ಬೆಂಗಳೂರು: ದೇಶದ ಪ್ರಮುಖ ಹಾಗೂ ವಿಶ್ವದ ಮೂರನೇ ಅತಿದೊಡ್ಡ ಟ್ರ್ಯಾಕ್ಟರ್ ತಯಾರಕ ಟ್ರ್ಯಾಕ್ಟರ್ಸ್ ಮತ್ತು ಫಾರ್ಮ ಇಕ್ವಿಪ್‌ಮೆಂಟ್ ಲಿಮಿಟೆಡ್-“ಟಾಫೆ’ (ಟಿಎಎಫ್ಇ) ರೈತರಿಗೆ ತೊಂದರೆ ಮುಕ್ತ ಸಾಗುವಳಿ ವರ್ಷವನ್ನು ಒದಗಿಸಲು “ಮೆಗಾ ರಾಷ್ಟ್ರವ್ಯಾಪಿ ಸೇವಾ ಟ್ರ್ಯಾಕ್ಟರ್ ಸೇವಾ ಅಭಿಯಾನ’ ಆರಂಭಿಸಿದೆ.
ರೈತರಿಗೆ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡುವುದು ಹಾಗೂ 1,500ಕ್ಕೂ ಹೆಚ್ಚು ಅಧಿಕೃತ ಕಾರ್ಯಾಗಾರಗಳಲ್ಲಿ ದೇಶಾದ್ಯಂತ 3,000ಕ್ಕೂ ಹೆಚ್ಚಿನ ನುರಿತ ಮತ್ತು ಸುಶಿಕ್ಷಿತ ಮೆಕ್ಯಾನಿಕ್ಸ್‌ಗಳ ಮಾರ್ಗದರ್ಶನದಲ್ಲಿ ನೀಡಲಾಗುವ ಅತ್ಯುತ್ತಮ ದರ್ಜೆ ಸೇವೆಯನ್ನು ಒದಗಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಈ ಮೂಲಕ ರೈತರಿಗೆ (10 ಲಕ್ಷ ಗ್ರಾಹಕರು) ನೆರವಾಗುವುದು, ನಿರ್ವಹಣಾ ಸೇವೆಗಳು ಈ ಋತುವಿನಲ್ಲಿ ಹೆಚ್ಚಿನ ಕಾರ್ಯಕ್ಷಮತೆಯನ್ನು ಒದಗಿಸಲು ಪ್ರತಿ ಟ್ರ್ಯಾಕ್ಟರ್‌ನ 25ರಿಂದ 44 ಅಂಕಗಳ ತಪಾಸಣೆ ಖಚಿತಪಡಿಸುತ್ತದೆ. ಕೋವಿ ಡ್-19 ಸುರಕ್ಷತೆ ದೃಷ್ಟಿಯಿಂದ ಮನೆ ಬಾಗಿಲಿ ನಲ್ಲೇ ಸೇವಾ ಬುಕ್ಕಿಂಗ್ ಸೌಲಭ್ಯ ಈ ಅಭಿ ಯಾನದಲ್ಲಿ ದೊರೆಯಲಿದೆ. ಅಕ್ಟೋಬರ್-ನವೆಂ ಬರ್ ತಿಂಗಳಲ್ಲಿ ದೇಶದ ರೈತರು ಕರೀಫ್ ಬೆಳೆಗಳ ಕಟಾವು ಮತ್ತು ರಬಿ ಬೆಳೆಗಳ ಬಿತ್ತನೆಯ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ.
ಇದನ್ನೂ ಓದಿ:- “ಮತಕ್ಷೇತ್ರ ವಿದ್ಯಾಕಾಶಿಯನ್ನಾಗಿಸುವೆ”
ಈ ಅವಧಿಯಲ್ಲಿ ರೈತರಲ್ಲಿ ಟ್ರ್ಯಾಕ್ಟರ್‌ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಮೆಗಾ ಸೇವಾ ಉತ್ಸವದಂತಹ ಅಭಿಯಾನದೊಂದಿಗೆ ಟಾಫೆ ರೈತರಿಗೆ ಪ್ರಮುಖ ಸುಗ್ಗಿಯ ಮತ್ತು ಬಿತ್ತನೆಯ ಋತುವಿನಲ್ಲಿ ಅವರ ಕೆಲಸವನ್ನು ಸುಲಭವಾಗಿ ಮತ್ತು ಮುಂದಿನ ಹಬ್ಬದ ಋತುವನ್ನು ಸಮೃದ್ಧಗೊಳಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ. ಅಭಿಯಾನದ ವೇಳೆ ಆಕರ್ಷಕ ಕೊಡುಗೆಗಳು ಮತ್ತು ಲಾಭದಾಯಕ ರಿಯಾಯಿತಿಗಳೊಂದಿಗೆ ಪ್ರತಿ ಟ್ರ್ಯಾಕ್ಟರ್ ಮಾಲೀಕರಿಗೆ ಮಾಸ್ಸಿ ಸರ್ವಿಸ್ ಉತ್ಸವನ್ನು ಆಯೋಜಿಸಲಾಗುತ್ತಿದೆ.
ಆಯಿಲ್ ಸರ್ವಿಸ್ ಮೇಲೆ ಉಡುಗೊರೆಗಳು ಮತ್ತು ಕೊಡುಗೆಗಳು ರೂ. 2 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಜಾಬ್ ಬಿಲ್‌ಗಳಿಗೆ ಶೇ.15ರಷ್ಟು ರಿಯಾಯಿತಿ, 4 ಸಾವಿರಕ್ಕಿಂತ ಕಡಿಮೆ ಮೌಲ್ಯದ ಜಾಬ್ ಬಿಲ್ ಗಳಿಗೆ ಶೇ. 3-5 ರಿಯಾಯಿತಿ, ಎಂಜಿನ್ ಆಯಿಲ್ ಮೇಲೆ ಶೇ.10 ರಿಯಾಯಿತಿ ಮತ್ತು ಲೇಬರ್ ಚಾರ್ಜಸ್ ಮೇಲೆ ಶೇ.50 ರಿಯಾಯಿತಿ ಪವರ್‌ವೆàಟರ್‌ಗಳನ್ನು ಸಿದ್ದಪಡಿಸಲು ಹೆಚ್ಚುವರಿ ಕಾಳಜಿ, ಅಸಲಿ ಅಗ್ರಿಸ್ಟಾರ್ ಪವರ್‌ವೆàಟರ್ ಬ್ಲೇಡ್‌ಗಳ ಮೇಲೆ ಶೇ.20 ರಿಯಾಯಿತಿಗಳು ಇವು ಮಾಸ್ಸಿ ಸರ್ವಿಸ್ ಉತ್ಸವದಲ್ಲಿ ಸಿಗುವ ಸೌಲಭ್ಯಗಳು ಆಗಿವೆ ಎಂದು ಪ್ರಕಟಣೆ ತಿಳಿಸಿದೆ.