ಚಿಕ್ಕಬಳ್ಳಾಪುರ: ಅಡುಗೆ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್, ಆಟೋ ಮೇಲೆ ಉರುಳಿಬಿದ್ದು ಸಾವಿರಾರು ಲೀಟರ್ ಎಣ್ಣೆ ರಸ್ತೆಪಾಲಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದವರು ಪವಾಡ ಸದೃಢ ಪಾರಾಗಿರುವ ಘಟನೆ ಚಿಕ್ಕಬಳ್ಳಾಪುರ- ಗೌರಿಬಿದನೂರು ಮಾರ್ಗದಲ್ಲಿ ಸಂಭವಿಸಿದೆ.
ಟ್ಯಾಂಕರ್ ಉರುಳಿದ್ದರಿಂದ ಆಟೋ ಸಂ ಪೂರ್ಣ ವಾಗಿ ನಜ್ಜುಗಜ್ಜಾಗಿದ್ದು, ಸುಮಾರು 12 ಸಾವಿರ ಲೀಟರ್ ಎಣ್ಣೆ ರಸ್ತೆ ಪಾಲಾಗಿದೆಯೆಂದು ಅಂದಾಜಿಸಲಾಗಿದೆ. ಚಿಕ್ಕಬಳ್ಳಾಪುರ ಕಡೆಯಿಂದ ಗೌರಿಬಿದನೂರು ಕಡೆ ಸಾಗುತ್ತಿದ್ದಾಗ ಆಟೋವೊಂದು ಟ್ಯಾಂಕರ್‌ನ್ನುಹಿಂದಿಕ್ಕಲು ಮುನ್ನುಗ್ಗಿದಾಗ ಟ್ಯಾಂಕರ್ ಸಹವೇಗವಾಗಿ ತಿರುಗಿ ನಿಯಂತ್ರಣ ತಪ್ಪಿ ಆಟೋ ಮೇಲೆ ಉರುಳಿದೆ.
ಇದೇ ವೇಳೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಐವರು ಮತ್ತು ಟ್ಯಾಂಕರ್‌ನಲ್ಲಿದ್ದ ಇಬ್ಬರು ಪವಾಡ ರೀತಿಯಲ್ಲಿ ಪಾರಾಗಿದ್ದಾರೆ. ಅಪಘಾತ ದಿಂದಾಗಿ ಚಿಕ್ಕಬಳ್ಳಾಪುರ-ಗೌರಿಬಿದ ನೂರುಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡು ವಂತಾಯಿತು.
ಇದನ್ನೂ ಓದಿ:ಕಬ್ಬಿನ ಆಸೆಗೆ ಪ್ರಾಣ ಕಳೆದುಕೊಂಡ ಬಾಲಕ
ರಸ್ತೆಯಲ್ಲಿ ಎಣ್ಣೆ ಬಿದ್ದಿದ್ದರಿಂದ ಕಣಿವೆ ಪ್ರದೇಶದಲ್ಲಿ ವಾಹನ ಚಲಾಯಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಚಿಕ್ಕಬಳ್ಳಾಪುರದಿಂದ ಮುಂಬೈಗೆ ತೆರಳುವ ಸರಕು ಸಾಗಾಣಿಕೆ ವಾಹನಗಳು ಇದೇ ಮಾರ್ಗ ಅನುಸರಿಸುತ್ತಾರೆ.
ಆದರೆ ಕಣಿವೆಪ್ರದೇಶದಲ್ಲಿ ತಿರುವುಗಳಲ್ಲಿ ಯಾವ ವಾಹನ ಗಳು ಬರುತ್ತಿವೆ ಎಂದು ಗೊತ್ತಾಗುವುದಿಲ್ಲ ಎನ್ನುತ್ತಾರೆ ವಾಹನ ಸವಾರರು.ರಾಷ್ಟ್ರೀಯ ಹೆದ್ದಾರಿಯಾಗಿರುವ ಈ ಮಾರ್ಗದಲ್ಲಿ ವಾಹನಗಳನ್ನು ಸುಲಭವಾಗಿ ಸಂಚರಿಸಲು ಅಧಿಕಾರಿಗಳು ಅನುಕೂಲ ಕಲ್ಪಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.