ಹೆಬ್ರಿ: ಕುಚ್ಚೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣವಾಗುತ್ತಿದ್ದು ಟ್ಯಾಂಕರ್ ನೀರಿನ ಮೂಲಕ ಪೂರೈಕೆ ಕಾರ್ಯ ನಡೆಯುತ್ತಿದೆ.
ನಿರುಪಯುಕ್ತ ಕೊಳವೆ ಬಾವಿ
ಪಂಚಾಯತ್ ವ್ಯಾಪ್ತಿಯಲ್ಲಿ 20 ಕೊಳವೆ ಬಾವಿಗಳಿದ್ದರೂ ಈಗ ಉಪಯೋಗಕ್ಕೆ ಬರುತ್ತಿರುವುದು ಕೇವಲ 4 ಮಾತ್ರ. ಉಳಿದ ಕೊಳವೆ ಬಾವಿಗಳನ್ನು ದುರಸ್ತಿಗೊಳಿಸಿದರೆ ಸ್ವಲ್ಪವಾದರೂ ನೀರಿನ ಸಮಸ್ಯೆ ಕಡಿಮೆಯಾದೀತು ಎನ್ನುತ್ತಾರೆ ಸ್ಥಳೀಯರು.
ಅಂತರ್ಜಲ ಕುಸಿತ
Advertisement
ಪಂಚಾಯತ್ ವ್ಯಾಪ್ತಿಯಲ್ಲಿ 4,351 ಜನಸಂಖ್ಯೆಯಿದ್ದು, 16 ತೆರೆದ ಬಾವಿಗಳು, 20 ಬೋರ್‌ವೆಲ್ ಮತ್ತು 42 ನಳ್ಳಿ ನೀರಿನ ಸಂಪರ್ಕಗಳಿವೆ. ಆದರೆ ಅವುಗಳಲ್ಲಿ ನೀರು ಲಭ್ಯವಿರುವುದು ಕೇವಲ 2 ಬೋರ್‌ವೆಲ್ಗಳಲ್ಲಿ ಮಾತ್ರ. ಇಲ್ಲಿನ ಶೇ. 50ರಷ್ಟು ಜನ ಪಂಚಾಯತ್ ನೀರನ್ನೆ ಅವಲಂಬಿಸಿದ್ದು, ಪಂಚಾಯತ್ ವತಿಯಿಂದ 400 ಮನೆಗಳಿಗೆ ದಿನಕ್ಕೆ 50ರಿಂದ 60 ಸಾವಿರ ಲೀ. ನೀರನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ.
Related Articles
Advertisement
ದಿನದಿಂದ ದಿನಕ್ಕೆ ಏರುತ್ತಿರುವ ಕಟ್ಟಡಗಳು, ಕೃಷಿ ಭೂಮಿಯನ್ನು ಹಡಿಲು ಹಾಕಿರುವುದು ಮೊದಲಾದ ಕೃಷಿ ಚಟುವಟಿಕೆ ಕಡಿಮೆಯಾಗಿ ಗದ್ದೆಗಳಲ್ಲಿ ನೀರು ನಿಲ್ಲುವುದು ಕಡಿಮೆಯಾಗಿ ಅಂತರ್ಜಲ ಮಟ್ಟ ಕುಸಿತಗೊಂಡಿದೆ. ಅಲ್ಲದೆ ಕೆಲವೊಂದು ಖಾಸಗಿ ಬೋರ್‌ವೆಲ್ಗಳ ಪ್ರಭಾವದಿಂದ ಸಮಸ್ಯೆ ಉಂಟಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಇಂಗು ಗುಂಡಿ ನಿರ್ಮಾಣ, ಇರುವ ಕೆರೆಗಳನ್ನು ಹೂಳೆತ್ತಿದರೆ ನೀರಿನ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ. ಈ ಭಾಗದಲ್ಲಿ ಹರಿಯುವ ಸೀತಾನದಿಗೆ ಹಿಂದೆ ಕೆಲವೊಂದು ನೀರಿನ ಪಂಪ್ ಬಳಸಿ ಅನಗತ್ಯ ನೀರನ್ನು ವ್ಯಯ ಮಾಡಲಾಗುತ್ತಿದೆ. ಇದರಿಂದ ಸೀತಾನದಿ ಬತ್ತಿಹೋಗಿ ಅಂತರ್ಜಲ ಮಟ್ಟ ಕಡಿಮೆಯಾಗಿ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಈಗಾಗಲೇ ಕುಚ್ಚೂರು, ಚಾರ ಸುತ್ತಮುತ್ತಲಿನ ಗ್ರಾಮಗಳಿಗೆ ನೀರುಣಿಸುತ್ತಿರುವ ಚಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಅಣೆಕಟ್ಟನ್ನು ಏರಿಸಿ ಹೆಚ್ಚಿನ ನೀರನ್ನು ನಿಲ್ಲುವ ಹಾಗೆ ಮಾಡಿದರೆ ಈ ಭಾಗದ ನೀರಿನ ಸಮಸ್ಯೆ ಸ್ವಲ್ಪ ದೂರವಾಗಬಹುದು.ಅಲ್ಲದೆ ಚಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ಪಂಚಾಯತ್ ಕಚೇರಿ ಬಳಿ ನಿರ್ಮಾಣವಾಗುತ್ತಿರುವ ಬೃಹತ್ ಟ್ಯಾಂಕ್‌ನಿಂದ ಮುಂದಿನ ಬಾರಿ ನೀರಿನ ಸಮಸ್ಯೆಗೆ ಕೊಂಚ ಪರಿಹಾರ ಸಿಕ್ಕೀತು ಎನ್ನುತ್ತಾರೆ ಸ್ಥಳೀಯರು.
