Advertisement

ಟಿಎಪಿಸಿಎಂಎಸ್‌:ಕೆಕೆಎಂ-ಎಂಬಿಟಿ ತಂಡಕ್ಕೆ ಗೆಲುವು

03:31 PM Nov 16, 2020 | Suhan S |

ನೆಲಮಂಗಲ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಕೆ.ಕೇಶವಮೂರ್ತಿ ಮತ್ತು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂಬಿಟಿ ರಾಮಕೃಷ್ಣಯ್ಯ ಅವರ ತಂಡ ಬಹುಮತ ಪಡೆದು ಗೆಲುವಿನ ನಗೆ ಬೀರಿದೆ.

Advertisement

ಅವಿರೋಧ ಆಯ್ಕೆ: 13 ಸದಸ್ಯ ಬಲದ ಸಂಘದ ನೂತನ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿತರಗತಿಯ ಏಳು ಮಂದಿ ಸದಸ್ಯರ ಪೈಕಿ ತ್ಯಾಮ ಗೊಂಡಲು ಹೋಬಳಿಯ ಪರಿಶಿಷ್ಟ ಜಾತಿ ಮೀಸಲು ಸ್ಥಾನ ಹನುಮಂತಯ್ಯ, ಬಿಸಿಎಂ “ಎ’ಮೀಸಲು ಸ್ಥಾನದಿಂದ ಮಹಮದ್‌ ಸಿರಾಜ್‌ ಅಹಮದ್‌, ಸೋಂಪುರ ಹೋಬಳಿಯ ಮಹಿಳಾ ಮೀಸಲು ಸ್ಥಾನದಿಂದ ಜಿ.ಮಂಜುಳಾ, ಹೆಚ್‌. ಎಂ.ಸಿಂಧು, ಕಸಬಾ ಹೋಬಳಿಯ ಬಿಎಸಿ ಎ ಸ್ಥಾನದಿಂದ ಎ.ಪಿಳ್ಳಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಚುನಾವಣೆ: ಸಂಘ ‌ ಎ ತರಗತಿಯ 06 ಸ್ಥಾನಗಳಿಗೆ ಹಾಗೂ ಕಸಬಾ ಹೋಬಳಿಯ 01 ಸಾಮಾನ್ಯ ಸ್ಥಾನ, 01 ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆನ.15ರಂದು ಪ ‌ಟ್ಟಣದ ‌ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಚುನಾವಣೆಯಲ್ಲಿ ತಾಲೂಕಿನ ರೈತರು ಹಾಗೂ ವಿವಿಎಸ್‌ಎಸ್‌ಎನ್ ಸಂಘಗಳ ಪ್ರತಿನಿಧಿಗಳು ಮತದಾನದಲ್ಲಿ ಭಾಗವಹಿಸಿ ತಮ್ ಹಕ್ಕು ಚ ಲಾಯಿಸಿದ್ದರು.

“ಎ “ತರಗತಿಯಲ್ಲಿ 8 ಮಂದಿ ಅಂತಿಮ ಕಣದಲ್ಲಿದ್ದು, ಕೆ.ಆರ್‌.ಗುರುಪ್ರಕಾಶ್‌ 13 ಮತ, ಜಗಜ್ಯೋತಿ ಬಸವೇಶ್ವರ ಡಿ.ಜೆ.11 ಮತ,ವೀರಮಾರೇಗೌಡ, ಶಿವರಾಮಯ್ಯ ಮೋಹನ್‌ ಕುಮಾರ್‌ ಅವರು ತಲಾ 12 ಮತ, ಎಚ್‌. ನಾಗಭೂಷಣ್‌ 13 ಮತ ಪಡೆದುಕೊಂಡು ಗೆಲುವು ಸಾಧಿಸಿದರೆ, ಕಸಬಾ ಹೋಬಳಿಯಸಾಮಾನ್ಯ ಕ್ಷೇತ್ರದಲ್ಲಿ ಜಿ.ಸಂಪತ್‌ 423 ಮತ, ಪರಿಶಿಷ್ಟ ಪಂಗಡದಿಂದ ಸ್ಪರ್ಧಿಸಿದ್ದ ಬಿಎನ್‌. ನರಸಿಂಹಮೂರ್ತಿ 383 ಮತ ಪಡೆದುಕೊಂಡುಗೆಲುವು ಸಾಧಿಸಿದ್ದಾರೆ.

ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತಂಡದ ಮುಖಂಡರಾದ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಕೇಶವಮೂರ್ತಿ ಮಾತನಾಡಿ, ಸಂಘದ ಹೆಸರೇ ಹೇಳುವಂತೆ ಪರಸ್ಪರ ಸಹಕಾರವಿದ್ದರೆ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ. ನಮ್ಮ ತಂಡದಲ್ಲಿ ಜಾತಿ ಮತ ಭೇದವಿಲ್ಲದೆ ನಿಸ್ವಾರ್ಥವಾಗಿರುವಅಭ್ಯರ್ಥಿಗಳನ್ನುಆಯ್ಕೆಮಾಡಿ ಕೊಂಡು ಪಕ್ಷಭೇದವಿಲ್ಲದೇ ತಂಡ ರಚಿಸಿ ಚುನಾವಣೆ ಎದುರಿಸಲಾಗಿದೆ. ನಾನು ಕಾಂಗ್ರೆಸ್‌ಪಕ್ಷದಲ್ಲಿದ್ದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂಬಿಟಿ ರಾಮಕೃಷ್ಣಯ್ಯ ಅವರು ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದು, ಪಕ್ಷಾತೀತವಾಗಿ ಸಂಘಟನೆ ಮಾಡಲಾಗಿದೆ ಎಂದರು.

Advertisement

 

ಸಂಘ90ಲಕ್ಷ ರೂ.ಗಳಲಾಭಾಂಶದಲ್ಲಿದ್ದು, ಸಂಘದ ಸಂಪೂರ್ಣಯೋಜನೆಗಳನ್ನು ಪ್ರಾಮಾಣಿಕವಾಗಿ ರೈತರಿಗೆ ತಲುಪಿಸುವಲ್ಲಿ ನಮ್ಮ ತಂಡದ ಸದಸ್ಯರು ಪ್ರಾಮಾಣಿಕವಾಗಿ ಶ್ರಮಿಸಲಿದ್ದಾರೆ. ವಿಧಾನಪರಿಷತ್‌ ಸದಸ್ಯಬಿಎಂಎಲ್‌ ಕಾಂತರಾಜು ವಿರುದ್ಧವಾಗಿ ತಂಡಕಟ್ಟಲಾಗಿದೆ. ಕೆ.ಕೇಶವಮೂರ್ತಿ, ಮಾಜಿ ಅಧ್ಯಕ್ಷ, ನೆಲಮಂಗಲ ತಾಲೂಕು ಪಂಚಾಯತಿ

Advertisement

Udayavani is now on Telegram. Click here to join our channel and stay updated with the latest news.

Next