರಿಕ, ಮಾನಸಿಕ ಆರೋಗ್ಯದ ಗವಾಕ್ಷಿ- ಇಲ್ಲಿದೆ ವಿಶೇಷತೆಗಳು

ರುದ್ರಾಕ್ಷಿ ಧಾರಣೆ ಸಲ್ಲದ ಸಂದರ್ಭಗಳು

1. ಲೈಂಗಿಕ ಕ್ರಿಯೆಯಲ್ಲಿ ಮತ್ತು ಶಾರೀರಿಕ ಅಶುದ್ಧತೆಯಿರುವಾಗ.

2. ರಾತ್ರಿ ನಿದ್ರೆ ಕಾಲದಲ್ಲಿ ಜಾಗ್ರತೆಯಾಗಿ ತೆಗೆದಿರಬೇಕು.

3. ರುದ್ರಭೂಮಿ, ಶವಗಳನ್ನು ನೋಡಲು ಹೋಗುವ ಸಂದರ್ಭದಲ್ಲಿ.

4. ರುದ್ರಾಕ್ಷಿ ಅಥವಾ ಹಾರಗಳನ್ನು ಇನ್ನೊಬ್ಬರೊಡನೆ ಬದಲಿಸಬಾರದು.

5. ಮಾಂಸಾಹಾರಿಗಳಿಗೆ ರುದ್ರಾಕ್ಷಿ ಧಾರಣೆಯಿಂದ ದೋಷವಿಲ್ಲದಿದ್ದರೂ ಫ‌ಲಪ್ರಾಪ್ತಿಯಾಗುವುದಿಲ್ಲ,

ಇದನ್ನೂ ಓದಿ: ಔಷಧೀಯ ಗುಣಗಳ ರುದ್ರಾಕ್ಷಿ; ಇದರಲ್ಲಿರುವ ವಿಟಮಿನ್ ಗುಣದ ಸಂಪೂರ್ಣ ಮಾಹಿತಿ

ಕೃತಕ ರುದ್ರಾಕ್ಷಿಗಳಿಂದ ವಿಶೇಷ ಫ‌ಲಪ್ರಾಪ್ತಿಯಾಗುವುದಿಲ್ಲ

ಕೃತಕ ರುದ್ರಾಕ್ಷಿಗಳು ಅಪರೂಪವಾದ ಏಕಮುಖ, ದ್ವಿಮುಖ ಮತ್ತು ಬಹುಮುಖ (14–27) ರುದ್ರಾಕಿಗಳಿಗಿರುವ ಲಕ್ಷಗಟ್ಟಲೆ ರೂಪಾಯಿ ಬೆಲೆಗಳನ್ನು ಗಮನಿಸಿ, ಹಲವಾರು ವ್ಯಾಪಾರಸ್ಥರು ಇಂಥ ಕೃತಕ ರುದ್ರಾಕ್ಷಿಗಳನ್ನು ತಯಾರಿಸಿ, ಮುಗ್ಧ ಜನರನ್ನು ಮೋಸಗೊಳಿಸಿ ದುರ್ಲಾಭ ಪಡೆಯುತ್ತಾರೆ.

ಇದನ್ನೂ ಓದಿ: ರುದ್ರಾಕ್ಷಿ ಧಾರಣೆಯ ವೈಜ್ಞಾನಿಕ ಉಪಯೋಗಗಳು ನಿಮಗೆ ಗೊತ್ತೇ?

ವಿಶೇಷ ತರಹದ ಪ್ಲಾಸ್ಟಿಕ್‌, ಹೂಗಳಿಂದ, ಸುಲಭವಾಗಿ ದೊರೆಯುವ 4,5,6, ಮುಖಿ ರುದ್ರಾಕ್ಷಿಗಳ ಹೊರಮೈಯ ರೇಖೆಗಳನ್ನು ಕೌಶಲದಿಂದ ತುಂಬಿಸಿ ಏಕ ಮುಖಿ, ದ್ವಿಮುಖಿ ರುದ್ರಾಕ್ಷಿಯನ್ನು ತಯಾರಿಸುತ್ತಾರೆ. ಅಂತೆಯೇ, ಹೆಚ್ಚು ರೇಖೆಗಳನ್ನು ಹೊರಮೈಯಲ್ಲಿ ಜಾಗ್ರತೆಯಾಗಿ ನಿರ್ಮಿಸಿ ಬಹುಮುಖಿ ರುದ್ರಾಕ್ಷಿಗಳನ್ನು ತಯಾರಿಸುತ್ತಾರೆ.

ಇದನ್ನೂ ಓದಿ: ಹೇಗಿರುತ್ತದೆ ರುದ್ರಾಕ್ಷಿ ಮರ? ಏಕಮುಖಿ ರುದ್ರಾಕ್ಷಿ ಶ್ರೇಷ್ಠವೇ? : ಇಲ್ಲಿದೆ ಫುಲ್ ಡಿಟೇಲ್ಸ್

ಕೃತಕ ರುದ್ರಾಕ್ಷಿಗಳನ್ನು ಗುರುತಿಸುವುದು ತುಂಬಾ ಕಷ್ಟ ನೈಜ ರುದ್ರಾಕ್ಷಿಯನ್ನು ಪ್ರಾಮಾಣಿಕ ವ್ಯಾಪಾರಸ್ಥರಿಂದ ಖರೀದಿಸಬೇಕು. ಇಂಥ ಏಕಮುಖಿ ರುದ್ರಾಕ್ಷಿ ಗಳು ಕೃತಕವೆಂದು ತಿಳಿಯದೆ, ಪಾಶ್ಚಾತ್ಯ ದೇಶಗಳಲ್ಲಿ ಒಂದು ಸಾವಿರದಿಂದ 50 ಸಾವಿರ ಡಾಲರುಗಳ ಬೆಲೆಯಲ್ಲಿ ಕೊಂಡುಕೊಳ್ಳುವವರಿದ್ದಾರೆ. ಆದರೆ ನಿಜವಾದ ಏಕಮುಖಿ ರುದ್ರಾಕ್ಷಿ ಪಂಚಮುಖಿಗಳಾದರೂ, ಕೆಲವು 3,4,6,7, ಮುಖಗಳ ರುದ್ರಾಕ್ಷಿಗಳು ಸಿಕ್ಕಿದೆ. ಈ ವರ್ಷ ವಿಶೇಷವಾದ ಗಣೇಶ ರುದ್ರಾಕ್ಷಿ ಹಾಗೂ 11 ಮುಖಿಗಳ (ಏಕಾದಶ) ರುದ್ರಾಕ್ಷಿಗಳು ಸಿಕ್ಕಿವೆ.

ಇದನ್ನೂ ಓದಿ: ರುದ್ರಾಕ್ಷಿಗಳಲ್ಲಿರುವ ಪ್ರಬೇಧಗಳು ಮತ್ತು ಇವುಗಳ ಧಾರಣೆಯಿಂದ ಆಗುವ ಪ್ರಯೋಜನಗಳ Full Details

Advertisement

Udayavani is now on Telegram. Click here to join our channel and stay updated with the latest news.

Next