Advertisement

ತಾಂಜೇನಿಯಾ ಕೋವಿಡ್‌ ಮುಕ್ತ

01:10 PM Jun 10, 2020 | mahesh |

ದೊಡೊಮಾ: ಕೋವಿಡ್‌ನಿಂದ ಹಲವು ರಾಷ್ಟ್ರಗಳು ಸಂಕಷ್ಟ ಪಡುತ್ತಿರುವಂತೆ, ಬೆರಳೆಣಿಕೆಯ ರಾಷ್ಟ್ರಗಳು ಕೋವಿಡ್‌ನಿಂದ ಮುಕ್ತ ಎಂದು ಘೋಷಿಸಿವೆ. ಅಧ್ಯಕ್ಷ ಜಾನ್‌ ಮೊಗುಫ‌ುಲಿ ಅವರು ದೇಶ ಕೋವಿಡ್‌ನಿಂದ ಮುಕ್ತವಾಗಿದೆ ಎಂದು ಘೋಷಿಸಿದ್ದಾರೆ. ಇದು ಜನರ ಪ್ರಾರ್ಥನೆಯಿಂದಾಗಿ ನೆರವೇರಿದೆ ಎಂದು ಹೇಳಿದ್ದಾರೆ. ಇತ್ತ ತಾಂಜೇನಿಯಾ ಸರಕಾರದ ಧೋರಣೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಆತಂಕ ವ್ಯಕ್ತಪಡಿಸಿದೆ. ಸರಕಾರ ಹಲವು ದಿನಗಳಿಂದ ಸೋಂಕಿತರ ಅಂಕಿ ಅಂಶಗಳ ಪ್ರಕಟನೆಯನ್ನೇ ನಿಲ್ಲಿಸಿದ್ದು, ಅಪಾಯಕಾರಿ ಎಂದಿದೆ.

Advertisement

ಎ.29ರಂದು ಅಲ್ಲಿನ ಸರಕಾರ ಅಂಕಿ ಅಂಶಗಳನ್ನು ಪ್ರಕಟಿಸಿದಾಗ ಒಟ್ಟು 509 ಪ್ರಕರಣಗಳು ಇದ್ದುದಾಗಿ ಮತ್ತು 21 ಮಂದಿ ಮೃತಪಟ್ಟಿದ್ದಾಗಿ ಹೇಳಲಾಗಿತ್ತು. ಅಲ್ಲದೇ ಅಧ್ಯಕ್ಷರು ಕಳೆದ ವಾರ ನಾಲ್ವರು ರೋಗಿಗಳು ದಾರ್‌ ಇ ಸಲಾಮ್‌ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದರು. ಕಳೆದ ತಿಂಗಳು ತಾಂಜೇನಿಯಾ ದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಎಚ್ಚರಿಕೆಯ ಸಂದೇಶವೊಂದನ್ನು ಹೊರಡಿಸಿದ್ದು, ದಾರ್‌ ಇ ಸಲಾಮ್‌ನ ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಂದ ತುಂಬಿದ್ದು, ನಗರದ ಸೋಂಕು ಪೀಡಿತರ ಸಂಖ್ಯೆ ಸರ್ವಾಧಿಕ ಮಟ್ಟದಲ್ಲಿರಬಹುದು ಎಂದು ಹೇಳಿತ್ತು. ಆದರೆ ಅಧ್ಯಕ್ಷರು ಇದಕ್ಕೆ ವ್ಯತಿರಿಕ್ತವಾಗಿ ದೇಶದ ಜನರು ಚರ್ಚ್‌, ಮಸೀದಿಗೆ ತೆರಳಿ ಪ್ರಾರ್ಥಿಸಿದ್ದರಿಂದ ವೈರಸ್‌ ಸಂಪೂರ್ಣವಾಗಿ ನಾಶವಾಗಿದೆ, ದೇಶದ ಆರೋಗ್ಯ ವಲಯದ ಸ್ಥಿತಿ ಸುಧಾರಣೆಯಾಗಿದೆ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next