ಬಳ್ಳಾರಿ: ಕರ್ನಾಟಕ-ಆಂಧ್ರ ಪ್ರದೇಶದ ಗಡಿಗುರುತುಗಳನ್ನು ಪತ್ತೆ ಹಚ್ಚಲು ಎರಡೂ ರಾಜ್ಯ ಸರ್ಕಾರಗಳು ಮುಂದೆ ಬರದಿರುವುದೇ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳು ಪದೆ ಪದೇ 1896ರ ನೀಲನಕ್ಷೆಯನ್ನು ಆಧರಿಸಿ ಸರ್ವೇ ಕಾರ್ಯಕ್ಕೆ ಮುಂದಾಗಲು ಕಾರಣವಾಗಿದೆ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1896ರ ನಕ್ಷೆಯನ್ನು ಸರ್ವೆ ಆಫ್ ಇಂಡಿಯಾದ ಹಿಂದಿನ ಅಧಿಕಾರಿಗಳೇ ತಿರಸ್ಕರಿಸಿದ್ದಾರೆ. ಅಂಥ ನಕ್ಷೆಯನ್ನು ಆಧರಿಸಿ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳ ತಂಡ ಅಕ್ರಮ ಗಣಿಗಾರಿಕೆಯಿಂದ ಧ್ವಂಸವಾಗಿದ್ದ ಅಂತರಾಜ್ಯ ಗಡಿ ಗುರುತುಗಳನ್ನು ಪತ್ತೆ ಹಚ್ಚಲು ಮುಂದಾಗುತ್ತಿದ್ದಾರೆ.
ಜಿಲ್ಲಾಡಳಿತ ಇದನ್ನು ವಿರೋಧಿ ಸಬೇಕು. ಆದರೆ ಅಧಿಕಾರಿಗಳು ಮೌನವಾಗಿದ್ದಾರೆ. ನಮ್ಮ ಪಾತ್ರ ಏನೂ ಇಲ್ಲ ಎನ್ನುತ್ತಿದ್ದಾರೆ.ಇದು ನಿಜಕ್ಕೂ ಆಘಾತಕಾರಿ ಸಂಗತಿ. ಜಿಲ್ಲಾಧಿಕಾರಿ ಈ ಜಿಲ್ಲೆಯ ಗಡಿಭಾಗದ ಪಾಲಕರಾಗಿರುತ್ತಾರೆ. ಅವರನ್ನೇ ಬಿಟ್ಟು ಈಗ ಸಮೀಕ್ಷೆ ಮಾಡಲಾಗುತ್ತಿದೆ. ಈ ಸರ್ವೇ ಕಾರ್ಯವು ಕಾನೂನು ರಿತ್ಯವಾಗಿ ಸಮೀಕ್ಷೆ ಮಾಡಿದಂತಾಗದು ಎಂದ ಅವರು ಜಿಲ್ಲಾಧಿಕಾರಿಗಳು ಈ ಸಮೀಕ್ಷೆ ವರದಿಯನ್ನು ಒಪ್ಪಬಾರದು ಎಂದು ಆಗ್ರಹಿಸಿದರು.
ಇದನ್ನೂ ಓದಿ :ವೀ.ವಿ. ಸಂಘದ ಸಮಿತಿಗೆ ಚುನಾವಣೆ
ಅಂತರಾಜ್ಯ ಗಡಿಗುರುತು ಸರ್ವೇ ಕಾರ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಅವರು ತಮ್ಮೊಂದಿಗೆ ಗಣಿ ಮತ್ತು ಭೂ ವಿಜ್ಞಾನ, ಸರ್ವೇ ಇಲಾಖೆ, ಅರಣ್ಯ ಇಲಾಖೆ ಉನ್ನತಾಧಿಕಾರಿಗಳನ್ನು ಕರೆದುಕೊಂಡು ಹೋಗಿ ಸರ್ವೇ ಕಾರ್ಯವನ್ನು ಪರಿಶೀಲನೆ ಮಾಡಬೇಕು. ಇದ್ಯಾವ ಕಾರ್ಯಗಳು ನಡೆಯುತ್ತಿಲ್ಲ. ಗಡಿ ಸಮೀಕ್ಷೆಗೆ ಬರುವ ಸರ್ವೆ ಆಫ್ ಇಂಡಿಯಾದ ಅ ಧಿಕಾರಿಗಳಿಗೆ ಊಟ, ಉಪಾಹಾರದ ವ್ಯವಸ್ಥೆ ಮಾಡುವುದು, ಅಗತ್ಯ ಸಿಬ್ಬಂದಿಗಳನ್ನು ಒದಗಿಸುವುದಷ್ಟೇ ನಮ್ಮ ಕೆಲಸ ಎಂದು ಜಿಲ್ಲೆ ಸರ್ವೇ ಇಲಾಖೆ ಅಧಿಕಾರಿಯೊಬ್ಬರು ತಿಳಿಸುತ್ತಾರೆ ಎಂದು ಟಪಾಲ್ ಗಣೇಶ್ ಆರೋಪಿಸಿದ್ದಾರೆ.