Advertisement
ಇವಕ್ಕೆ ಮುಖ್ಯ ಕಾರಣಗಳೆಂದರೆ ಅತಿ ಸೂಕ್ಷ್ಮ ವಿದ್ಯುತ್ ಕಣಗಳು (ಅಯಾನ್ಸ್) ನಮ್ಮ ಶರೀರದಲ್ಲಿ ಪ್ರವಹಿಸುವ ರಕ್ತವೇ ಮುಂತಾದ ದ್ರವಗಳೊಂದಿಗೆ ಚಲಿಸುವಾಗ ಉಂಟಾಗುವ ಸೂಕ್ಷ್ಮ ಜೈವಿಕ ವಿದ್ಯುತವಾಹಗಳೊಂದಿಗೆ (ಬಯೋ-ಎಲೆಕ್ ಕರೆಂಟ್) ಆಗುವ ಕೂಡುವಿಕೆ (ಇಂಟರಾಕ್ಷನ್).
Related Articles
Advertisement
ಇದನ್ನೂ ಓದಿ: ರುದ್ರಾಕ್ಷಿ ಶಾರೀರಿಕ, ಮಾನಸಿಕ ಆರೋಗ್ಯದ ಗವಾಕ್ಷಿ- ಇಲ್ಲಿದೆ ವಿಶೇಷತೆಗಳು
ಇವುಗಳಿಂದಾಗಿ ರುದ್ರಾಕ್ಷಿ ಭಸ್ಮ ಸೇವನೆ, ತೈಲ ಉಪಯೋಗ, ಧಾರಣೆ, ಇತ್ಯಾದಿಗಳಿಂದ ಶರೀರದಲ್ಲಿ ರೋಗ ನಿರೋಧಕತೆಗಳು (ಆ್ಯಂಟಿ ವೈರಲ್, ಆ್ಯಂಟಿ ಬ್ಯಾಕ್ಟೀರಿಯಾ, ಆ್ಯಂಟಿ ಪ್ರೊಟೋಜೋನ್, ಆಂಟಿಫಂಗಲ್, ಆ್ಯಂಟಿ ಹೆಲ್ಮಿನಿಟಿಕ್) ಉಂಟಾಗುತ್ತದೆ. ಆದರೆ ಬರೇ ಈ ಆಧುನಿಕ ವೈಜ್ಞಾನಿಕ ವಿಶ್ಲೇಷಣೆ ಮತ್ತು ಸಂಶೋಧನೆಗಳಿಂದ ಮನುಷ್ಯನ ಶಾರೀರಿಕ, ಮಾನಸಿಕ ಆರೋಗ್ಯಗಳು ಮತ್ತು ಆಧ್ಯಾತ್ಮಿಕ ಚೈತನ್ಯಗಳು ವೃದ್ಧಿಯಾಗುವುದು, ಹಲವಾರು ಕಠಿಣ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ನಿವಾರಿಸಬಹುದು ಎಂಬುದನ್ನು ಸಾಧಿಸುವುದು ಅಸಾಧ್ಯ. ಸಾವಿರಾರು ವರ್ಷಗಳಿಂದ ಲಕ್ಷಾಂತರ ಜನರು, ಆಧ್ಯಾತ್ಮಿಕ ಸಾಧನೆಗಳನ್ನು ಮಾಡಿದ ಋಷಿ ಮುನಿಗಳು, ಬಹುಮುಖಗಳ ರುದ್ರಾಕ್ಷಿ ಧಾರಣೆ ಮಾಡಿ ಅನುಭವಿಸಿದ್ದನ್ನು ಹಲವಾರು ಪುರಾಣ, ವೇದ ಶಾಸ್ತ್ರಗಳಲ್ಲಿ ಉಲ್ಲೇಖಿಸಿದುದನ್ನು ತಿರಸ್ಕರಿಸದೆ ನಂಬಬೇಕಾಗಿದೆ. ಇತ್ತೀಚೆಗಿನ ಜೀವನ ಶೈಲಿಯು ಪ್ರತಿ ನಿಮಿಷದಲ್ಲಿಯೂ ನಿಮ್ಮ ಮೇಲೆ ಮಾನಸಿಕ ಒತ್ತಡ ಬೀರಿ, ಶಾರೀರಿಕ ಅನಾರೋಗ್ಯ, ನಿದ್ರಾಹೀನತೆ, ಖನ್ನತೆ, ಹೃದಯ ದೌರ್ಬಲ್ಯ, ಚರ್ಮ ವ್ಯಾಧಿ ಗಳು, ಅರ್ಬುದ (ಕ್ಯಾನ್ಸರ್), ಸಕ್ಕರೆ ಕಾಯಿಲೆ, ಮಾದಕ ದ್ರವ್ಯ ವ್ಯಸನ ಇತ್ಯಾದಿಗಳು ಉಂಟಾಗಿ, ಮೂತ್ರಪಿಂಡ, ಶ್ವಾಸಕೋಶ, ಪಿತ್ತಕೋಶ ಮತ್ತು ಹಲವಾರು ಗ್ರಂಥಿಗಳ ಅಸಮತೋಲನ ಉಂಟಾಗುತ್ತದೆ. ಇದರಿಂದಾಗಿ ಹೆಚ್ಚು ಹೆಚ್ಚು ಪಾಶ್ಚಾತ್ಯ, ಪುರಸ್ತರು, ಜಗತ್ತಿನ ಆಧ್ಯಾತ್ಮಿಕ ಕೇಂದ್ರವಾದ ಭಾರತಕ್ಕೆ ಬಂದು ಇಲ್ಲಿನ ಪದ್ಧತಿಗಳಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಇದನ್ನೂ ಓದಿ: ಔಷಧೀಯ ಗುಣಗಳ ರುದ್ರಾಕ್ಷಿ; ಇದರಲ್ಲಿರುವ ವಿಟಮಿನ್ ಗುಣದ ಸಂಪೂರ್ಣ ಮಾಹಿತಿ ಧಾರಣೆಯ ಪರಿಣಾಮಗಳು
ರುದ್ರಾಕ್ಷಿಯನ್ನು ಧಾರಣೆ ಮಾಡಲು ಹಲವಾರು ಕ್ರಮಗಳಿಗೆ. ಇದನ್ನು ಧರಿಸುವವರ ಜನ್ಮ ನಕ್ಷತ್ರ, ರಾಶಿ, ಅಭಿರುಚಿ, ಧಾರಣೆ ಉದ್ದೇಶಗಳಿಗನುಗುಣವಾಗಿ ನಿಶ್ಚಿತ ಸಂಖ್ಯೆಯ ಮುಖಗಳಿರುವ ರುದ್ರಾಕ್ಷಿ ಅಥವಾ ಹಾರವನ್ನು ಧರಿಸಿದರೆ ಹೆಚ್ಚು ಉತ್ತಮ ಪರಿಣಾಮಗಳು ಸಿಗುತ್ತವೆ. ಸಾಮಾನ್ಯವಾಗಿ ಶಿವ ಅಥವಾ ಮೃತ್ಯುಂಜಯ ಮಂತ್ರಗಳು ಸಹಿತವಾಗಿ ಧರಿಸಿದರೆ ಒಳ್ಳೆಯದು. ಶಿವ ಮಹಾಪುರಾಣಗಳು, ಮಂತ್ರಮಹಾರ್ಣವ, ಪದ್ಮ ಪುರಾಣ, ಸ್ಕಂದ ಪುರಾಣ ಇತ್ಯಾದಿಗಳಲ್ಲಿ ಹಲವಾರು ಇತರ ಮಂತ್ರಗಳೂ ಸೂಚಿಸಲ್ಪಟ್ಟಿದೆ. ಇದನ್ನೂ ಓದಿ: ಹೇಗಿರುತ್ತದೆ ರುದ್ರಾಕ್ಷಿ ಮರ? ಏಕಮುಖಿ ರುದ್ರಾಕ್ಷಿ ಶ್ರೇಷ್ಠವೇ? : ಇಲ್ಲಿದೆ ಫುಲ್ ಡಿಟೇಲ್ಸ್ ಇದನ್ನೂ ಓದಿ: ರುದ್ರಾಕ್ಷಿಗಳಲ್ಲಿರುವ ಪ್ರಬೇಧಗಳು ಮತ್ತು ಇವುಗಳ ಧಾರಣೆಯಿಂದ ಆಗುವ ಪ್ರಯೋಜನಗಳ Full Details ಮುಂದುವರಿಯುವುದು…
(ಮುಂದಿನ ಭಾಗದಲ್ಲಿ: ರುದ್ರಾಕ್ಷಿ ಮರ ಮತ್ತು ಅದರ ಬೆಳವಣಿಗೆಗೆ ಸಂಬಂಧಿತ ಮಾಹಿತಿ)