Advertisement

ವೈಟ್‌ಫೀಲ್ಡ್‌ನಲ್ಲಿ ತನಿಷ್ಕ್ ಹೊಸ ಮಳಿಗೆ

07:26 PM Apr 02, 2019 | Team Udayavani |

ಬೆಂಗಳೂರು: ಟಾಟಾ ಸಮೂಹದ ಹೆಸರಾಂತ ಬ್ರಾಂಡ್‌ ತನಿಷ್ಕ್ ರಿಟೇಲ್‌ ಜಾಲದ 11ನೇ ಜ್ಯುವೆಲರಿ ಮಳಿಗೆಯನ್ನು ನಗರದ ಹೊರವಲಯದ ವೈಟ್‌ಫೀಲ್ಡ್‌ನ ಹೂಡಿ ಬಳಿಯ ಪ್ರಸೀrಜ್‌ ಫೋರಂ ಶಾಂತಿನಿಕೇತನ್‌ ಮಾಲ್‌ನಲ್ಲಿ ತೆರೆಲಾಯಿತು.

Advertisement

ಶೋರೂಮ್‌ ಆನ್ನು ಮರ್ಕೆಂಡೈಸಿಂಗ್‌ ವಿಭಾಗದ ಮುಖ್ಯಸ್ಥೆ ಪಿಯಲಿ ಸೇನ್‌ ಮತ್ತು ಫ್ರಾಂಚೈಸಿ ಮುಖ್ಯಸ್ಥ ನಂದಕಿಶೋರ್‌ ಉದ್ಘಾಟಿಸಿದರು. ನಂತರ ಮಾತನಾಡಿದ ಪಿಯಲಿ ಸೇನ್‌ ಹೊಸ ಮಳಿಗೆ ಆರಂಭದ ಕೊಡುಗೆಯಾಗಿ ಮಾ.31ರವರೆಗೆ ಗ್ರಾಹಕರಿಗೆ ವಜ್ರಾಭರಣದ ಮೇಲೆ ಶೇ.20ರವರೆಗೆ ರಿಯಾಯಿತಿ ಹಾಗೂ ಉಚಿತ ಚಿನ್ನದ ನಾಣ್ಯ ನೀಡಲಾಯಿತು.

ಇತ್ತೀಚಿನ ಹೊಸ ಕಲೆಕ್ಷನ್‌ ಉತ್ಸವ, ಪ್ರೀನ್‌ ಜ್ಯುವೆಲರಿಗಳು ಹಾಗೂ ಇನ್ನಿತರ 2500ಕ್ಕೂ ಅಧಿಕ ವಿನ್ಯಾಸಗಳ ಚಿನ್ನಾಭರಣ, ವಜ್ರಾಭರಣ, ಸಾಲಿಟೈರ್‌ ಮತ್ತು ಪ್ಲಾಟಿನಂ, ವಿವಾಹ ವಿಶೇಷ ಒಡವೆಗಳ ದೊಡ್ಡ ಭಂಡಾರವೇ ಇಲ್ಲಿದೆ.

ವೈಟ್‌ಫೀಲ್ಡ್‌ ಭಾಗದ ಜನತೆಗೆ ಅತ್ಯುತ್ತಮ ಶಾಪಿಂಗ್‌ ಅನುಭವ ಹಾಗೂ ಗುಣಮಟ್ಟದ ಗ್ಯಾರಂಟೀಡ್‌ ಆಭರಣಗಳು ದೊರೆಯಲಿವೆ. ತನಿಷ್ಕ್ ದೇಶಾದ್ಯಂತ 174 ನಗರಗಳಲ್ಲಿ 283 ಎಕ್ಸ್‌ಕ್ಲೂಸಿವ್‌ ಬೊಟಿಕ್‌ಗಳನ್ನು ಹೊಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next