ಕುಚ್ಚೂರು ಗ್ರಾ.ಪಂ. ವ್ಯಾಪ್ತಿಯ ಜನತಾ ಕಾಲನಿ, ಕುಡಿಬೈಲು, ಮಾತ್ಕಲ್ಲು, ಹಾಲಿಕೊಡ್ಲು, ಕಾನ್ಬೆಟ್ಟು ಜೆಡ್ಡು, ಸೆಳ್ಳೆ ಕಟ್ಟೆ, ದೇವಳ ಬೈಲು, ಚಿನ್ನಾರ ಕಟ್ಟೆ, ದೂಪದ ಕಟ್ಟೆ, ಬೇಳಂಜೆ ಐದು ಸೆನ್ಸ್, ಕೆಪ್ಪೆಕೆರೆ, ಕಮ್ತ, ದಾಸನಗುಡ್ಡೆ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದೆ.
ಎಲ್ಲೆಲ್ಲಿ ಸಮಸ್ಯೆ?
ಕುಚ್ಚೂರು ಗ್ರಾ.ಪಂ. ವ್ಯಾಪ್ತಿಯ ಜನತಾ ಕಾಲನಿ, ಕುಡಿಬೈಲು, ಮಾತ್ಕಲ್ಲು, ಹಾಲಿಕೊಡ್ಲು, ಕಾನ್ಬೆಟ್ಟು ಜೆಡ್ಡು, ಸೆಳ್ಳೆ ಕಟ್ಟೆ, ದೇವಳ ಬೈಲು, ಚಿನ್ನಾರ ಕಟ್ಟೆ, ದೂಪದ ಕಟ್ಟೆ, ಬೇಳಂಜೆ ಐದು ಸೆನ್ಸ್, ಕೆಪ್ಪೆಕೆರೆ, ಕಮ್ತ, ದಾಸನಗುಡ್ಡೆ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದೆ.
ರಾತ್ರಿ ತನಕ ನೀರು ಸರಬರಾಜು
ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು ಪ್ರತಿದಿನ 10- 20 ಮನೆಗಳಿಂದ ನೀರಿನ ಬೇಡಿಕೆ ಬರುತ್ತಿದೆ. ಜನರಿಗೆ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ಮುಂಜಾನೆಯಿಂದ ರಾತ್ರಿ ತನಕ ನೀರು ಸರಬರಾಜು ಮಾಡಲಾಗುತ್ತಿದೆ.
-ರಾಮಣ್ಣ ಪೂಜಾರಿ, ಅಧ್ಯಕ್ಷರು, ಕುಚ್ಚಾ ರು ಗ್ರಾ.ಪಂ.
ನೀರು ಸರಬರಾಜು
ಪ್ರತಿವರ್ಷ ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗುತ್ತದೆ. ಅದೇ ರೀತಿ ಈ ವರ್ಷ ಕೂಡ ಸಮಸ್ಯೆ ಇರುವ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನೂ ಕೂಡ ನೀರಿನ ಸಮಸ್ಯೆ ಇದ್ದಲ್ಲಿ ಕೂಡಲೇ ಪಂಚಾಯತ್ ಸಂಪರ್ಕಿಸಿ.
-ಆನಂದ ಕುಮಾರ್ ಬಿ.ಕೆ., ಪಿಡಿಒ, ಕುಚ್ಚಾರು ಗ್ರಾ.ಪಂ.
– ಹೆಬ್ರಿ ಉದಯಕುಮಾರ್ ಶೆಟ್ಟಿ