Advertisement

ಟಿಎಪಿಸಿಎಂಎಸ್‌: ಶೇ.91.5 ಮತದಾನ

03:10 PM Nov 09, 2020 | Suhan S |

ದೊಡ್ಡಬಳ್ಳಾಪುರ: ತಾಲೂಕು ವ್ಯವಸಾಯೋತ್ಪನ್ನ ಮಾರಾಟಸಹಕಾರ ಸಂಘಕ್ಕೆ ಭಾನುವಾರ ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಶೇ.91.5 ಮತದಾನವಾಗಿದೆ.

Advertisement

ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಮತದಾನದಲ್ಲಿ ನೂರಾರು ಜನ ಸಾಲುಗಟ್ಟಿ ನಿಂತು ಮತ ಚಲಾಯಿಸಿದರು. ಹಿರಿಯರು ವ್ಹೀಲ್‌ ಚೇರ್‌ಗಳಲ್ಲಿ ಆಗಮಿಸಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು.

ಶಾಸಕರಿಂದ ಮತ ಚಲಾವಣೆ: ಕೋವಿಡ್‌ -19 ದೃಢಪಟ್ಟಿದ್ದರಿಂದ 13 ದಿನಗಳಿಂದಲೂ ಮನೆಯಲ್ಲಿಯೇ ಇದ್ದ ಶಾಸಕ ಟಿ. ವೆಂಕಟರಮಣಯ್ಯ ಭಾನುವಾರ ನಗರಕ್ಕೆಆಗಮಿಸಿ ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ಮತ ಚಲಾವಣೆ ಮಾಡಿದರು. ಎ ತರಗತಿಯಿಂದ ವಿಎಸ್‌ಎಸ್‌ಎನ್‌ಗಳ ಪ್ರತಿನಿಧಿಗಳು ಚಲಾಯಿಸುವ ಒಟ್ಟು 18 ಮತಗಳಿಗೆ 18 ಮತದಾನವಾಗಿ ಶೇ.100 ಮತದಾನವಾಯಿತು.

ಬಿ ತರಗತಿಯಿಂದ ಒಟ್ಟು 3691 ಮತದಾರರ ಪೈಕಿ 3374 ಮತದಾನವಾಗಿದ್ದು ಶೇ.91.5 ಮತದಾನವಾಗಿದೆ. ಕಾಂಗ್ರೆಸ್‌-ಜೆಡಿಎಸ್‌ನಿಂದ ಎಲ್ಲಾ 13 ಸ್ಥಾನಗಳಿಗೂ ಅಭ್ಯರ್ಥಿಗಳು ನಾಮಪತ್ರಸಲ್ಲಿಸಿದ್ದರು. ಆದರೆ, ಬಿಜೆಪಿ ಜೆಡಿಎಸ್‌ ಪಕ್ಷದ ಅಪ್ಪಯ್ಯಣ್ಣ ಅವರ ಬಣದೊಂದಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಂಡುಎಮತ್ತು ಬಿ ತರಗತಿ ಸೇರಿ 6 ಸ್ಥಾನಗಳಿಗೆ ಮಾತ್ರ ನಾಮಪತ್ರ ಸಲ್ಲಿಸಿದ್ದರು.

ಮತ ಕೇಂದ್ರದ ಬಳಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಚುನಾವಣೆ ಸಾರ್ವಜನಿಕ ಚುನಾವಣೆಗಳನ್ನು ಮೀರಿಸುವಂತಿತ್ತು. ಸಂಜೆ 4ಕ್ಕೆ ಚುನಾವಣೆ ಮುಗಿದ ನಂತರ ಮತ ಎಣಿಕೆ ಆರಂಭವಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next