Advertisement

ರಸ್ತೆ ಬದಿ ಗಿಡಗಳಿಗೆ ಟ್ಯಾಂಕರ್‌ ನೀರು

01:45 PM May 09, 2019 | Team Udayavani |

ಮುಂಡರಗಿ: ಬೇಸಿಗೆ ಬಿಸಿಲಿನಿಂದ ಬಾಡುತ್ತಿರುವ ರಸ್ತೆ ಬದಿ ಮತ್ತು ಸರಕಾರಿ ಕಾರ್ಯಾಲಯದ ಆವರಣದಲ್ಲಿರುವ ಗಿಡಗಳಿಗೆ ತಾಲೂಕಿನ ಕಪ್ಪತ್ತಹಿಲ್ಸ್ ಅರಣ್ಯ ಇಲಾಖೆ ವತಿಯಿಂದ ಟ್ಯಾಂಕರ್‌ ಮೂಲಕ ನೀರು ಹಾಕಲಾಗುತ್ತಿದೆ.

Advertisement

ಅರಣ್ಯ ಇಲಾಖೆಯಿಂದ ರಸ್ತೆ ಬದಿಯಿರುವ ಪ್ರತಿ ನಲವತ್ತು ಗಿಡಗಳಿಗೆ ಒಂದು ಟ್ಯಾಂಕರ್‌ ನೀರು ಹಾಕಲಾಗುತ್ತಿದೆ. ಪ್ರತಿ ದಿನವೂ ಹತ್ತು ಟ್ಯಾಂಕರಗಳಷ್ಟು ನೀರು ಗಿಡಗಳಿಗೆ ಬಳಸಲಾಗುತ್ತಿದೆ.ಇದರಿಂದ ಪ್ರತಿ ಗಿಡಕ್ಕೆ 15 ಲೀಟರ್‌ಗಳಷ್ಟು ನೀರು ದೊರಕಲಿದೆ. ಪ್ರತಿ 15 ದಿನಕ್ಕೊಮ್ಮೆ ಟ್ಯಾಂಕರ್‌ ಮೂಲಕ ಗಿಡಗಳಿಗೆ ನೀರು ಹಾಕಲಾಗುತ್ತಿದೆ.

ಈಗಾಗಲೇ ಮೂರು-ನಾಲ್ಕು ವರ್ಷಗಳಿಂದ ಬೆಳೆದು ನಿಂತಿರುವ ಮುಂಡರಗಿ-ಗದಗ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿರುವ 2000 ಸಾವಿರ ಗಿಡಗಳು, ಡಂಬಳ ಪಕ್ಕದಲ್ಲಿರುವ ನಾರಾಯಣಪುರ ಗ್ರಾಮದ ರಸ್ತೆಯ ಬದಿಯ 900 ನೂರು ಗಿಡಗಳಿಗೆ, ಮುಂಡರಗಿ ಪಟ್ಟಣದಲ್ಲಿ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಕಾರ್ಯಾಲಯದ ಆವರಣ ಸೇರಿದಂತೆ ರಸ್ತೆ ಬದಿ ಇರುವ 900 ಗಿಡಗಳು, ಕೋರ್ಲಹಳ್ಳಿಯ ನವೋದಯ ಶಾಲೆಯ ಆವರಣದಲ್ಲಿ 900 ಗಿಡಗಳಿಗೂ ನೀರನ್ನು ಟ್ಯಾಂಕರ್‌ ಮೂಲಕ ಹಾಕಲಾಗುತ್ತಿದೆ. ಪ್ರತಿ 15 ದಿನಗಳಿಗೊಮ್ಮೆ ಟ್ಯಾಂಕರ್‌ ಮೂಲಕ ಗಿಡಗಳಿಗೆ ನೀರುಣಿಸಲಾಗುತ್ತಿದೆ.

ಬೇಸಿಗೆಯ ನಾಲ್ಕು ತಿಂಗಳ ಅವಧಿಯಲ್ಲಿ ಅರಣ್ಯ ಇಲಾಖೆಯು ಟ್ಯಾಂಕರ್‌ ಮೂಲಕ ಗಿಡಗಳಿಗೆ ನೀರುಣಿಸುವುದರಿಂದ ಕನಿಷ್ಟ ಐದು ಸಾವಿರದಷ್ಟು ಗಿಡಗಳು ಬೇಸಿಗೆಯಲ್ಲಿ ಜೀವ ಉಳಿಸಿಕೊಳ್ಳುತ್ತವೆ. ಬೇಸಿಗೆಯ ಬಿಸಿಲಿನಲ್ಲಿ ಗಿಡಗಳು ಒಣ ಹೋಗುವುದನ್ನು ತಡೆಯಲು ನೀರುಣಿಸಲಾಗುತ್ತಿದೆ. ಗಿಡಗಳು ಒಣಗಿದಲ್ಲಿ ಮತ್ತೆ ಮಳೆಗಾಲದಲ್ಲಿ ಅದೇ ಜಾಗದಲ್ಲಿ ನೂತನವಾಗಿ ಗಿಡಗಳನ್ನು ನೆಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next