Advertisement

ಉಪ್ಪಿನಕುದ್ರು: ಟ್ಯಾಂಕರ್‌ ನೀರು ಪೂರೈಕೆ ಆರಂಭ

10:29 PM May 08, 2020 | Sriram |

ಕುಂದಾಪುರ: ಉಪ್ಪಿನ ಕುದ್ರುವಿನ 3 ವಾರ್ಡ್‌ಗಳ ಕೆಲವು ಮನೆಗಳಿಗೆ ನೀರಿನ ಸಮಸ್ಯೆಯಿದ್ದು, ಶುಕ್ರವಾರದಿಂದ ತಲ್ಲೂರು ಗ್ರಾಮ ಪಂಚಾಯತ್‌ ವತಿ ಯಿಂದ ಟ್ಯಾಂಕರ್‌ ನೀರು ಸರಬರಾಜಿಗೆ ಚಾಲನೆ ನೀಡಲಾಗಿದೆ.

Advertisement

ತಲ್ಲೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಉಪ್ಪಿನ ಕುದ್ರು ಗ್ರಾಮದಲ್ಲಿ ಮೂರು ವಾರ್ಡ್‌ಗಳಿದ್ದು, ಈ ಮೂರರಲ್ಲಿಯೂ ಈಗ ನೀರಿನ ಸಮಸ್ಯೆ ಎದುರಾಗಿತ್ತು. ಉಪ್ಪಿನಕುದ್ರು, ಬಾಳೆಬೆಟ್ಟು, ಸಂಕ್ರಿಬೆಟ್ಟು, ಆಲ್ಕುದ್ರು, ಪಡುಕೇರಿ ಭಾಗದಲ್ಲಿ ಕುಡಿಯುವ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ. ಇಲ್ಲಿ ದಿನಕ್ಕೊಂದು ವಾರ್ಡ್‌ಗೆ ನಳ್ಳಿ ನೀರು ಕೊಡಲಾಗುತ್ತಿತ್ತು. ಆದರೆ ಅದು ಬಹುತೇಕ ಮನೆಗಳಿಗೆ ತಲುಪುತ್ತಿರಲಿಲ್ಲ.

ಉದಯವಾಣಿ ವರದಿ
ಉಪ್ಪಿನಕುದ್ರುವಿನ ನೀರಿನ ಸಮಸ್ಯೆ ಬಗ್ಗೆ “ಉದಯವಾಣಿ ಸುದಿನ’ವು ಮೇ 8 ರಂದು ಸಮಸ್ಯೆ ಬಗ್ಗೆ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಶುಕ್ರವಾರದಿಂದ ತಲ್ಲೂರು ಗ್ರಾ.ಪಂ. ವತಿಯಿಂದ ಪಡುರ್ಕರಿ, ಬೇಡರಕೊಟ್ಟಿಗೆ, ಉಳ್ಳೂರು ಬೆಟ್ಟು ಮತ್ತಿತರ ಕಡೆಗಳಿಗೆ ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗಿದೆ.

ಪಂಚಾಯತ್‌ ಅನುದಾನ
ತಹಶೀಲ್ದಾರ್‌ಗೆ ಪಂಚಾಯತ್‌ ವ್ಯಾಪ್ತಿಯಲ್ಲಿರುವ ನೀರಿನ ಸಮಸ್ಯೆ ಕುರಿತಂತೆ ಮನವಿ ಸಲ್ಲಿಸಲಾಗಿದೆ. ಆದರೆ ಆ ಪ್ರಕ್ರಿಯೆ ವಿಳಂಬವಾಗುವು ದರಿಂದ ಸದ್ಯಕ್ಕೆ ಪಂಚಾಯತ್‌ ಅನುದಾನದಿಂದಲೇ ಟ್ಯಾಂಕರ್‌ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
-ಆನಂದ ಬಿಲ್ಲವ,
ಅಧ್ಯಕ್ಷರು, ತಲ್ಲೂರು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next